ಭಟ್ಕಳದ  ಇಸ್ಪೀಟ್ ಅಡ್ಡ  ಭೂಮಿಕಾ ಫ್ರೆಂಡ್ಸ್ ರೀ ಕ್ರಿಯೇಷನ್ ಕ್ಲಬ್ನ ಮೇಲೆ ಪೊಲೀಸ್ ದಾಳಿ

ಕ್ಲಬ್ ನ ಮಾಲಿಕ ಮಾದೇವ್ ಗೋವಿಂದ ನಾಯ್ಕ ಸಹಿತ 25 ಮಂದಿಯ ಮೇಲೆ ಪ್ರಕರಣ ದಾಖಲು

ಭಟ್ಕಳ ತಾಲೂಕಿನ ಬೆಳ್ಕೆ  ಗ್ರಾಮದ ಕಲ್ಬಂಡಿ  ಭೂಮಿಕಾ ಫ್ರೆಂಡ್ಸ್ ರೀಕ್ರಿಯೆಶನ್ ಕ್ಲಬ್ ನ ಮಾಲಿಕ  ಮಾದೇವ ಗೋವಿಂದ ನಾಯ್ಕ್ ಈತನು ತನ್ನ ಕ್ಲಬ್ಬಿನಲ್ಲಿ ಅಕ್ರಮವಾಗಿ ಕ್ಲಬ್ಬಿನ ನಿಯಮಾವಳಿಗೆ ವಿರುದ್ಧವಾಗಿ   ಅಂಧರ್ ಬಾರ್ ಇಸ್ಪೀಟ್ ಆಟವನ್ನು ಆಡಿಸುತ್ತಿದ್ದನು ಈ ಬಗ್ಗೆ  ಪಕ್ಕ ಮಾಹಿತಿಯನ್ನು ಪಡೆದ ಗ್ರಾಮೀಣ ಪೊಲೀಸ್ ಠಾಣೆಯ  ಸಿಪಿಐ ಮಂಜುನಾಥ್ ಲಿಂಗ ರೆಡ್ಡಿ ಅವರು ಏಕಾಏಕಿ ದಾಳಿ ನಡೆಸಿ ಆರೋಪಿಯಾದ ಭೂಮಿಕ  ರೀ ಕ್ರಿಯೇಶನ್ ಕ್ಲಬ್ಬಿನ  ಮಾಲೀಕನಾದ ಮಾದೇವ ಗೋವಿಂದ ನಾಯ್ಕ  ಸಹಿತ 25 ಜನರ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ

ಹೌದು ವೀಕ್ಷಕರೇ  ಉತ್ತರ ಕನ್ನಡ  ಜಿಲ್ಲೆಯಾದ್ಯಂತ  ಅನಧಿಕೃತವಾಗಿ ಇಸ್ಪೀಟ್  ದಂಧೆಯನ್ನು ನಡೆಸುವುದು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಆದರೆ ತಾಲೂಕಿನಲ್ಲಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳು ಇಂತಹ ಇಸ್ಪೀಟ್ ಅಡ್ಡದ ಮೂಲಕ  ನಡೆಯುತ್ತಲೇ ಇದೆ  ಇದಕ್ಕೆ ಉತ್ತಮ ಉದಾಹರಣೆ ಎಂದರೆ  ತಾಲೂಕಿನ   ಬೆಳ್ಕೆ    ಗ್ರಾಮದ ಭೂಮಿಕಾ ರಿಕ್ರಿಯೇಶನ್ ಕ್ಲಬ್ಬಿನ ನಡೆಯುತ್ತಿದ್ದ ಅಕ್ರಮ ಕಾನೂನು ಬಾಹಿರ  ಇಸ್ಪೀಟ್ ದಂಧೆಯಾಗಿದೆ  ಈ ಹಿಂದೆಯೂ ಕೂಡ ಈ ರಿಕ್ರಿಯೆಶನ್ ಕ್ಲಬ್ಬಿನ ಮೇಲೆ ಪೊಲೀಸ್ ದಾಳಿಗಳು ನಡಸಿ ಪ್ರಕರಣ ದಾಖಸಿದ್ದಾರೆ  ಆದರೆ ಇದರ ಮಾಲಕ ಮಾತ್ರ ತನಗೂ ಪೊಲೀಸ್ ಇಲಾಖೆಯ ಇಂತಹ ಕ್ರಮಕ್ಕೂ ಏನೂ ಸಂಬಂಧವೇ ಇಲ್ಲ  ಎಂಬ ಉಡಾಫೆ ಇಂದ   ಅಕ್ರಮ ಇಸ್ಪೀಟ್ ದಂಧೆಗಳನ್ನು ನಡೆಸುತ್ತಲೇ ಬಂದಿದ್ದಾನೆ

ಈತ ಪುನಃ ತನ್ನ ದಂದೆಗೆ ಶುರುವಿಟ್ಟು ಕೊಂಡಿದ್ದು  ತನ್ನ ಕ್ಲಬ್ಬಿನ ಹೊರಗೆ ಸದಸ್ಯರಿಗೆ ಮತ್ತು ಸದಸ್ಯ ರಲ್ಲದವರಿಗೆ ಹಾಗೂ ಸಾರ್ವಜನಿಕರಿಗೆ  ಹಣದ ಬದಲಾಗಿ ಟೋಕನ್ ನೀಡಿ ತಾನು ನೀಡಿದ ಟೋಕನ್ ಮುಖಾಂತರ ಕ್ಲಬ್ಬಿನ ಒಳಗಡೆ ತಾನು ನೀಡಿದ  ಟೋಕನ್  ಬಳಸಿಕೊಂಡು ಅಕ್ರಮವಾಗಿ ಕಾನೂನು ಬಾಹಿರವಾಗಿ ರೀಕ್ರಿಯೇಶನ್ ಕ್ಲಬ್ಬಿನ ನಿಯಮಾವಳಿಯನ್ನು ಗಾಳಿಗೆ ತೂರಿ   ಇಸ್ಪೀಟ್ ದಂಧೆಯನ್ನು ನಡೆಸುತ್ತಿದ್ದನು ಈ ಬಗ್ಗೆ ಪಕ್ಕ ಮಾಹಿತಿಯನ್ನು ಪಡೆದ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ರೆಡ್ಡಿ ಅವರು ಏಕಾಏಕಿ ದಾಳಿ ನಡೆಸಿ  ಬಿಎನ್ಎಸ್ ಕಲಂ  112  ಹಾಗೂ 80 ಕೆಪಿ ಆಕ್ಟ್ ಅಡಿಯಲ್ಲಿ  ಕ್ಲಬ್ಬಿನ ಮಾಲಕ ಮಾದೇವ ಗೋವಿಂದ ನಾಯಕ್ ಸಹಿತ 25 ಜನರ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ

ಮುಖ್ಯವಾಗಿ ಮಾದೇವ್ ಗೋವಿಂದ ನಾಯ್ಕ ಕಲ್ಪಂಡಿ ಭಟ್ಕಳ  ಗಣಪತಿ ಈರಪ್ಪ ನಾಯ್ಕ್, ಕುಕನೀರ್ ಹೆಬ್ಳೆ ಪರಮೇಶ್ವರ ದುರ್ಗಪ್ಪ ನಾಯಕ್ ಶಿರಾಲಿ ಸಾರದ ಹೊಳೆ ದಿನೇಶ್ ಮಂಜುನಾಥ್ ನಾಯ್ಕ್ ಬೆಳಕೆ, ನಾಗರಾಜ್ ಮಂಜಯ್ಯ ಬಂಡಾರಿ ಬೆಳಕೆ, ವೆಂಕಟೇಶ್ ನಾರಾಯಣ ನಾಯಕ್ ಮುರುಡೇಶ್ವರ  ನಾಗಪ್ಪ ಗೋವಿಂದ ನಾಯ್ಕ್ ಕಲ್ಬಂಡಿ ಗೋವಿಂದ ಗಣಪತಿ  ಮೋಗೇರ್ ಅಳ್ವೆ ಕೊಡಿ, ಭರ್ಮಯ್ಯ ಮಾಸ್ತಪ್ಪ ನಾಯ್ಕ್ ಮುಂಡಳ್ಳಿ, ಶನಿಯಾರ ನಾರಾಯಣ ನಾಯ್ಕ್ ಗೋಳಿಬೀಳೂರು,  ಶ್ರೀಧರ್ ತಿಮ್ಮಪ್ಪ ಮೊಗೇರ್, ಬಾಲಚಂದ್ರ ಕಾರ್ವಿ, ವಸಂತ್ ಚಳ್ಳ ಮೊಗೇರ್, ಶಿವರಾಜ್ ವೆಂಕಟ್ರಮಣ ನಾಯ್ಕ್ ಮುಂಡಳ್ಳಿ, ನಾಗರಾಜ್ ಲಚ್ಚಮಯ್ಯ ನಾಯ್ಕ್ ಮುಂಡಳ್ಳಿ, ಪಾಂಡು ಮಂಜು ಮೊಗೇರ್ ಹೆರ್ತಾರ್, ಶ್ರೀಧರ್ ಜಟ್ಟ ನಾಯ್ಕ್ ಮುರುಡೇಶ್ವರ, ಹರೀಶ್ ದಯಾನಂದ ಮೊಗೆರ್ ಮುಂಡಳ್ಳಿ ನಾಗೇಶ ದುರ್ಗಪ್ಪ ನಾಯ್ಕ, ಮುಂಡಳ್ಳಿ    ನೀರ್ಗದ್ದೆ, , ಪ್ರಶಾಂತ್ ಶೇಖರ್ ಶೇಟ್ ಬೈಂದೂರು, ನಾರಾಯಣ ಕುಪ್ಪಯ್ಯ ನಾಯ್ಕ  ಆಸರಗೇರಿ ಭಟ್ಕಳ ಯೋಗೇಶ್ ವೆಂಕಟರಮಣ ಮೊಗೇರ್ ಮಾವಿನಕುರ್ವೆ  ಭಟ್ಕಳ, ಆನಂದ್ ಮಾದೇವ ನಾಯ್ಕ ಬೆಳ್ನಿ, ಭಾಸ್ಕರ ಬೈರಪ್ಪ ನಾಯ್ಕ  ಶಿರಾಲಿ, ರವಿ ವೆಂಕಟರಮಣ ನಾಯ್ಕ  ಮುಟ್ಟಳ್ಳಿ  ಹೀಗೆ ಬರೋಬ್ಬರಿ 25 ಜನರ ಮೇಲೆ ಪ್ರಕರಣ ದಾಖಲಾಗಿದೆ

ಈ ಸಂದರ್ಭದಲ್ಲಿ  2000 ನಗದು, ಆಟದ ಕಾರ್ಡುಗಳು, ಟೋಕನ್,  ಕ್ಲಬ್ ಮೆಂಬರ್ಸ್ ಲೆಟರ್, ವೈಟ್ ಕಲರ್ ಹುಂಡೈ ವೆರ್ನ ಕಾರು, ಬ್ಲೂ ಕಲರ್ ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಬಜಾಜ್ ಆಟೋರಿಕ್ಷಾ, ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್, ಹೀಗೆ ವಿವಿಧ ತರದ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ

ಮುಖ್ಯವಾಗಿ ಈ ಭೂಮಿಕ ರೀ ಕ್ರಿಯೇಶನ್ ಕ್ಲಬ್ ನ ಮೇಲೆ ಪೊಲೀಸರು ಅನೇಕ ಬಾರಿ ಅಕ್ರಮ ಇಸ್ಪೀಟ್ ಜೂಜಾಟ ನಡೆಸುತ್ತಿರುವ ಸಂಬಂಧ   ದಾಳಿಗಳನ್ನು ನಡೆಸಿ ಪ್ರಕರಣ ದಾಖಲಿಸಿರುತ್ತಾರೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡ  ಈ ಭೂಮಿಕ ರೀ ಕ್ರಿಯೇಷನ್ ಕ್ಲಬ್ಬಿನಲ್ಲಿ ಸತತವಾಗಿ ಅಕ್ರಮ ಇಸ್ಪೀಟ್ ದಂಧೆಯು ನಡೆಯುತ್ತಿರುವುದನ್ನು ಗಮನಿಸಿ ಅದರ ಲೈಸೆನ್ಸ್ ಅನ್ನು ರದ್ದು ಪಡಿಸುವಂತೆ ಡೆಪ್ಯುಟಿ  ರಿಜಿಸ್ಟರ್ಗೆ  ನೋಟಿಸ್ ಅನ್ನು ಕೂಡ ನೀಡಿರುತ್ತಾರೆ ಆದರೆ ಇದಕ್ಕೆ ಸಂಬಂಧಪಟ್ಟ ರಿಜಿಸ್ಟರ್ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೇನೋ ಎಂಬಂತೆ ಕುಳಿತಿರುವುದು ಮಾತ್ರ ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ ಹಾಗಾದರೆ ಈ D. R ಗೂ ಈ ಅಕ್ರಮ ಇಸ್ಪೀಟ್ ಅಡ್ಡದ ಮಾಲಕನಿಗೂ  ಇರುವ ಸಂಬಂಧವಾದರೂ ಏನು  ಈ ಡಿಪ್ಯೂಟಿ ಡೈರೆಕ್ಟರ್ ಈ ಮಾಲೀಕನಿಂದ ಏನಾದರೂ ಸಂಥಿಂಗ್ ಅನ್ನು ಪಡೆಯುತ್ತಿದ್ದಾನೆಯೇ   ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ

ಒಟ್ಟಾರೆ  ಭಟ್ಕಳ ತಾಲೂಕಿನ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ರೆಡ್ಡಿ ಅವರ ದಕ್ಷ ಹಾಗೂ ಪ್ರಾಮಾಣಿಕ ಕಾರ್ಯ ಪ್ರವೃತ್ತಿಯ ಬಗ್ಗೆ ತಾಲೂಕಿನಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ 

WhatsApp
Facebook
Telegram
error: Content is protected !!
Scroll to Top