ಭಟ್ಕಳ ಪುರಸಭಾ ವ್ಯಾಪ್ತಿಯ ಆಸರಕೇರಿ ಶಾಸಕರ ಸರಕಾರಿ ಮಾದರಿ ಶಾಲೆಯ ಮುಂಭಾಗದಲ್ಲಿ ಒಳಚರಂಡಿ ಅವ್ಯವಸ್ಥೆ 

ಒಳಚರಂಡಿ ಸೋರಿಕೆಯಿಂದ ರೋಸಿಹೋದ ಸಾರ್ವಜನಿಕರು :

ಪ್ರತಿಭಟನೆಯ ಎಚ್ಚರಿಕೆ ನೀಡಿದ S D M C ಅಧ್ಯಕ್ಷ ವೆಂಕಟೇಶ ನಾಯ್ಕ

ಭಟ್ಕಳ : ಹಲವಾರು ವರ್ಷಗಳಿಂದ ತಾಲೂಕಿನ ಪುರಸಭಾ ವ್ಯಾಪ್ತಿಯ ಆಸರಿಕೇರಿ ಶಾಸಕರ ಮಾದರಿ ಶಾಲೆಯ ಮುಂಬಾಗದಲ್ಲಿ  ಒಳಚರಂಡಿಯ ಅವ್ಯವಸ್ಥೆಯ ಕಾರಣ ನಿರಂತರವಾಗಿ ನೀರು ಹರಿಯುತ್ತಿದ್ದು ಸ್ಥಳೀಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಇಡಾಗಿದ್ದಾರೆ  ಈ ಬಗ್ಗೆ ಪುರಸಭಾ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಈ ಅವ್ಯವಸ್ಥೆ ಹೀಗೆ ಮುಂದುವರೆದಲ್ಲೇ ಶಾಲಾ ವಿದ್ಯಾರ್ಥಿಗಳ ಸಹಯೋಗದಲ್ಲಿ ಪ್ರತಿಭಟನೆಗೆ  ನಡೆಸಲಾಗುವುದು  ಎಂದು  ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ವೆಂಕಟೇಶ್ ನಾಯ್ಕ ಎಚ್ಚರಿಕೆ ನೀಡಿದ್ದಾರೆ

ಹೌದು ವೀಕ್ಷಕರೇ ತಾಲೂಕಿನ ಪುರಸಭಾ ವ್ಯಾಪ್ತಿಯ ಆಸರೆ ಕೇರಿ ಶಾಸಕರ ಸರಕಾರಿ ಮಾದರಿ ಶಾಲೆಯ ಮುಂಬಾಗದಲ್ಲಿ ಲಕ್ಷಾಂತರ ವೆಚ್ಚದಲ್ಲಿ  ಹೊಸದಾಗಿ ನಿರ್ಮಾಣವಾಗಿರುವ  ರಸ್ತೆಯೊಂದರಲ್ಲಿ  ಹಳೆಯ ಒಳಚರಂಡಿ ತೆರವುಗೊಳಿಸದೇ  ಉಂಟಾದ ಅವ್ಯವಸ್ಥೆಯ ಕಾರಣ   ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ ಮುಖ್ಯವಾಗಿ ಇಲ್ಲಿ ಒಳಚರಂಡಿಯ ಸಮಸ್ಯೆಯನ್ನು ಬಗೆಹರಿಸದೆ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ ಹೊಸದಾದ ಒಳಚರಂಡಿ ನಿರ್ಮಾಣವಾದ ಕೂಡಲೇ ಹಳೆಯ ಒಳಚರಂಡಿಯನ್ನು ತೆರೆವುಗೊಳಿಸಬೇಕಾಗಿತ್ತು ಆದರೆ ಈ ಅಧಿಕಾರಿಗಳು ಬುದ್ಧಿವಂತನಿಗೆ ಮೂರು ಕಡೆ ವಾಸನೆ ಎನ್ನುವ ಹಾಗೆ  ಜನಸಾಮಾನ್ಯರಿಗೆ  ಕಾನೂನಿನ ಪಾಠವನ್ನು ಮಾಡುವ ಇವರು ಒಂದು ಹೊಸದಾದ ರಸ್ತೆ ನಿರ್ಮಾಣ ಮಾಡುವ ಮೊದಲು ರಸ್ತೆಯ ಕೆಳಭಾಗದಲ್ಲಿರುವ ಒಳಚರಂಡಿಯ ಅವ್ಯವಸ್ಥೆ ಅಥವಾ ತೆರವುಗೊಳಿಸಬೇಕಾಗಿರುವ ಒಳಚರಂಡಿಯನ್ನು ತೆರೆವು ಗೊಳಿಸಿ ಹೊಸದಾಗಿ ರಸ್ತೆ ನಿರ್ಮಾಣ ಮಾಡಬೇಕು ಎನ್ನುವ ಸಾಮಾನ್ಯ ಜ್ಞಾನವು ಇಲ್ಲದಂತೆ ವರ್ತಿಸುತ್ತಿದ್ದಾರೆ ಈಗ ಈ ಪುರಸಭೆ ಅಧಿಕಾರಿಗಳ ಬೇಜುವಾಬ್ದಾರಿತನದ ಹಿನ್ನೆಲೆಯಲ್ಲಿ ಲಕ್ಷಾಂತರ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ರಸ್ತೆಯೂ ಕೂಡ ಕೆಟ್ಟು ಹೋಗಿದೆ ಜೊತೆಗೆ ಶಾಲೆಯ ವಿದ್ಯಾರ್ಥಿಗಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ತಿರುಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ  ಈ ಸಮಸ್ಯೆಯನ್ನು ಈಗಾಗಲೇ ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ್ ನಾಯ್ಕ ಪುರಸಭಾ ಅಧಿಕಾರಿಗಳಿಗೆ ತಿಳಿಸಿದರು ಕೂಡ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಹೀಗೆ ಮುಂದುವರಿದಲ್ಲಿ ಮುಂದಿನ ದಿನದಲ್ಲಿ ಶಾಲಾ ಮಕ್ಕಳೊಂದಿಗೆ ರಸ್ತೆಗಿಳಿದು  ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ

ಈ ಬಗ್ಗೆ ನಮ್ಮ ವಾಹಿನಿಯು ಪುರಸಭಾ ಇಂಜಿನಿಯರ್ ಅವರನ್ನು ಸಂಪರ್ಕಿಸಿ ಮಾತನಾಡಿದಾಗ ಈ ಸಮಸ್ಯೆ ಸುಮಾರು ಹತ್ತು ವರ್ಷಗಳಿಂದ ನಿರ್ಮಾಣವಾಗಿದೆ ಅವ್ಯವಸ್ಥೆಗೆ ಒಳಗಾಗಿರುವ  ಒಳಚರಂಡಿಯು ಯಾವುದೇ ಪೈಪ್ ಲೈನ್ ಇಲ್ಲದೆ ನಿರುಪಯುಕ್ತವಾಗಿದ್ದು ಇದರ ಬದಲಿಗೆ ಹೊಸದಾಗಿ ಒಳಚರಂಡಿಯೊಂದು ಈಗಾಗಲೇ ನಿರ್ಮಾಣವಾಗಿದ್ದು ಈ ಹಳೆಯ ಚರಂಡಿ ತೆರವುಗೊಳಿಸುವ ಅಗತ್ಯ ಇದೆ  ನಮಗೆ ಈ ಬಗ್ಗೆ ಒಂದು ಅರ್ಜಿ ನೀಡಿದ್ದಲ್ಲಿ ಮಳೆಗಾಲದ ನಂತರ ನಾವು ಇದನ್ನು ತೆರವುಗೊಳಿಸುತ್ತೇವೆ  ಮಳೆಗಾಲದ ಈ ಸಂದರ್ಭದಲ್ಲಿ ಮತ್ತೆ ಇಲ್ಲಿ  ತೆರವು ಕಾರ್ಯಚರಣೆಗೆ ಮುಂದಾದರೆ ರಸ್ತೆ ವ್ಯವಸ್ಥೆ ಪುನಃ  ಹದಗೆಟ್ಟು ಹೋಗಿ ರಸ್ತೆಯ ಸಂಚಾರಕ್ಕೆ ಆತಂಕ ಎದುರಾಗುತ್ತದೆ ಎಂದು  ಹೇಳಿದರು

ಒಟ್ಟಾರೆ ಈಗಾಗಲೇ ಎಸ್ ಡಿ ಎಂ ಸಿ ಅಧ್ಯಕ್ಷರಾದ ವೆಂಕಟೇಶ್ ನಾಯ್ಕ  ಹೋರಾಟದ ಎಚ್ಚರಿಕೆ ಯನ್ನು ನೀಡಿದ್ದು ಪುರಸಭಾ ಅಧಿಕಾರಿಗಳು ಮುಂದಿನ ದಿನದಲ್ಲಿ ಈ ಅವ್ಯವಸ್ಥೆಗೆ ಯಾವ ಕ್ರಮವನ್ನು ಕೈಗೊಂಡಾರು ಎಂದು ಕಾದು ನೋಡಬೇಕಾಗಿದೆ

WhatsApp
Facebook
Telegram
error: Content is protected !!
Scroll to Top