ಭಟ್ಕಳ :ಎಪ್ರಿಲ್ 12 ರಿಂದ 13 ತನಕ ನಡೆಯವ ಕದಂಬೋತ್ಸವದ ಅಂಗವಾಗಿ ಗುಡ್ನಾಪುರದಿಂದ ಆರಂಭವಾದ ಕದಂಬ ಜ್ಯೋತಿ ರಥವು ಶಿವಮೊಗ್ಗ ಜಿಲ್ಲೆಯ ಸೊರಬ ಮತ್ತು ಸಾಗರದಿಂದ ಜಿಲ್ಲೆಯ ಮೂಲಕ ಇಂದು ಭಟ್ಕಳಕ್ಕೆ ಆಗಮಿಸಿದ್ದು, ಇಲ್ಲಿನ ಸಂಶುದ್ದೀನ್ ಸರ್ಕಲ ಬಳಿ ಸ್ವಾಗತಿಸಿ ಬರಮಾಡಿಕೊಂಡ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಪೂಜೆ ಸಲ್ಲಿಸಿದರು.
ಗುಡ್ನಾಪುರದಿಂದ ಎಪ್ರಿಲ್ 10 ರಂದು ಆರಂಭವಾದ ಕದಂಬ ಜ್ಯೋತಿ ರಥಯಾತ್ರೆಯೂ ಹಾನಗಲ್, ಅಕ್ಕಿಆಲೂರು, ಸೊರಬ, ಸಾಗರ, ಕಾರ್ಗಲ್, ಹಾಡುವಳ್ಳಿ ಮಾರ್ಗವಾಗಿ ಸುಮಾರು 380 ಕಿ.ಮೀ. ವ್ಯಾಪ್ತಿಯಲ್ಲಿ ಸಂಚಾರ ಮಾಡಿದ್ದು ಜಿಲ್ಲೆಯ ಗಡಿಭಾಗವಾದ ಭಟ್ಕಳಕ್ಕೆ ಆಗಮಿಸಿತು. ಕದಂಬ ಜ್ಯೋತಿ ರಥಯಾತ್ರೆಯ ನಿಮಿತ್ತ ವಿಶೇಷ ವಾಹನವನ್ನು ಸುಂದರವಾಗಿ ತಯಾರಿಸಲಾಗಿದ್ದು, ಸಾರ್ವಜನಿಕರಿಗೆ ಆಕರ್ಷಣೆಯ ಕೇಂದ್ರವಾಗಿತ್ತು ಕದಂಬ ಜ್ಯೋತಿ ರಥಯಾತ್ರೆಗೆ ಪೂಜೆ ಸಲ್ಲಿಸಿದ ತಹಸೀಲ್ದಾರ ರಥಯಾತ್ರೆಯ ಕುರಿತು ಮಾತನಾಡಿದರು, “ಕದಂಬ ಜ್ಯೋತಿ ರಥಯಾತ್ರೆಯೂ ಬಳಿಕ ಮುರ್ಡೇಶ್ವರಕ್ಕೆ ತೆರಳಿ ಅಲ್ಲಿಂದ ಇಡಗುಂಜಿ ತೆರಳಿ,
ಕುಮಟಾ ದಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದು,
ನಂತರ ಶನಿವಾರ ವಾರದಂದು ಮತ್ತೆ ರಥಯಾತ್ರೆಯೂ ಬನವಾಸಿಗೆ ತೆರಳಲಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಕೆ ಗೀತಾ ಹೆಗಡೆ,ತಹಶಿಲ್ದಾರ ಕಛೇರಿಯ ಶಿರಸ್ತೇದಾರ ಪ್ರವೀಣ
ತಾಲ್ಲೂಕು ಶಿಕ್ಷಣ ಪರಿವೀಕ್ಷಕ ಪ್ರಕಾಶ ಶಿರಾಲಿ
ತಾಲೂಕಾ ಪಂಚಾಯತ ಲೆಕ್ಕಾಧಿಕಾರಿ ರಾಜೇಶ ಮಹಾಲೆ,ಪುರಸಭೆ ವವ್ಯಸ್ಥಾಪಕರಾದ ವೆಂಕಟೇಶ ನಾಯ್ಕ,ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ತಹಶಿಲ್ದಾರರ ಹಾಗೂ ಎ ಸಿ .ಕಚೇರಿ ಸಿಬ್ಬಂದಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿ ಉಪಸ್ಥಿತಿ ಇದ್ದರು.