ಸಾಮಾನ್ಯ ಯುವತಿಯಂತೆ ಮುರ್ಡೇಶ್ವರ  ಸಂತೆ ಪೂರೈಸಿದ ಸಚಿವರ ಪುತ್ರಿ ಬೀನಾ ವೈದ್ಯ

ಸಚಿವರ ಪುತ್ರಿ ಆಗಿದ್ದರು ಕೂಡ ಸರಳತೆಯನ್ನು ಮೈಗುಡಿಸಿಕೊಂಡಿರುವ ಬೀನಾ ವೈದ್ಯ

ಭಟ್ಕಳ : ಉಸ್ತುವಾರಿ ಸಚಿವರು ಮೀನುಗಾರಿಕ ಸಚಿವರು ಆದ ಮಾಂಕಾಳು ವೈದ್ಯರ ಸುಪುತ್ರಿ ಬೀನಾ ವೈದ್ಯ ಸರಳತೆಗೆ ಹೆಸರು ವಾಸಿಯಾಗಿದ್ದಾರೆ ಇದಕ್ಕೆ ಅನೇಕ ಉದಾಹರಣೆಗಳು  ನಾವು ನೋಡಬಹುದಾಗಿದೆ.

ತಾಲ್ಲೂಕಿನ ಮುರ್ಡೇಶ್ವರದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುವುದು ಸಾಮಾನ್ಯ ಈ ಸಂತೆಯಲ್ಲಿ ಕರ್ನಾಟಕ ಸರ್ಕಾರದ ಮೀನುಗಾರಿಕೆ ಮತ್ತು ಬಂದರು ಸಚಿವರಾದ ಮಾಂಕಾಳ್ ವೈದ್ಯರ ಪುತ್ರಿ ಬೀನಾ ವೈದ್ಯರವರು ಸಂತೆಗೆ ಹೋಗಿ ಕೆಲವು ಗ್ರಾಮೀಣ ಭಾಗದ ಮಹಿಳೆಯರು ಬೆಳದ ತರಕಾರಿಯನ್ನು ಖರಿದಿಸಿದ್ದು ವಿಶೇಷ. ಸಾಮಾನ್ಯವಾಗಿ ಎಲ್ಲಾ ರಾಜಕಾರಣಿ ಮಕ್ಕಳು ಐಶಾರಾಮಿ ಬದುಕು ನಡೆಸುವ ಈ ಕಾಲದಲ್ಲಿ ಬೀನಾ ಸರಳ ಜೀವನ ನಡೆಸಿ ಜನಸಾಮಾನ್ಯರ ಬದುಕಿನ ನಡುವೆ ಬದುಕುತ್ತಿರುವುದು ವಿಶೇಷವಾಗಿದೆ

ಹಿಂದೆ ಇವರು ಕೃಷಿ ಭೂಮಿಯಲ್ಲಿ ಜನಸಾಮಾನ್ಯರಂತೆ ಕೃಷಿ ಚಟುವಟಿಕೆಯಲ್ಲಿ ಒಂದಾದ ನಾಟಿ ಪ್ರಕ್ರಿಯೆಯಲ್ಲಿ ಬಾಗವಹಿಸಿದ್ದು ನಾವು  ಇಲ್ಲಿ ಸ್ಮರಿಸಿಕೊಳ್ಳಬಹುದು

ಬೀನಾ ವೈದ್ಯ ಅವರು ಈಗಾಗಲೇ ತಮ್ಮ ತಂದೆಯಂತೆ  ಸಮಾಜ ಸೇವೆಗೆ ಮುಂದಾಗಿದ್ದು ಅನೇಕ ದಾನ ಧರ್ಮಗಳಂತ ಸಮಾಜಮುಖಿ ಕೆಲಸವನ್ನು  ಮಾಡುತ್ತಾ ಇದ್ದಾರೆ ಈಗಿನ ಕಾಲದಲ್ಲಿ ದಾನವನ್ನು ನೀಡುವುದೇ ಪ್ರಚಾರಕ್ಕಾಗಿ ಎನ್ನುವಂತೆ  ಮಾಧ್ಯಮ ಪ್ರಚಾರದ ಗೀಳಿಗೆ ಬಿದ್ದಿರುವವರ ಮದ್ಯ  ಇವರು  ಮಾತ್ರ ಯಾವುದೇ ಪ್ರಚಾರವನ್ನು ಭಯಸದ ಮಿತಭಾಷಿ ಗಂಭೀರ ಸ್ವಭಾವದ ಯುವತಿಯಾಗಿದ್ದು

ಸದಾ ಜನಪರ ಕಾಳಜಿಯನ್ನು ಹೊಂದಿರುವ ಇವರು ಈಗಾಗಲೇ ಸಹಕಾರಿ ಕ್ಷೇತ್ರವನ್ನು ಕೂಡ ಪ್ರವೇಶ ಮಾಡಿದ್ದಾರೆ

ನಮ್ಮ ಕರಾವಳಿ ಸಮಾಚಾರವು ಇವರಿಗೆ besta of ಲಕ್ ಹೇಳುತ್ತದೆ

WhatsApp
Facebook
Telegram
error: Content is protected !!
Scroll to Top