“ಕಾರ್ಯಕರ್ತರ ಶ್ರಮವಿಲ್ಲದೆ ಯಾವುದೇ ಪಕ್ಷ ಪ್ರಬಲವಾಗಲಾರದು:ಸಚಿವ ಮಾಂಕಾಳು ವೈದ್ಯಾ
ಭಟ್ಕಳ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಭಟ್ಕಳ ಹಾಗೂ ಮಂಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆ ಇಂದು ಶಿರಾಲಿಯ ಸಾರದಹೊಳೆ ಶ್ರೀ ನಾಮಧಾರಿ ಸಭಾಭವನದಲ್ಲಿ ನಡೆಯಿತು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ತಮ್ಮ ಬೂತ್‌ಗಳಲ್ಲಿ ಶ್ರಮಿಸುತ್ತಿರುವ ನಿಜವಾದ ನಾಯಕರು ಕಾರ್ಯಕರ್ತರು ಎಂಬ ವಿಷಯವನ್ನು ಈ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಕೇವಲ ಚುನಾವಣೆಗೆ ಮಾತ್ರ ಕಾರ್ಯಕರ್ತರನ್ನು ಸೀಮಿತಗೊಳಿಸದೆ, ಚುನಾವಣೆ ಬಳಿಕವೂ ಅವರ ಸಲಹೆ-ಸೂಚನೆಗಳನ್ನು ಆಲಿಸಿ, ಸರ್ಕಾರ ನೀಡಿದ ಭರವಸೆಗಳ ಕುರಿತು ಚರ್ಚಿಸಲಾಯಿತು.
ಮಂತ್ರಿಗಳ ಹೇಳಿಕೆ:
ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, “ಕಾರ್ಯಕರ್ತರ ಶ್ರಮವಿಲ್ಲದೆ ಯಾವುದೇ ಪಕ್ಷ ಪ್ರಬಲವಾಗಲಾರದು. ನಮ್ಮ ಸರ್ಕಾರ ನೀಡಿದ ಭರವಸೆಗಳನ್ನು ನೆರವೇರಿಸಲು ನಾವು ಬದ್ಧರಾಗಿದ್ದೇವೆ. ನಿಮ್ಮ ಅಭಿಪ್ರಾಯಗಳು, ಸೂಚನೆಗಳು ನಮ್ಮ ಸರ್ಕಾರಕ್ಕೆ ಬಹಳ ಪ್ರಾಮುಖ್ಯ. ಸ್ಥಳೀಯ ಅಭಿವೃದ್ಧಿ ಕಾರ್ಯಗಳಲ್ಲಿ ಕಾರ್ಯಕರ್ತರ ಪಾತ್ರ ಅತೀಮುಖ್ಯ” ಎಂದು ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಾಯಿಗಾಂವ್ಕರ್, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ಮಂಕಿ ಬ್ಲಾಕ್ ಅಧ್ಯಕ್ಷ ಗೋವಿಂದ್ ನಾಯ್ಕ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಮೋಘ ಸಿರ್ಸಿಕರ್, ಜಿಲ್ಲಾ ಉಪಾಧ್ಯಕ್ಷ ರಾಮ ಮೊಗೇರ, ಭಟ್ಕಳ ಮಹಿಳಾ ಬ್ಲಾಕ್ ಅಧ್ಯಕ್ಷ ನಯನಾ ನಾಯ್ಕ, ಮಂಕಿ ಮಹಿಳಾ ಬ್ಲಾಕ್ ಅಧ್ಯಕ್ಷ ಉಷಾ ನಾಯ್ಕ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದರು.
ಸಭೆಯಲ್ಲಿ ತಂಜಿಮ್ ಸಂಸ್ಥೆಯ ಅಧ್ಯಕ್ಷ ಇನಾಹಿತುಲ್ ಶಾಬಂದ್ರಿ, ಭಟ್ಕಳ ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜು ನಾಯ್ಕ, ಹೊನ್ನಾವರ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಣ್ಣಪ್ಪ ನಾಯ್ಕ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.