ರಕ್ಷಣೆ ಮಾಡಬೇಕಿರುವ ಪಿ ಎಸ್ ಐ  ತಮ್ಮದೇ ಇಲಾಖೆಯ ಹೆಡ್ ಕಾನ್ಸ್ಟೇಬಲ್ ಮೇಲೆ ಗುಂಡಾ ವರ್ತನೆ

ಪವಿತ್ರ ಸ್ಥಳ ಎಂಬ ಕನಿಷ್ಠ ಗೌರವವು ಇಲ್ಲದೆ ಹಾರಡಿ ಕಿರುಚಾಡಿದ ಪಿಎಸ್ಐ ಖಾದರ್ ಭಾಷಾ

ತನ್ನ ಇಲಾಖಾ ಸಿಬ್ಬಂದಿಯ ಮೇಲೆಯೇ ಡಬ್ಬಾಳಿಕೆ ನಡೆಸಿದ ಇಂತಹ ಅಧಿಕಾರಿ ಸಾರ್ವಜನಿಕರನ್ನು ಹೇಗೆ ನಡೆಸಿಕೊಂಡಾರು:ಸಾರ್ವಜನಿಕರ ಪ್ರಶ್ನೆ

ಗೋಕರ್ಣ : ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿ ಉತ್ತಮ ಭಾವನೆ ಮೂಡಿಸಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು,ಪೊಲೀಸ್‌ ಇಲಾಖೆ ಪದೆ ಪದೆ ಎಚ್ಚರಿಕೆ ನೀಡತ್ತಾನೆ ಬರತ್ತಿದೆ. ಆದರೆ ಗೋಕರ್ಣ ಠಾಣೆಯ ಪಿಎಸ್‌ಐ ತಮ್ಮ ಇಲಾಖೆಯ ಹೆಡ್ ಕಾನ್‌ಸ್ಟೇಬಲ್‌ ಒಬ್ಬರಿಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿ ಗುಂಡಾ ವರ್ತನೆತೋರಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ದಕ್ಷಿಣಕಾಶಿಯೆಂದೆ ಪ್ರಸಿದ್ದಿ ಪಡೆದರುವ ಶಿವನ ಕ್ಷೇತ್ರ ಗೋಕರ್ಣದಲ್ಲಿ ಭಕ್ತ ಸಾಗರ ಶಿವರಾತ್ರಿಯ ಭಕ್ತಿಯಲ್ಲಿ ತಲ್ಲೀನರಾಗಿರುವ ಸಂದರ್ಭದಲ್ಲಿ ಹಿಂದೂಗಳ ಅತ್ಯಂತ ಪವಿತ್ರ ಕ್ಷೇತ್ರ ಹಾಗೂ ಸಾಕ್ಷಾತ್ ಶಿವನ ಆತ್ಮಲಿಂಗವೇ ಇರುವ ಗೋಕರ್ಣ ಮಹಾಬಲೇಶ್ವರ ದೇವಾಲಯದ ಆವರಣದಲ್ಲಿ ಮಹಿಳಾ ಕಾನ್‌ಸ್ಟೇಬಲ್‌ವೊಬ್ಬರ ಮಾತು ಕೇಳಿ ಭಕ್ತರೊಬ್ಬರಿಗೆ ಗೋಕರ್ಣ ಠಾಣೆಯ ಪಿಎಸ್‌ಐ ಖಾದರ ಬಾಷಾ ಅವರು ದೇವಾಲಯದ ಆವರಣದಲ್ಲೇ  ಪವಿತ್ರ ಕ್ಷೇತ್ರ ಎನ್ನುವ ಕನಿಷ್ಠ  ಗೌರವವು ಇಲ್ಲದೆ ಕಪಾಳ ಮೋಕ್ಷ ಗುಂಡಾ ವರ್ತನೆ ತೋರಿದ್ದಾರೆ.

ಪಿಎಸ್ ಖಾದ‌ರ್ ಬಾಷಾ ಕಪಾಳ ಮೋಕ್ಷ ಮಾಡಿದ್ದು ಬೇರೆಯಾರಿಗೂ ಅಲ್ಲ. ತಮ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರೋ ಭಟ್ಕಳ ನಗರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೇಬಲ್ ಆಗಿರುವ ಹಾಗೂ ಹೊಸಕಟ್ಟಾ ನಿವಾಸಿಯಾಗಿರುವ ಜೈರಾಮ್ ಹೊಸ್ಕಟ್ನಾ ಎಂಬುವವರ ಮೇಲೆ.

ಮಹಾಬಲೇಶ್ವರನ ದರ್ಶನಕ್ಕೆ ಬಂದಿದ್ದರು. ಆದರೆ ಇವರು ಎಲ್ಲಿಯೂ ತಾನು ಪೊಲೀಸ್ ಕಾನ್‌ಸ್ಟೇನಲ್ ಅಂತಾ ಹೇಳಿಕೊಳ್ಳದೆ ಸಾಮಾನ್ಯರಂತೆ ಬೆಳಿಗ್ಗೆ ಆರು ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯ್ಯುತ್ತಿದ್ದರು.ಈ ಮಧ್ಯೆ ಸಾಲಿನಲ್ಲಿದ್ದ ಜನ ನಿಧಾನವಾಗಿ ಮುಂದಕ್ಕೆ ಹೋಗುತ್ತಿದ್ದ ಅಲ್ಲೆ ಕರ್ತವ್ಯದಲ್ಲಿದ್ದ ಮಹಿಳಾ ಕಾನ್‌ಸ್ಟೇಬಲ್‌ಗೆ ತ್ವರಿತವಾಗಿ ಜನರನ್ನು ಮುಂದೆ ಬಿಡುವಂತೆ ಹೇಳಿದ್ದಾರೆನ್ನಲಾಗಿದೆ.ಇಷ್ಟಕ್ಕೆ ಕೋಪಗೊಂಡ ಮಹಿಳಾ ಸಿಬ್ಬಂದಿ ಅವರೊಂದಿಗೆ ಮಾತಿಗೆ ಇಳಿದಿದ್ದು,ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ನಡೆದಿದೆ.

ಇನ್ನೂ ಗಲಾಟೆ ಆಗತ್ತಿದೆ ಎಂದು ಮಹಿಳಾ ಸಿಬ್ಬಂದಿ ಪಿಎಸ್‌ಐ ಖಾದರ್ ಬಾಷ್‌ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆನ್ನಲಾಗಿದೆ. ತಕ್ಷಣ ಖದರ್‌ನಲ್ಲೆ ಬಂದ ಖಾದರ್ ಬಾಷ್ ಅವರು ನಡೆದ ಘಟನೆ ಬಗ್ಗೆ ಸರಿಯಾದ ಮಾಹಿತಿಯನ್ನ ಕೂಡ ಪಡೆಯದೆ ತನ್ನದೇ ಇಲಾಖೆಯ ಹೆಡ್‌ ಕಾನ್‌ಸ್ಟೇಬಲ್ ಜೈರಾಮ್ ಹೊಸ್ಕಟ್ನಾ ಅವರಿಗೆ ಸಾರ್ವಜನಿಕರ ಎದುರೆ ಅವಾಚ್ಯ ಪದ ಬಳಕೆ ಮಾಡಿ ಕಪಾಳ ಮೋಕ್ಷ ಮಾಡಿದ್ದಾರೆನ್ನಲಾಗಿದೆ.

ಅಷ್ಟೇ ಅಲ್ಲದೆ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕುಟುಂಬ ಸಮೇತರಾಗಿ ನಿಂತಿದ್ದ ಜೈರಾಮ್ ಹೊಸ್ಕಟ್ಟಾ ಅವರಿಗೆ ಅವಾಚ್ಯ ಪದ ಬಳಕೆ ಮಾಡಿ ಅವರ ಸಾರ್ವಜನಿಕರ ಎದುರಲ್ಲೆ ಓರ್ವ ಹೆಡ್ ಕಾನ್‌ಸ್ಟೇಬಲ್‌ ಅವರನ್ನು ಕ್ಯೂ ನಿಂದಲೇ ಎಳೆದು ಹೊರಗೆ ಹಾಕಿದ್ದಾರೆ. ತಾನು ಸ್ಥಳೀಯ ಭಾಷೆಯಲ್ಲಿ ಮಾತನಾಡಿದ್ದೇನೆ ಹೊರತು ಏಕವಚನದಲ್ಲಿ ಮಾತನಾಡಿಲ್ಲ

ಎಂದು ಹೆಡ್‌ ಕಾನ್‌ಸ್ಟೇಬಲ್‌ ಪಿಎಸ್‌ಐ ಅವರ ಎದರು ಎಷ್ಟೇ ಕೇಳಿಕೊಂಡು ಅವರು ಅದನ್ನ ಕೇಳೋ ಪರಿಸ್ಥಿತಿಯಲ್ಲಿ ಇರಲ್ಲಿವಂತೆ. ಗೋಕರ್ಣ ಪಿಎಸ್‌ಐ ಅವರು ಸಾರ್ವಜನಿಕವಾಗಿ ತಮ್ಮ ಇಲಾಖೆಯ ಹೆಡ್‌ ಕಾನ್‌ಸ್ಟೇಬಲ್‌ಗೆ ಕಪಾಳ ಮೋಕ್ಷ ಮಾಡಿರುವ ವಿಚಾರ ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗತ್ತಿದ್ದು, ಹಿರಿಯ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸಬೇಕು ಎನ್ನುವ ಮಾತು ಜೋರಾಗಿ ಕೇಳಿ ಬರತ್ತಿದೆ.

ಶಾಂತಿ ಸುವ್ಯವಸ್ಥೆಯನ್ನ ಕಾಪಾಡಬೇಕಾದ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಘಟನೆ ಬಗ್ಗೆ ಸರಿಯಾಗಿ ಅರಿತುಕೊಳ್ಳದೆ ಈ ರೀತಿ ತಮ್ಮ ಇಲಾಖೆಯ ಸಿಬ್ಬಂಧಿಗಳ ಮೇಲೆ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿ ಅವಮಾನ ಮಾಡಿದ್ರೆ ಜನಸಾಮಾನ್ಯಾರು ಠಾಣೆ ಹೋದರೆ ಅವರನ್ನು ಈ ಖಾದರ್ ಭಾಷಾ ಹೇಗೆ ನಡೆಸಿಕೊಳ್ಳುತ್ತಿದ್ದರು ಎನ್ನುವುದು ಸಾರ್ವಜನಿಕಕರ ಪ್ರಶ್ನೆ ಆಗಿದೆ

ಒಂದು ವೇಳೆ  head constable ಜಾಗದಲ್ಲಿ ಬೇರೆ ಭಕ್ತರಿದ್ದಾರೆ ಅವರ ಪರಿಸ್ಥಿತಿ ಏನಾಗುತ್ತಿತ್ತು ಆ  ಭಕ್ತನನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆ  ಅನುಚಿತವಾಗಿ ನಡೆದುಕೊಂಡಾ ಎಂಬ ಆರೋಪ ಆತನ ಮೇಲೆ ಹೋರಿಸಿ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್ ಮಾಡಿ ಆತ ಸಮಾಜದಲ್ಲಿ ತಲೆ ಎತ್ತಿ ಓಡಾದಂತೆ ಮಾಡಲಾಗುತ್ತಿತ್ತು

ನಮ್ನ ಪೊಲೀಸ್ ವ್ಯವಸ್ಥೆಗೆ ಆ  ಮಹಿಳಾ ಕಾನ್ಸ್ಟೇಬಲ್ ಹಾಗೂ PSI ಖಾದರ್ ಭಾಷಾ ರಂತವರು ಬೇಕೇ  ಇಂತ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ದ ಜಿಲ್ಲಾ SP M ನಾರಾಯಣ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುದು ಸಾರ್ವಜನಿಕ ಒತ್ತಾಯವಾಗಿದೆ

WhatsApp
Facebook
Telegram
error: Content is protected !!
Scroll to Top