ಅದ್ದೂರಿಯಿಂದ ಪ್ರಾರಂಭವಾದ ಶ್ರೀ ಹನುಮಂತ ಮತ್ತು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಉತ್ಸವ

ಉತ್ಸವದಲ್ಲಿ ಭಾಗಿಯಾದ ಸಾವಿರಾರು ಭಕ್ತರು

ಭಟ್ಕಳ ತಾಲೂಕಿನ ಮಣ್ಕುಳಿಯ ಪುರಾಣ ಪ್ರಸಿದ್ಧ ಸ್ಥಳವಾದ ಶ್ರೀ ಹನುಮಂತ ಹಾಗೂ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮ ಹಾಗು ಬ್ರಹ್ಮಕಳೋತ್ಸವವು ಬುದುವಾರದ ಇಂದು ಅದ್ದೂರಿಯಿಂದ ಪ್ರಾರಂಭವಾಗಿದೆ

ಹೌದು ವೀಕ್ಷಕರೆಯಲ್ಲಿ ಪುರಾಣ ಪ್ರಸಿದ್ಧ ಸ್ಥಳವೆಂದು ಹೆಸರುವಾಸಿಯಾಗಿರುವ ಶ್ರೀ ಹನುಮಂತ ದೇವರು ಹಾಗೂ ಲಕ್ಷ್ಮೀ ನಾರಾಯಣ ದೇವರುಗಳು ತಾಲೂಕಿನ ಮನಗೂಳಿಯಲ್ಲಿ   ನೆಲೆ ನಿಂತಿದ್ದು ಈ ದೇವಸ್ಥಾನದ ಪುನರ್ಪ್ರತಿಷ್ಠಾಪನೆ ದಿನಾಂಕ 7ರಿಂದ 11ರ ವರೆಗೆ ನಡೆಯಲಿದ್ದು ಇಂದು ಬುಧವಾರ  ಪುನರ್ ಪ್ರತಿಷ್ಠಾಪನೆಯ ದೈವ ಕಾರ್ಯದ ಕೈಂಕರ್ಯಗಳು ಬೆಳಿಗ್ಗೆ ಎಂಟರಿಂದ ಪ್ರಾರಂಭವಾಗಿದ್ದು ಪ್ರಾರಂಭವಾಗಿದೆ  ದೈವ ಕಾರ್ಯಗಳು ಸಂಜೆ ನಾಲ್ಕರವರೆಗೆ ಸಾಂಗವಾಗಿ ನಡೆದಿದೆ  ಸಂಜೆ 4:30 ರಿಂದ ಬಜನಾ ಕಾರ್ಯಕ್ರಮ  ಸಂಜೆ ಐದು ಮೂವತ್ತಕ್ಕೆ ಗಾಣಿಗ ಸಮಾಜದ ಬಾಂಧವರಿಂದ  ಮತ್ತು ಸ್ಥಳೀಯ ಪ್ರತಿಭೆಗಳಿಂದ ಸಂಗೀತ ನೃತ್ಯ ವೈಭವ ನಡೆಯಲಿದೆ  . ಈ ಬಗ್ಗೆ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಭಾಷ್ ಎಮ್ ಶೆಟ್ಟಿಯವರು ಮಾತನಾಡಿ ಇಂದಿನಿಂದ ನಮ್ಮ ಸಮಾಜದ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೆಯೇ ಬ್ರಹ್ಮಕಲಸೋತ್ಸವ ಕಾರ್ಯಕ್ರಮವಾಗಿದೆ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಪಾಲ್ಗೊಂಡ ಪ್ರತಿಯೊಬ್ಬರು ದೈವ ಕೃಪೆಗೆ ಪಾತ್ರರಾಗಿದ್ದಾರೆ ನಮಗೆ ಸಾರ್ವಜನಿಕರಿಂದ ಇತರ ಸಮಾಜದವರಿಂದ ಉತ್ತಮ ಸಹಕಾರ ದೊರೆತಿದೆ ನಾವು ಎಲ್ಲರಿಗೂ ಆಭಾರಿಯಾಗಿದ್ದೇವೆ ಎಂದು ಹೇಳಿದರು

WhatsApp
Facebook
Telegram
error: Content is protected !!
Scroll to Top