ಲೋಕ ಕಲ್ಯಾಣಕ್ಕಾಗಿ ಮುರ್ಡೇಶ್ವರನ ಮೊರೆಹೋದ ಸಚಿವರು
ಭಟ್ಕಳ: ಪ್ರಯಾಗರಾಜನಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಿದ ಸಚಿವ ಮಂಕಾಳ ಎಸ್ ವೈದ್ಯರ ಕುಟುಂಬ ತ್ರೀವೇಣಿ ಸಂಗಮದ ಪವಿತ್ರ ಗಂಗಾ ಜಲವನ್ನು ತಂದು ಶಿವರಾತ್ರಿ ಪರ್ವಕಾಲದಲ್ಲಿ ಶಿವನ ಆತ್ಮಲಿಂಗಕ್ಕೆ ಅಭಿಷೇಕ ಮಾಡಿಸಿ, ಪೂಜೆ ಸಲ್ಲಸಿ ಕೃತಾರ್ಥರಾದರು.
ಮಹಾಶಿವರಾತ್ರಿಯಂದು ಪ್ರತಿವರ್ಷ ಸಚಿವ ಮಂಕಾಳ ವೈದ್ಯರು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ಅಭಿಷೇಕ ಮಾಡಿಸುತ್ತಿದ್ದರು. ಆದರೆ ಈ ಬಾರಿ ಅವರು ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದು ಅಲ್ಲಿನ ಪವಿತ್ರ ಗಂಗಾಜಲವನ್ನು ತಂದು ಶಿವನ ಆತ್ಮಲಿಂಗಕ್ಕೆ ಅಭಿಷೇಕ ಮಾಡಿಸಿದ್ದಾರೆ. ಈ ಸಂದರ್ಬದಲ್ಲಿ ಅವರ ಪತ್ನಿ ಪುಷ್ಪಲತಾ ವೈದ್ಯ, ಪುತ್ರಿ ಬೀನಾ ವೈದ್ಯ ಸೇರಿದಂತೆ ಇತರ ಆಪ್ತರು ಇದ್ದರು. ಪ್ರಧಾನ ಅರ್ಚಕ ಜಯರಾಮ ಅಡಿಗಲ್ ಅಭಿಷೇಕ ಮಾಡಿಸಿ ವೈದ್ಯರ ಪರವಾಗಿ ಪೂಜೆ ಸಲ್ಲಸಿದರು. ಪೂಜೆ ಸಲ್ಲಸಿದ ವೈದ್ಯರು ನಾಡಿಗೆ ಎಂದು ಜಲಕ್ಷಾಮ, ಮತ್ಸö್ಯಕ್ಷಾಮ ಸೇರಿದಂತೆ ಯಾವುದೆ ತೊಂದರೆ ಬರದಂತೆ ಕಾಪಾಡುವಂತೆ ದೇವರಲ್ಲಿ ಮೋರೆಯಿಟ್ಟಿದ್ದಾರೆ.