ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ ಮಾಡಿದ ತಕ್ಷಣ ಅಭಿವೃದ್ಧಿ ಆಗಲಾರದು ಸಚಿವ ಮಾಂಕಾಳು ವೈದ್ಯ
ಭಟ್ಕಳ ನಾನು ಹಿಂದೆ 2017 ಸಮಯದಲ್ಲಿ ಶಾಸಕನಾಗಿದ್ದಾಗ ಜಾಲಿ ಪಟ್ಟಣ ಪಂಚಾಯತ್ ಕಟ್ಟಡಕ್ಕಾಗಿ ಅನುದಾನ ಮಂಜೂರು ಮಾಡಿಸಿದ್ದೆ ಈಗ ಸಚಿವನಾಗಿದ್ದೇನೆ ಇಂದು ಅದೇ ಜಾಲಿ ಪಟ್ಟಣ ಪಂಚಾಯತ ಕಟ್ಟಡವನ್ನು ಉದ್ಘಾಟಿದ್ದೆ ಈ ಕಟ್ಟಡ ಈಗ ಸುಸಜ್ಜಿತವಾಗಿದ್ದು ಉತ್ತಮ ಸೌಲಭ್ಯವನ್ನು ಹೊಂದಿದೆ ಎಂದು ಸಚಿವ ಮಾಂಕಾಳು ವೈದ್ಯರು ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ನೂತನ ಕಟ್ಟಡವನ್ನು ಉದ್ಘಾಟನೆ ನೆರವೇರಿಸಿ ಹೇಳಿದರು
ಅವರು ಜಾಲಿಯ ಪಟ್ಟಣ ಪಂಚಾಯತ ನವೀನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಈ ಹಿಂದೆ ನಾನು ಶಾಸಕನಾಗಿದ್ದಾಗ ಸರಕಾರದಿಂದ ₹1 ಕೋಟಿ ರೂಪಾಯಿ ಅನುಧಾನದಲ್ಲಿ ಕಟ್ಟವನ್ನು ಮಂಜೂರು ಮಾಡಿಸಿಕೊಂಡು ಬಂದು ದಿನಾಂಕ 06-12-2017 ರಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರ ಅಮೃತ ಹಸ್ತದಿಂದ ಅಂದು ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ದುರಾದೃಷ್ಟ ಎನ್ನುವಂತೆ 5 ವರ್ಷ ಆಡಳಿತ ನಡೆಸಿದ BJP ಸರಕಾರಕ್ಕೆ ಹಾಗೂ ಬಿಜೆಪಿ ಶಾಸಕರಿಗೆ ಈ ಒಂದು ಕಟ್ಟವನ್ನು ಪೂರ್ಣಗೊಳಿಸುವ ಶಕ್ತಿ ಇಲ್ಲದಿರುವುದು ನಿಜಕ್ಕೂ ಬೇಸರತಿ ಸಂಗತಿ. ಆದರೆ ಇಂದು ಮತ್ತೆ ಅಧಿಕಾರಕ್ಕೆ ಬಂದ ನಮ್ಮ ಸರಕಾರ ಹಾಗೂ ನಾನು ಕೂಡಲೇ ಇದರ ಬಗ್ಗೆ ಗಮನ ಹರಿಸಿ ಸಂಭಂದ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಸಿ ಶೀಘ್ರವಾಗಿ ಕಟ್ಟವನ್ನು ಪೂರ್ಣಗೊಳಿಸುವಂತೆ ಸೂಚಿಸಿದಹಿನ್ನೆಲೆಯಲ್ಲಿ ಇಂದು ಕಟ್ಟದ ಪೂರ್ಣಗೊಂಡು ಉದ್ಘಾಟಿಸಿ ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಿಕೊಡಲಾಗಿದೆ ಕೇವಲ ಬಾಯಲ್ಲಿ ಹೇಳಿದರೆ ಅಭಿವೃದ್ಧಿ ಆಗಲಾರದು ಎಲ್ಲಿ ಅನುದಾನದ ಅವಶ್ಯಕತೆ ಇದೆ ಅನುದಾನವನ್ನು ಹೇಗೆ ವ್ಯಯಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು ನಮ್ಮ ಸರಕಾರ ಅಭಿವೃಡಿಯ ಪತದಲ್ಲಿ ಸಾಗುತ್ತಿದೆ ಇನ್ನು ಕೂಡ ನಾನು ಅನೇಕ ಅಭಿವೃದ್ದಿ ಮಾಡುವವರಿದ್ದೇವೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಹಾಕುದು ಅಭಿವೃದ್ಧಿಯಲ್ಲ ಸಾರ್ವಜನಿಕರು ಸಮಾಜಲ್ಲಿ ನೆಮ್ಮದಿಯಿಂದ ಬದುಕು ನಡೆಸಿದಾಗಲೇ ಆ ಕ್ಷೇತ್ರದ ಅಭಿವೃದ್ಧಿ ಆಗಿದೆ ಎಂದು ನಾವು ತಿಳಿದುಕೊಳ್ಳಬೇಕು ನಮ್ಮ ಸರಕಾರ ಅಭಿವೃದ್ಧಿಯ ಕಡೆ ಯಾವಾಗಲೂ ಗಮನ ಹರಿಸಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಸಚಿವರನ್ನು ಸಾರ್ವಜನಿಕರು ಗೌರವಿಸಿ ಸನ್ಮಾನಿಸಿದರು
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಅಪ್ಪಾ ಹುಝಫಾ ಖಾಜೀಯಾ ಉಪಾಧ್ಯಕ್ಷರಾದ ಸೈಯದ್ ಇಮ್ರಾನ ಅಹ್ಮದ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಈಶ್ವರ ಲಚ್ಚಯ್ಯ ಮೊಗೇರ ಸದ್ಯರುಗಳಾದ ರಮೇಶ ಈರಯ್ಯ ಗೊಂಡ ರಮೇಶ ಮಾದೇವ ನಾಯ್ಕ ದಯಾನಂದ ಮಂಜುನಾಥ ನಾಯ್ಕ ನಾಗರಾಜ ಮಾದೇವ ನಾಯ್ಕ, ಮುನೀರ್ ಅಹಮೆದ್ ಮೊಹಿದ್ದಿನ ಸಾಬ, ಶ್ರೀಮತಿ ಶಾಹಿನಾ ಶೇಖ ಶ್ರೀಮತಿ ಪದ್ಮಾವತಿ ಸುಬ್ರಾಯ ನಾಯ್ಕ ಮಿಸ್ಟಾಲುಲ್ ಹಕ್ ಶೇಟ್ ಉಮರ್, ಶ್ರೀಮತಿ ಇಕ್ಕೇರಿ ಫರ್ಹಾನಾ ಮಷ್ಯದ ಇರ್ಷಾದ ಶ್ರೀಮತಿ ಇರ್ಶಾದ ಬಾನು ಶ್ರೀಮತಿ ಅಲಾವತಿ ಗಜಾನನ ಆಚಾರಿ ವಸೀಮ್ ಅಹ್ಮದ್ ಮನೆಗಾರ್, ಅಹ್ಮದ್ ತೌಫಿಕ್ ಬ್ಯಾರಿ, ಇರ್ಫಾನ್ ಅಹ್ಮದ್ ಮಷ್ಯದ್ ಉಸ್ಮಾನ್ ಶ್ರೀಮತಿ ಖತೀಬ್ಬ ಫಾತಿಮಾ ತನಿಮ, ಶ್ರೀಮತಿ ಶೈನಾಜ ಬೇಗಂ ಶಂಶುದ್ದೀನ, ಶ್ರೀಮತಿ ಶೇಖ ಶಮೀಮ ಬಾನು ಮಷ್ಯದ ಹನೀಫ್