ತಂದೆಯಂತೆ ದಾನ ಧರ್ಮದಲ್ಲಿ ತೊಡಗಿಕೊಂಡಿರುವ ಸಚಿವ ಮಾಂಕಾಳು ವೈದ್ಯರ ಪುತ್ರಿ
ಭಟ್ಕಳ : ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಜನಪ್ರಿಯ ಸಚಿವರಾದ ಮಾಂಕಾಳು ವೈದ್ಯರ ಸುಪುತ್ರಿ ಬೀನಾ ವೈದ್ಯಾ ತನ್ನ ತಂದೆಯಂತೆ ದಾನ ಧರ್ಮಗಳಲ್ಲಿ ತೊಡಗಿಕೊಂಡಿದ್ದು ತಂದೆಯ ಅಣತಿಯಂತೆ ಕ್ಷೇತ್ರದಾದ್ಯoತ ಅಮಾಯಕರ ಅಸಹಾಯಕರಿಗೆ ಮತ್ತು ಮಠ ಮಂದಿರಗಳಿಗೆ ದಾನ ಧರ್ಮ ಮಾಡುತ್ತಿರುವದು ಕಂಡು ಬರುತ್ತಿದೆ
ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಯಾವುದೇ ಒಳ್ಳೆತನ ಅಥವಾ ಹೃದಯ ವೈಶಾಲ್ಯತೆ ಕೇವಲ ತೋರಿಕೆಯಲ್ಲಿದ್ದರೆ ಸಾಲದು ಅದು ಮನಸ್ಸಿಂದ ಬರಬೇಕಾಗುತ್ತದೆ ಇಂತಹ ಒಳ್ಳೆತನ ನಮ್ಮ ಕ್ಷೇತ್ರದ ಸಚಿವರಾದ ವೈದ್ಯರ ಪುತ್ರಿ ಬೀನಾ ಅವರಲ್ಲಿ ಇದೆ ಅದು ತಂದೆಯಂತೆ ಹುಟ್ಟಿನಿಂದಲೇ ರಕ್ತಗತವಾಗಿ ಬಂದಿದೆ ಈಕೆಯ ಮನಸ್ಸು ಯಾವಾಗಲೂ ಬಡವರ ಪರ ಮಿಡಿಯುತ್ತಿರುತ್ತದೆ
ಇದಕ್ಕೆ ನಾವು ಹಲವು ಉದಾಹರಣೆಗಳನ್ನು ನೀಡ ಬಹುದಾಗಿದೆ
ಮುಖ್ಯವಾಗಿ ಹೊನ್ನಾವರ ತಾಲೂಕಿನ ಮಾವಿನಕುರ್ವಾ ಗ್ರಾಮ ಪಂಚಾಯತದ ರಾಮಗೌಡ ಅವರ 6 ತಿಂಗಳ ಮಗು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಯ ವೆಚ್ಚಕ್ಕಾಗಿ 50 ಸಾವಿರ ರೂಪಾಯಿ ಹಣವನ್ನು ಕುಟುಂಬಸ್ಥರಿಗೆ ನೀಡಿ ಧೈರ್ಯ ತುಂಬಿದರು
ತಾಲೂಕಿನ ಮುಂಡಳ್ಳಿ ಮೊಗೇರಕೆರಿಯಲ್ಲಿ ನಡೆದ ಶ್ರೀ ನಾಗ ಚೌಡೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬೀನಾ ವೈದ್ಯ. ₹1 ಲಕ್ಷ ರೂಪಾಯಿ ಹಣವನ್ನು ಆಡಳಿತ ಕಮಿಟಿಗೆ ಹಸ್ತಾಂತರ ಮಾಡಿದ್ದಾರೆ,
ಶ್ರೀ ಜಟ್ಟಿಗ ದೇವಸ್ಥಾನ ಮುಟ್ಟಳ್ಳಿ ಗೆ ಭೇಟಿ ನೀಡಿ ದೇವಸ್ಥಾನಕ್ಕೆ 50000ಸಾವಿರ ಹಣ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾಗುತ್ತಾರೆ
ವೀಕ್ಷಕರೇ ಇದು ಕೇವಲ ಉದಾಹರಣೆ ಅಷ್ಟೇ ಇಂತಹ ಅನೇಕ ದಾನ ಧರ್ಮಗಳಲ್ಲಿ ನಮ್ಮ ಬೀನಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಕ್ಷೇತ್ರದಲ್ಲಿ ಸಚಿವರನ್ನು ಬಿಟ್ಟರೆ ಅವರ ಪುತ್ರಿ ಬೀನಾ ವೈದ್ಯಾ ಅವರೇ ದಾನ ಧರ್ಮದಲ್ಲಿ ಮುಂದಿದ್ದಾರೆ ಎನ್ನುವುದು ಕ್ಷೇತ್ರದ ಜನರ ಮಾತಾಗಿದೆ
ಸಂಸ್ಕಾರಗಳು ಹುಟ್ಟಿನಿಂದಲೇ ಬೆಳೆಸಿಕೊಂಡು ಬಂದಿರಬೇಕು ಸಚಿವರು ತಮ್ಮ ಪುತ್ರಿಯಲ್ಲಿ ಸಂಸ್ಕಾರವನ್ನು ಹುಟ್ಟಿನಿಂದಲೇ ಬೆಳೆಸಿದ್ದಾರೆ ಈ ಯುವತಿಗೆ ಮುಂದಿನ ಭವಿಷ್ಯ ರಾಜಕೀಯ ಕ್ಷೇತ್ರದಲ್ಲಿ ಉಜ್ವಲ ವಾಗಿರಲಿದೆ ಎನ್ನುವುದು ಜನಸಾಮಾನ್ಯರ ಮಾತಾಗಿದೆ
ಭಟ್ಕಳ ಹೊನ್ನಾವರ ತಾಲೂಕಿನ ಪ್ರಜಾ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಧೀಮಂತ ನಾಯಕೀ ಬೀನಾ ವೈದ್ಯಾ ಅವರಿಗೆ ಯಾಗಲು ಒಳ್ಳೆಯದೇ ಆಗಲಿ ಎನ್ನುವುದು ಕ್ಷೇತ್ರದ ಜನತೆಯ ಮಾತಾಗಿದೆ