ಭಟ್ಕಳ ಮೀಡಿಯಾ ಕಪ್‌ 2025 ಕ್ಕೆ ದಿನಗಣನೆ : ಸಕಲ ಸಿದ್ದತೆ ಮಾಡಿಕೊಳ್ಳುತ್ತಿರುವ ಮಾಧ್ಯಮ ಮಿತ್ರರು

ಮೀಡಿಯಾ ಕಪ್ ನ ಸಂಪೂರ್ಣ ಪ್ರಾಯೋಜಕತ್ವವನ್ನು ವಹಿಸಿಕೊಂಡಿರುವ ಸಚಿವ ಸುಪುತ್ರಿ ಬೀನಾ ವೈದ್ಯ

ಪತ್ರಕರ್ತರ ಕ್ರಿಕೇಟ್‌ ಪಂದ್ಯಾವಳಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಸಚಿವ ಮಂಕಾಳು ವೈದ್ಯ

ಭಟ್ಕಳ : ತಾಲೂಕಿನಲ್ಲಿ ಪ್ರಪ್ರಥಮ ಭಾರಿಗೆ ಅಂತರ್‌ ಜಿಲ್ಲಾ ಮಟ್ಟದ ಭಟ್ಕಳ ಮೀಡಿಯಾ ಕಪ್‌ 2025 ಏಪ್ರೀಲ್‌ 26 ಮತ್ತು 27 ರಂದು ನಡೆಯಲಿದ್ದು ಈ ಮೀಡಿಯಾ ಕಪ್ಪಿನ ಸಂಪೂರ್ಣ ಕರ್ಚುವೆಚ್ಚವನ್ನು ಸಚಿವರ ಪುತ್ರಿ ಬೀನಾ ವೈದ್ಯ ಅವರು ವಹಿಸಿಕೊಂಡಿದ್ದು ಭಟ್ಕಳ ಮೀಡಿಯಾ ಕಪ್‌ 2025 ಗೆ ದಿನಗಣನೆ ನಡೆಯುತ್ತಿದೆ

ಭಟ್ಕಳದ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ತಾಲೂಕ ಕ್ರೀಡಾಂಗಣದಲ್ಲಿ ಅಂತರ್‌ಜಿಲ್ಲಾ ಮಟ್ಟದ ಭಟ್ಕಳ ಮೀಡಿಯಾ ಕಪ್‌ 2025 ಹೆಸರಿನ ಕ್ರೀಕೇಟ್‌ ಪಂದ್ಯಾವಳಿ ನಡೆಲಿದೆ ಈಗಾಗಲೆ ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘವು ಬೀರುಸಿನ ಸಿದ್ದತೆ ಮಾಡಿಕೊಳ್ಳುತ್ತಿದೆ ಕ್ರೀಕೇಟ್‌ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಸಚಿವ ಮಂಕಾಳು ವೈದ್ಯರು ತಮ್ಮ ಸುಪುತ್ರಿ ಬೀನಾ ಅವರ ಹುಟ್ಟುಹಬ್ಬದ ಸಂದರ್ಬದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ್ದರು ಸಚಿವರು ಮೊದಲಿಂದಲೂ ಪತ್ರಿಕೆ ಮತ್ತು ಮಾದ್ಯಮಗಳಿಗೆ ಪ್ರೋತ್ಸಾಹವನ್ನು ನೀಡುತ್ತಲೆ ಬಂದಿದ್ದು ನಾಡಿದ್ದು ನಡೆಯಲಿರುವ ಪತ್ರಕರ್ತರ ಕ್ರೀಕೇಟ್‌ ಪಂದ್ಯಾವಳಿಯ ಸಂಪೂರ್ಣ ಕರ್ಚುವೆಚ್ಚಗಳನ್ನು ತಮ್ಮ ಮಗಳು ಬಿನಾ ಅವರ ಮೂಲಕ ವಹಿಸಿಕೊಳ್ಳುವುದರ ಮೂಲಕ ಪಂದ್ಯಾವಳಿಯ ಸಂಪೂರ್ಣ ಪ್ರಯೋಜಕತ್ವವನ್ನು ವಹಿಸಿಕೊಂಡಿದ್ದಾರೆ ಈ ಹಿಂದೆಯು ಕೂಡ ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಸ್ಥಾಪನೆಯ ಸಂದರ್ಬದಲ್ಲಿ ಸಚಿವರು ಲಕ್ಷಾಂತರ ರೂ ಗಳನ್ನು ದೇಣಿಗೆಯನ್ನು ನೀಡುವುದರ ಮೂಲಕ ಸಚಿವರು ಪತ್ರಕರ್ತರ ಬೆನ್ನಿಗೆ ನಿಂತಿರುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳ ಬಹುದಾಗಿದೆ

ಕ್ರೀಕೇಟ್‌ ಪಂದ್ಯಾವಳಿಯ ಬಗ್ಗೆ ಸಚಿವ ಮಂಕಾಳು ವೈದ್ಯ ಮಾತನಾಡಿ ಭಟ್ಕಳದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಪತ್ರಕರ್ತರ ಅಂತರ್‌ ಜಿಲ್ಲಾ ಕ್ರೀಕೇಟ್‌ ಪಂದ್ಯಾವಳಿಯು ನಡೆಯುತ್ತಿದ್ದು ಪತ್ರಿಕಾ ಮತ್ತು ಮಾಧ್ಯಮ ಮಿತ್ರರು ತಯಾರಿಯನ್ನು ನಡೆಸುತ್ತಿದ್ದಾರೆ ಇದು ಪತ್ರಕರ್ತರ ಬಿಡುವಿಲ್ಲದ ಕೆಲಸದ ಒತ್ತಡದ ಮದ್ಯ ರಿಲ್ಯಾಕ್ಸ ಮಾಡಲು ಒಂದು ಉತ್ತಮ ಮಾರ್ಗವಾಗಿರುತ್ತದೆ ಇದಕ್ಕೆ ನನ್ನ ಸಂಪೂರ್ಣ ಸಹಕಾರ ಇರುತ್ತದೆ ಸಾರ್ವಜನಿಕರು ಈ ಪಂದ್ಯಾವಳಿಯನ್ನು ವಿಕ್ಷೀಸಿ ಮನೊರಂಜನೆಯನ್ನು ಪಡೆಯಬೇಕು ಎಂದು ಹೇಳಿದರು

ಒಟ್ಟಾರೆ ಭಟ್ಕಳದ ಇತಿಹಾಸದಲ್ಲಿ ಮಾಧ್ಯಮ ಮತ್ತು ಪತ್ರಿಕಾ ಮಿತ್ರರ ಈ ಪಧ್ಯಾವಳಿ ಯಶಸ್ಸನ್ನು ಕಾಣಲಿ ಎಂಬುವುದು ಭಟ್ಕಳಿಗರ ಆಶಯವಾಗಿದೆ

WhatsApp
Facebook
Telegram
error: Content is protected !!
Scroll to Top