ಭಟ್ಕಳ: ನೂತನ ಕಟ್ಟಡಗಳ ನಿರ್ಮಾಣದಿಂದ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುತ್ತದೆ. ವಿದ್ಯಾಭ್ಯಾಸಕ್ಕೆ ಮತ್ತಷ್ಟು ಅವಕಾಶ ದೊರೆಯಲಿದೆ. ಉತ್ತಮ ಅಂಕ ಪಡೆದು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ ಎನ್ನುವ ಭರವಸೆಯಿಂದ ಭಟ್ಕಳ ಎಜುಕೇಶನ್ ಟ್ರಸ್ಟ್ ಕಟ್ಟಡ ನಿರ್ಮಿಸುತ್ತಿದೆ ಎಂದು ಗೋಕರ್ಣ ಪರ್ತಗಾಳಿ ಮಠದ ಪೀಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ಅವರು ಭಟ್ಕಳದ ನ್ಯೂ ಇಂಗ್ಲೀಷ ಶಾಲೆಯ ಆವರಣದಲ್ಲಿ ಶ್ರೀ ಗುರು ವಿದ್ಯಾಧಿರಾಜ ಪಿ.ಯು. ಕಾಲೇಜಿನ ನೂತನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನಡೆಸಿದರು. ವಿದ್ಯೆಯನ್ನು ವಿನಯತೆಯಿಂದ ಕಲಿಯಬೇಕು. ಮೊದಲು ವಿದ್ಯಾರ್ಥಿಗಳು ಕಂಪೋರ್ಟ್ ಜೋನ್‌ನಿಂದ ಹೊರಬರಬೇಕಿದೆ. ಕಾಲೇಜಿಗೆ ತೆರಳಲು ಹೋಲಿಕೆಯನ್ನು ಮಾಡಬಾರದು. ತಮ್ಮ ಗುರುವರ್ಯರು ಈ ಕಾಲೇಜಿನ ನಿರ್ಮಾಣಕ್ಕೆ ಆಶಿರ್ವಾದ ಮಾಡಿದ್ದರು. ಇಂದು ಅವರು ಸನ್ಯಾಶಾಶ್ರಮ ಸೇರಿದ ಮಿತಿಯಂದೆ ನಾವು ಶಿಲಾನ್ಯಾಸ ಮಾಡುತ್ತಿರುವದು ಗಮನಿಸಿದರೆ ಅವರ ಸಂಪೂರ್ಣ ಆಶೀರ್ವಾದ ನೂತನ ಕಟ್ಟಡಕ್ಕೆ ಇದೆ. ಮುಂದಿನ ದಿನಗಳಲ್ಲೂ ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಂಡು ಬದುಕು ರೂಪಿಸಿಕೊಳ್ಳಲಿ ಎಂದು ಶ್ರೀಗಳು ಹರಸಿದರು.
ಮ್ಯಾನೆಜಿಂಗ್ ಟ್ರಸ್ಟಿ ರವೀಂದ್ರ ಕೊಲ್ಲೆ ಮಾತನಾಡಿ ೧೯೩೫ರಲ್ಲಿ ಕೆಲವೆ ಕೆಲವು ಮನೆತನ ಹಾಗೂ ಊರಿನವರ ಸಹಕಾರದಿಂದ ಈ ಸಂಸ್ಥೆ ಆರಂಭಗೊAಡು ೯೦ ಸಂವತ್ಸರಗಳನ್ನು ಪೂರೈಸಿದೆ. ಸಂಸ್ಥೆಯು ನಡೆದು ಬಂದ ಹಾದಿ ಹಾಗೂ ಅಭಿವೃದ್ದಿಯ ಕುರಿತು, ವಿವಿಧ ಮಠದ ಸ್ವಾಮೀಜಿಗಳು ನೀಡಿದ ಕೊಡೆಗೆಯ ಕುರಿತು ವಿಸ್ತಾರವಾಗಿ ತಿಳಿಸಿದರು. ಆರಂಭದಲ್ಲಿ ಶ್ರೀಗಳನ್ನು ಪೂರ್ಣಕುಂಭದೊAದಿಗೆ ಸ್ವಾಗತಿಸಿಲಾಯಿತು. ನ್ಯೂ ಇಂಗ್ಲೀಷ ಶಾಲೆಗೆ ಆಗಮಿಸಿದ ಶ್ರೀಗಳು ತರಗತಿಗೆ ತೆರಳಿ ವೀಕ್ಷಿಸಿದರು. ಭಟ್ಕಳ ಎಜುಕೇಶನ್ ಟ್ರಸ್ಟಿ ಮ್ಯಾನೆಜರ್ ರಾಜೇಶ ನಾಯಕ ದಂಪತಿ ಶ್ರೀಗಳಿಗೆ ಪಾದಪೂಜೆ ನೇರವೇರಿಸಿದರು. ಟ್ರಸ್ಟ್ನ ಚೇರಮೇನ್ ಡಾ. ಸುರೇಶ ನಾಯಕ, ವಾಯ್ಸ್ ಚೇರಮೇನ್ ಸುರೇಂದ್ರ ಶ್ಯಾನಭಾಗ, ಟ್ರಸ್ಟಿಗಳಾದ ರಮೇಶ ಖಾರ್ವಿ, ಗುರುದತ್ತ ಶೇಟ್, ಶ್ರೀಧರ ಶ್ಯಾನಭಾಗ ಉಪಸ್ಥಿತರಿದ್ದರು. ಕಾಲೇಜಿನ ವಿವಿಧ ವಿಭಾಗಗಳ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು, ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ ಇತರರು ಇದ್ದರು. ಟ್ರಸ್ಟಿ ನಾಗೇಶ ಭಟ್ ವಂದಿಸಿದರು. ಪ್ರಾಚಾರ್ಯ ವಿಶ್ವನಾಥ ಭಟ್ ಕಾರ್ಯಕ್ರಮ ನಿರೂಪಿಸಿದರು.