ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ ಸಮೀರ್‌ ಎಂ ಡಿ ವಿಡಿಯೋ ಎಷ್ಟು ಪ್ರಸ್ತುತ?

ಸಮೀರ್‌ ಉದ್ದೇಶ ಏನಿತ್ತು : ಆತನ ಮಾತುಗಳು ಒಂದು ಧರ್ಮವನ್ನು ಗುರಿಯಾಗಿಸಿತ್ತೆ:

ಉತ್ತರ ಕನ್ನಡ : ಕರ್ನಾಟಕ ರಾಜ್ಯದಾಧ್ಯಂತ ಸೌಜನ್ಯ ಪ್ರಕರಣದ ಬಗ್ಗೆ ಮುಸ್ಲಿಂ ಕೋಮಿನ ವ್ಯಕ್ತಿಯೋರ್ವ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹರಿಯ ಬಿಟ್ಟಿರುವುದು ರಾಜ್ಯಧಾಧ್ಯಂತ ಸಂಚಲನವನ್ನುಉಂಟುಮಾಡಿದೆ ಈ ವಿಡಿಯೋವನ್ನು ಬಲಪಂತಿಯರು ಹಿಂದೂ ವಿರೋದಿ ಎಂದು ವಿರೋದಿಸಿದರೆ ಎಡಪಂತಿಯರು ಇದು ಸೌಜನ್ಯ ಎಂಬ ಅಮಾಯಕ ಹೆಣ್ಣು ಮಗಳಿಗೆ ನ್ಯಾಯಕೋಡಿಸುವ ಉದ್ದೇಶವನ್ನು ಹೊಂದಿತ್ತು ಎಂದು ಸಮರ್ಥಿಸುತ್ತಿದ್ದಾರೆ ಆದರೆ ನಾವು ಇಲ್ಲಿ ಬಲ ಮತ್ತು ಎಡ ಎಂಬ ಎರಡು ಪಂಥಗಳ ವಾದವನ್ನು ಬಿಟ್ಟು ನೈಜ್ಯ ಸಂಗತಿಗಳ ಬಗ್ಗೆ ಗಮನಹರಿಸೋಣ

ವಿಕ್ಷಕರೆ : ನಾವು ಇಲ್ಲಿ ಯಾರನ್ನು ಸಮರ್ಥಿಸಿಕೊಳ್ಳಲು ನಿಂತಿಲ್ಲ ನಾವು ಇದರ ಎರಡು ಮಗ್ಗಲಿನಲ್ಲೂ ಯೋಚಿಸೋಣ ಇಲ್ಲಿ ಸಮೀರ್‌ ಎಂ ಡಿ ಎಂಬ ಯುವಕ ಸೌಜನ್ಯ ರೇಪ್‌ ಮತ್ತು ಮರ್ಡರ್‌ ಪ್ರಕರಣದ ಬಗ್ಗೆ ಒಂದು ಸ್ಟೋರಿಯನ್ನು ಮಾಡುತ್ತಾರೆ ಅದರ ಉದ್ದೇಶ ಸೌಜನ್ಯಳಿಗಾದ ಅನ್ಯಾಯದ ವಿರುದ್ದ ಆಕ್ರೋಶವನ್ನು ವ್ಯಕ್ತ ಪಡಿಸುವ ಮತ್ತು ಆ ಅಮಾಯಕಳಿಗೆ ನ್ಯಾಯ ಒದಗಿಸುವುದಾಗಿರುತ್ತೆ ಇದು ಸತ್ಯ ಆದರೆ ಇಲ್ಲಿ ಸಮೀರ್‌ ಯಾಕೆ ಆ ದೇವಸ್ಥಾನ ಜೈನರಿಗೆ ಸೇರಿದ್ದು ಹಿಂದೂಗಳಿಗೆ ಸೆರಿದ್ದಲ್ಲಾ ಎಂದು ಹೇಳುದರ ಮೂಲಕ ವಿವಾದ ಹುಟ್ಟುಹಾಕಿದ ಆ ಸ್ಟೋರಿಯಲ್ಲಿ ಆ ಅಂಶದ ಅಗತ್ಯವಿತ್ತೆ ಮೊದಲೆ ಯಾಕೆ ತಾನು ಮಾಡಲು ಹೊರಟಿರುವ ಸ್ಟೋರಿಯ ಉದ್ದೇಶವನ್ನೆ ಮರೆತು ಧರ್ಮ ಧರ್ಮದ ಮಧ್ಯ ವಿವಾದ ಹುಟ್ಟುಹಾಕುವ ಅಗತ್ಯ ಇತ್ತೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆಗೆ ಹಾಗು ಧರ್ಮಸ್ಥಳದ ಮಾಲಕತ್ವಕ್ಕೂ ಏನಾದರು ಲಿಂಕ್‌ ಇದೆಯೆ ಇಲ್ಲವಲ್ಲ ಸೌಜನ್ಯಳ ಅಮಾನವಿಯ ಅತ್ಯಾಚಾರ ಕೊಲೆ ಬಗ್ಗೆ ಮಾತನಾಡುವುದನ್ನು ಬಿಟ್ಟು ಹಿಂದೂಗಳ ಆಸ್ತಾ ಕೆಂದ್ರದ ಅಸ್ತಿತ್ವ ಅಸ್ಮಿತೆಯ ಬಗ್ಗೆ ಮಾತನಾಡಿದರೆ ಸೌಜನ್ಯಳಿಗೆ ನ್ಯಾಯ ಸಿಗುತ್ತದೆಯೆ ಇಲ್ಲ ಬದಲಾಗಿ ಆ ಹೋರಾಟ ಅದರ ದಿಕ್ಕನ್ನೆ ಬದಲಾಯಿಸಿ ಅಮಾಯಕಳ ಸಾವಿನ ಸಮಾದಿಯ ಮೇಲೆ ರಾಜಕೀಯ ಪ್ರಾರಂಬವಾಗುತ್ತದೆ ಹಾಗು ಕೋಮು ಸಂಘರ್ಷಗಳು ಹುಟ್ಟಿಕೊಂಡು ಸೌಜನ್ಯಳ ಹೊರಾಟಕ್ಕೆ ಹಿನ್ನೆಡೆಯಾಗುತ್ತದೆ ಇದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ ಆದರೆ ಈ ಮುಸ್ಲಿಂ ಯುವಕನಲ್ಲಿ ಧರ್ಮದ ಬೆಂಕಿ ಕೂಡ ತಲೆಯಲ್ಲಿ ಇತ್ತೆ ಎಂಬ ಅನುಮಾನಗಳು ಮೂಡುವುದು ಸಹಜ ಇಲ್ಲಿ ಬಲಪಂತಿಯರ ವಾದ ಎನು ಎಂದರೆ ಸಮೀರನಿಗೆ ನಮ್ಮ ಹಿಂದೂಧರ್ಮದ ಉಸಾಬರಿ ಯಾಕೆ ನಮ್ಮ ದೈವ ಸ್ಥಾನ ಜೈನರದ್ದಾಗಿರಲಿ ಹಿಂದೂಗಳದ್ದಾಗಿರಲಿ ಇತ ಸೌಜನ್ಯಳಿಗಾದ ದೈರ್ಜನ್ಯದ ಬಗ್ಗೆ ಮಾತನಾಡಲು ಹೊರಟಿದ್ದಾನೆ ಅದರ ಬಗ್ಗೆ ಮಾತನಾಡುವುದನ್ನು ಬಿಟ್ಟು ಹಿಂದೂಗಳ ಆಸ್ತಾ ಕೆಂದ್ರದ ಬಗ್ಗೆ ಮಾತನಾಡುವ ಹಕ್ಕು ಯಾರು ಕೊಟ್ಟರು ಅದೆ ಮುಸ್ಲಿಂ ಆಸ್ತಾ ಕೆಂದ್ರದ ಬಗ್ಗೆ ಅವರ ದೇವರಾದ ಅಲ್ಲಾನ ಬಗ್ಗೆ ಮಾತನಾಡಿದರೆ ದೇಶದಾಧ್ಯಂತ ಪ್ರತಿಭಟನೇ ಸರ್ತನಸೆ ಜುದಾ ಎನ್ನುವ ಘೋಷಣೆ ಕೂಗಿ ಸರ್‌ತನಸೆ ಜುದಾ ನಡೆಸಲಾಗುತ್ತದೆ ಉದಾಹರಣೆ ಕನೈಯಾ ಕುಮಾರ್‌ ಪ್ರಕರಣ ಹಾಗೆ ಸಮೀರ್‌ ಸೌಜನ್ಯಳ ಪ್ರಕರಣದಂತೆ ಹುಬ್ಬಳಿಯಲ್ಲಿ ಮುಸ್ಲಿಂ ಕೋಮಿನ ಯುವಕ ಹಾಡುಹಗಲೆ ಹಿಂದೂ ಯುವತಿಯನ್ನು ಬರ್ಬರವಾಗಿ ಇರಿದು ಕೊಲ್ಲುತ್ತಾನೆ ಅದರ ಬಗ್ಗೆ ಯಾಕೆ ಮಾತನಾಡುವುದಿಲ್ಲ ಯಾಕೆ ಕೇವಲ ಮುಸ್ಲಿಂ ಬೆಂಬಲಿತ ಸ್ಟೋರಿಗಳನ್ನು ಮಾತ್ರ ಮಾಡುತ್ತಾನೆ ಎನ್ನುವುದು ಬಲಪಂತಿಯರ ಪ್ರಶ್ನೆಯಾಗಿರುತ್ತದೆ

ಇಲ್ಲಿ ಮುಖ್ಯವಾಗಿ ಧರ್ಮಸ್ಥಳ ಹಿಂದೂಗಳ ಆಸ್ತಾ ಕೇಂದ್ರ ಅದು ಯಾರ ಮನೆಯ ಆಸ್ತಿಯಲ್ಲ ಒಂದುವೇಳೆ ಯಾವುದೇ ಪಟ್ಟಬಂದ್ರ ಹಿತಾಸಕ್ತಿಗಳು ಹಿಂದೂಗಳ ಆಸ್ತಾ ಕೇಂದ್ರ ಮತ್ತು ಅಸ್ಮಿತೆಯನ್ನು ತಮ್ಮ ಆಸ್ತಿ ಎಂದು ಹೇಳಿಕೊಂಡರೆ ಅದರ ಹೋರಾಟಕ್ಕೆ ಹಲವಾರು ಮಾರ್ಗ ಗಳಿವೆ ಸೌಜನ್ಯ ಹೋರಾಟ ಸೌಜನ್ಯಳಿಗೆ ನ್ಯಾಯ ಒದಗಿಸುವುದಾಗಿರಬೇಕು ಹೊರತು ಬೇರೆಯವರ ಧಾರ್ಮಿಕ ಭಾವನೆಗೆಧಕ್ಕೆ ತರುವಂತಿರಬಾರದು ಇಲ್ಲವಾದಲ್ಲಿ ಆ ಹೋರಾಟ ತನ್ನ ದಿಕ್ಕು ಭದಲಾಯಿಸಿಕೊಂಡು ಕೋಮು ಗಲಭೆಗೆ ತಿರುಗಿ ಸೌಜನ್ಯಲಳಿಗೆ  ನ್ಯಾಯ ಮರೀಚಿಕೆಯಾಗಿ ಹೋಗುತ್ತದೆ ಎನ್ನುದು ಇಲ್ಲಿ ಪ್ರಸ್ತುತ

ಇನ್ನು ಸಮಿರ್‌ ಮಾಡಿರುವ ಸೌಜನ್ಯ ಹತ್ಯೆ ಸಂಬಂದಿತ ಸ್ಟೋರಿಗೆ ಬೆಂಬಲವು ಕೂಡ ವ್ಯಕ್ತವಾಗಿದೆ ಇಂದು ಸಮೀರ್‌ ಸೌಜನ್ಯಳ ಹತ್ಯೆಗೆ ಸಂಬಂದಿಸಿದಂತೆ ವಿಡಿಯೋ ಮಾಡಿದರೆ ಕೆಲವು ಬಲಪಂತಿಯರು ಆತ ವಿಡಿಯೋ ಮಾಡಿದ್ದೆ ಮಹಾ ಅಪರಾದ ಎನ್ನುವಂತೆ ಮಾತನಾಡುತ್ತಾರೆ ಆತ ಮುಸ್ಲಿಂ ವ್ಯಕ್ತಿ ಆತನಿಗೆ ಏನು ಹಕ್ಕಿದೆ  ಆತ ಯಾಕೆ ಹುಬ್ಬಳಿ ಯುವತಿಯ ಹತ್ಯೆಗೆ ಸಂಬಂದಿಸಿದಂತೆ ಮತ್ತು ಕನಯ್ಯಾಲಾಲ್‌ ನಂತ ಪ್ರಕರಣಕ್ಕೆ ಸಂಬಂದಿಸಿದಂತೆ ಸ್ಟೋರಿಗಳನ್ನು ಮಾಡಲಾರ ಎಂದು ಆತ ಮಾಡಿದ್ದೆ ಮಹಾ ಅಪರಾದ ಎನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ ಧರ್ಮ ಧರ್ಮಗಳ ಮದ್ಯ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಾರೆ ಮುಸ್ಲಿಂ ಯುವಕನಾಗಿ ಸಮಿರ್‌ ಒಂದು ಯುವತಿಯ ಆತ್ಯಾಚಾರ ಹತ್ಯೆಯ ವಿರುದ್ದ ಮಾತನಾಡಿದರೆ ಅದಕ್ಕೆ ಧರ್ಮದ ಬಣ್ಣ ಕಟ್ಟುವ ನೀವುಗಳು ಆಕೇಯ ಪರ ದ್ವನಿ ಯಾಕೆ ಎತ್ತಲಿಲ್ಲ ಬದಲಾಗಿ ಆಕೆಯ ಅತ್ಯಾಚಾರ ಹತ್ಯೆಯ ಬಗ್ಗೆ ಮಾತನಾಡುವುದೆ ಅಹಾ ಅಪರಾದ ಎಂಬಂತೆ ಬಿಂಬಿಸುತ್ತಿರಾ ಹಿಂದೂ ಯುವತಿಯನ್ನು ಒಬ್ಬ ಹಿಂದೂ ಅತ್ಯಾಚಾರ ಮಾಡಿ ಕೊಂದರೆ ಅದು ಸರಿಯೇ ನಿಮ್ಮ ಮನೆ ಮಗಳಿಗೆ ಹೀಗೆ ಆಗಿದ್ದರೆ ನೀವುಗಳು ಸೌಜನ್ಯಳಿಗಾದ ಸಂದರ್ಬದಲ್ಲಿ ವರ್ತಿಸಿದಂತೆ ವರ್ತಿಸುತ್ತಿದ್ದರೆ ಸಮೀರ್‌ ಮಾಡಿರುವ ಸ್ಟೋರಿಯ ಬಗ್ಗೆ ನೀವುಗಳು ಸೇರಿ ಹೇಗೆ ಪ್ರತಿರೋದವನ್ನು ಒಡ್ಡಿ ಹೊರಾಟಕ್ಕೆ ಇಳಿದಿದ್ದಿರೋ ಹಾಗೆ ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂದು ನೀವೆಲ್ಲರೂ ಹೊರಾಟಕ್ಕೆ ಇಳಿದಿದ್ದರೆ ಸಮೀರ್ ಈ ವಿಡಿಯೋ ಮಾಡುತ್ತಲೇ ಇರಲಿಲ್ಲವಾಗಿತ್ತು ಇಷ್ಟುಹೊತ್ತಿಗೆ ಅಮಾಯಕಿ ಸೌಜನ್ಯಳಿಗೆ ನ್ಯಾಯ ಸಿಕ್ಕಿ ಆಕೆಯ ಆತ್ಮಕ್ಕೆ ಶಾಂತಿ ಸಿಕ್ಕಿರುತ್ತಿತ್ತು ಆಕೆಯ ಹೆತ್ತವರು ಹಾಗೋ ಹೀಗೋ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು

ಹಿಂದೂ ಧರ್ಮದ ರಕ್ಷಣೆ ಎಂದರೆ ಕೆಂಪು ಶಾಲನ್ನು ಹಾಕಿ ಉದ್ದನಾಮವನ್ನು ಎಳೆದು ಅಮಾಯಕರ ಮೇಲೆ ತೋಳೆರಿಸಿ ಹೊದರೆ ಅದು ಹಿಂದುತ್ವ ಎನ್ನಿಸದು ಬದಲಾಗಿ ಸೌಜನ್ಯಳಂತ ಹಿಂದೂ ಯುವತಿಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಹತ್ತಿಕ್ಕುವ ಕೆಲಸ ಮಾಡಬೇಕು ಬದಲಾಗಿ ಸೌಜನ್ಯ ಹೊರಾಟಗಾರರನ್ನು ಗುರಿಯಾಗಿಸಿ ಅತ್ಯಾಚಾರಿಗಳ ಪರನಿಂತರೆ ಅದು ಧರ್ಮ ರಕ್ಷಣೆಯಲ್ಲ ಬದಲಾಗಿ ಅದು ಧರ್ಮದ್ರೋಹ ಎನ್ನಿಸಿಕೊಳ್ಳುತ್ತದೆ ಇಲ್ಲಿ ಸಮೀರ ಎಂಡಿ ಧರ್ಮಸ್ಥಳದ ಅಸ್ತಿತ್ವ ಮತ್ತು ಅಸ್ಮಿತೆಯ ಮೇಲೆ ಪ್ರಶ್ನೇಮಾಡಿ ಇಂದು ಧರ್ಮದ ಬಗ್ಗೆ ನಿಂದಿಸಿದ್ದು ಹೌದೆನ್ನುವುದೆ ಆದರೆ ನೀವುಗಳು ಮಾಡುತ್ತಿರುವುದೆನೆ ಸೌಜನ್ಯಳ ಅತ್ಯಾಚಾರ ಕೊಲೆಗೆ ಸಂಬಂದಿಸಿದಂತೆ ಒಂದು ಸೊಲ್ಲನ್ನು ತೆಗೆಯದೆ ಅವಳ ಪರ ಹೊರಾಟಮಾಡುವುದೆ ಅಪಾರದ ಎನ್ನುವ ನಿಮಗೂ ಹಾಗು ಸಮೀರ್‌ ಎಂ ಡಿ ಗೂ ಏನು ವ್ಯತ್ಯಾಸ

ಧರ್ಮ ರಕ್ಷಣೆ ಎಂದರೆ ಇನ್ನೊಂದು ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡುವುದಲ್ಲ ಬದಲಾಗಿ ಇನ್ನೊಂದು ಧರ್ಮಕ್ಕೆ ವ್ಯೆಕ್ತಿಗಳಿಗೆ ತೊಂದರೆಯಾಗದಂತೆ ನಮ್ಮ ಧರ್ಮವನ್ನು ಆಚರಿಸುತ್ತಾ ಉಳಿಸಿಕೊಂಡು ಹೋಗುವುದೆ  ಧರ್ಮ ಅದು ಪ್ರತಿಯೊಂದು ಧರ್ಮವು ಕೂಡ  ಹೇಳುತ್ತದೆ 

ಇನ್ನಾದರೂ  ಈ ಎಡ ಮತ್ತು ಬಲ ಪಂತಿಯರು   ತಮ್ಮ ಹೋರಾಟದ ಗುರಿಯನ್ನು ಅರಿತು ಸೌಜನ್ಯಳಿಗೆ  ನ್ಯಾಯ ಸಿಕ್ಕಿತೆ  ಆಕೆಯ ಅತ್ಯಾಚಾರಿಗಳನ್ನು ಪತ್ತೆಹಚ್ಚಿ  ಆಕೆಯ ಕೊಲೆಗಡುಕರಿಗೆ ನಮ್ಮ ಕಾನೂನು ಶಿಕ್ಷಸುತ್ತದೆಯೇ ಎಂದು ಕಾದು ನೋಡಬೇಕಾಗಿದೆ

WhatsApp
Facebook
Telegram
error: Content is protected !!
Scroll to Top