ಭಟ್ಕಳ ತಾಲ್ಲೂಕಿನಲ್ಲಿ    ಅನುಸೂಚಿತ ಜಾತಿಗಳ ಮತ್ತು  ಬುಡಕಟ್ಟುಗಳ  ಜಾತಿ ದೌರ್ಜನ್ಯ ಮತ್ತು ಮೇಲುಸ್ತುವಾರಿ ಸಮಿತಿ ಸಭೆ

ಭಟ್ಕಳ :ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ನಿಯಂತ್ರಣ) ಜಾತಿ ದೌರ್ಜನ್ಯ ಮತ್ತು ಮೇಲುಸ್ತುವಾರಿ ಸಮಿತಿಯ ಸಭೆಯನ್ನು ಉಪ ವಿಭಾಗ ಮಟ್ಟದಲ್ಲಿ  ಆಯುಕ್ತರು ಸಮಾಜ ಕಲ್ಯಾಣ ಇಲಾಖೆ ಇವರ ಆದೇಶದ ಪ್ರಕಾರ  ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಹಾಯಕ ಆಯುಕ್ತರ ಕಚೇರಿ, ನಡೆಸಲಾಯಿತು

ಹೌದು ವಿಕ್ಷರೇ ಭಟ್ಕಳ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯಿತು  ಈ ಸಂದರ್ಭದಲ್ಲಿ  ನಾಮ ನಿರ್ದೇಶೀತ ಸದಸ್ಯರಾದ ಮಾದೇವ ಬಾಕಡ ಮತ್ತು ಹೊನ್ನವರದ  ಅಳoಕ್ಕಿ  ಗಣಪತಿ ತಿಪ್ಪ ಹಲ್ಲೆರ್ ಅವರು ಸಭೆಯಲ್ಲಿ ಭಾಗವಸಿದ್ದರು

ಈ ಸಂದರ್ಭದಲ್ಲಿ ಈ ಸದಸ್ಯರು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರಕಾರ ಜಾರಿಗೆ ತಂದಿರುವ ಯಾವುದೇ ಯೋಜನೆಗಳು ಮುಟ್ಟುತ್ತಿಲ್ಲ ಎಂದು ಆಕ್ರೋಶವನ್ನು ವ್ಯಕ್ತ ಪಡಿಸಿದರು

ಅಧಿಕಾರಿಗಳು ಈ ಸಭೆಗೆ ಹಾಜರಾಗುವ ಮೊದಲು ಸರಿಯಾದ ದಾಖಲೆಗಳನ್ನು ತೆಗೆದುಕೊಂಡು ಬರುವುದು ಅವಶ್ಯಕವಾಗಿರುತ್ತದೆ ಆದರೆ  ಸಭೆಗೆ ಬರುವ ಅಧಿಕಾರಿಗಳು ದಾಖಲೆ ಇಲ್ಲದೆ ಬರುತ್ತಾರೆ ಕಟಾಚಾರಕ್ಕೆ ಸಭೆಯನ್ನು ನಡೆಸುಧಾದರೆ  ಸಭೆಯನ್ನು ನಡೆಸಬೇಡಿ ಎಂದು ಗಣಪತಿ ತಿಪ್ಪ ಹಲ್ಲೆರ್ ಆಕ್ರೋಶ ವ್ಯಕ್ತ ಪಡಿಸಿದರು

ಹಾಗೆ ಇದೆ ಸಂದರ್ಭದಲ್ಲಿ  ಮಾದೇವ ಬಾಕಡ ಅವರು ಮಾತನಾಡಿ ಪರಿಶಿಷ್ಟರಿಗೆ ದೊರೆಯುವ ಸರಕಾರಿ ಸೌಲಭ್ಯಗಳು ಪಲಾನುಭವಿಗಳನ್ನು ತಲುಪುತ್ತಿಲ್ಲ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಪರಿಶಿಷ್ಟರಿಗಾಗಿ ಬರುವ ಕಾಮಗಾರಿಯ ಬಗ್ಗೆ ಪರಿಶಿಷ್ಟರ ಗಮನಕ್ಕೆ ತರದೇ ಅವರನ್ನು ವಿಶ್ವಾಸಕ್ಕೆ ತೆಗೆಕೋಳ್ಳದೇ  ಕಾಟಾಚಾರಕ್ಕೆ ನಡೆಸಲಾಗುತ್ತದೆ ಎಂಧು ಆಕ್ರೋಶ ವ್ಯಕ್ತಪಡಿಸಿದರು

ಒಟ್ಟಾರೆ ನಡೆದ ಸಭೇಯಾಧ್ಯOತ  ನಾಮನಿದೇಶನ ಸದಸ್ಯರು ಪರಿಶೀಷ್ಟರ ಸಮಾಜಕ್ಕೆ  ಸರಕಾರದ ಸೌಲಭ್ಯ ಸರಿಯಾಗಿ ಮುಟ್ಟುತ್ತಿಲ್ಲ ಎಂದು ಆಕ್ರೋಶವನ್ನು ವ್ಯಕ್ತ ಪಡಿಸಿದರು

WhatsApp
Facebook
Telegram
error: Content is protected !!
Scroll to Top