ಸಚಿವ ಮಾಂಕಾಳು ವೈದ್ಯರನ್ನು ಹಾಡಿ ಹೊಗಳಿದ ಬಿಜೆಪಿ ಪಕ್ಷದ ಶಾಸಕ ದಿನಕರ್ ಶೆಟ್ಟಿ

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸಚಿವ ಮಾಂಕಾಳು ವೈದ್ಯರ ಪ್ರಸಿದ್ದಿ

ಹೊನ್ನಾವರ ತಾಲೂಕಿನ ಗುಣವಂತೆ ಕೆಳಗಿನೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಶಾಖಾ ಮಠದ ಉದ್ಘಾಟನೆಯ  ಸಂದರ್ಭದಲ್ಲಿ ವಿರೋಧ ಪಕ್ಷವಾದ ಬಿಜೆಪಿಯ ಶಾಸಕರಲ್ಲಿ ಒಬ್ಬರಾದ ದಿನಕರ್ ಶೆಟ್ಟಿ ಅವರು ಸಚಿವ ಮಾಂಕಾಳು ವೈದ್ಯರನ್ನು ಹಾಡಿ ಹೊಗಳಿದ ಪ್ರಸಂಗ ನಡೆದಿದೆ

ಗುಣಕ್ಕೆ ಮತ್ಸರವಿಲ್ಲಾ ಎನ್ನುದು ಸರ್ವ ಕಾಲಕ್ಕೂ ಸತ್ಯ ಉತ್ತರ ಕನ್ನಡ ಉಸ್ತುವಾರಿ ಸಚಿವರಾದ ಮಾಂಕಾಳು ವೈದ್ಯರು ರಾಜ್ಯದ ಜನಪ್ರಿಯ ಸಚಿವರಲ್ಲಿ ಒಬ್ಬರಾಗಿದ್ದಾರೆ ಇವರನ್ನು ಜನಗಳು ಯಾವ ಮಟ್ಟಿಗೆ ಗೌರವಿಸುತ್ತಾರೆ ಪ್ರೀತಿಸುತ್ತಾರೆ ಎಂದರೆ ವಿರೋಧ ಪಕ್ಷದ ನಾಯಕರು ಶಾಸಕರು ಕೂಡ ಇವರನ್ನು ಒಪ್ಪಿಕೊಳ್ಳುತ್ತಾರೆ ಮೆಚ್ಚಿಕೊಳ್ಳುತ್ತಾರೆ ಕಾರಣ ಇವರಲ್ಲಿ ಇರುವ ಜನಪರ ಕಾಳಜಿ ಅಭಿವೃದ್ಧಿ ಬಗ್ಗೆ ಇರುವ ಕನಸು   ಹಾಗೆ ಇವರಲ್ಲಿ ಇರುವ ಮಾನವೀಯ ಮೌಲ್ಯಗಳು

ಇಂದುಹೊನ್ನಾವರ ಗುಣವಂತೆ ಕೆಳಗಿನೂರಿನಲ್ಲಿ ನಡೆಯುತ್ತಿದ್ದ ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಶಾಖಾ ಮಠದ ಉದ್ಘಾಟನೆಯ ಸಂದರ್ಭದಲ್ಲಿ ವಿರೋಧ ಪಕ್ಷವಾದ ಬಿಜೆಪಿಯ ಕುಮಟಾ ಶಾಸಕರಾದ ದಿನಕರ ಶೆಟ್ಟಿ  ಅವರು ಸಚಿವ ಮಾಂಕಾಳ ವೈದ್ಯರ ಮಾನವೀಯ ಮೌಲ್ಯ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿಕ್ಕೊಲ್ಲದೆ ಇರಲು ಸಾಧ್ಯವಾಗದೆ ಹೋಯಿತು ಕಾರಣ ಗುಣಕ್ಕೆ ಎಂದು ಮತ್ಸರ ತೋರಬಾರದು ಒಂದು ವೇಳೆ ಒಳ್ಳೆತನವನ್ನು ಮೆಚ್ಚಿಕೊಳ್ಳದೆ ಇದ್ದಲ್ಲಿ  ಅವರಂತ ಮೂರ್ಖರು ಯಾರು ಇಲ್ಲ

ಈ ಹಿಂದೆ ಮಾಜಿ ಶಾಸಕ ಸುನಿಲ್ ನಾಯ್ಕ ಅವರು  ತಾವು ಅಧಿಕಾರದಲ್ಲಿದ್ದಾಗ  ಸಚಿವ ಮಾಂಕಾಳು ವೈದ್ಯ ಅಭಿವೃದ್ಧಿ ಕಾರ್ಯದ ಬಗ್ಗೆ ತುಂಬಿದ ಸಭೆಯಲ್ಲಿ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದನ್ನು ನಾವು ಇಲ್ಲಿ ಸ್ಮರಿಸಿ ಕೊಳ್ಳ ಬಹುದು

ಒಟ್ಟಾರೆ ಸಚಿವ ಮಾಂಕಾಳು ವೈದ್ಯರ ಪ್ರಸಿದ್ದಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದ್ದೂ ಅವರಿಗೆ  ಆ ಭಗವಂತ  ಇನ್ನು ಹೆಚ್ಚಿನ ಯಶಸ್ಸು ನೀಡಲಿ ಎಂದು ಸಚಿವ ವೈದ್ಯರ ಅಭಿಮಾನಿ ಬಳಗ ಹಾರೈಸುತ್ತಿದೆ

WhatsApp
Facebook
Telegram
error: Content is protected !!
Scroll to Top