ಮುಠ್ಠಳ್ಳಿ ಗ್ರಾಮದ ಶ್ರೀ ಕಟ್ಟೇವೀರ ಮತ್ತು ಪರಿವಾರ ದೇವರ ೨೩ನೇ ವರ್ಷದ ವಾರ್ಷಿಕ ವರ್ಧಂತೋತ್ಸವ ಕಾರ್ಯಕ್ರಮ ಸಂಪನ್ನ

ಭಟ್ಕಳ: ಇಲ್ಲಿನ ಮುಠ್ಠಳ್ಳಿ ಗ್ರಾಮದ ಶ್ರೀ ಕಟ್ಟೇವೀರ ಮತ್ತು ಪರಿವಾರ ದೇವರ ೨೩ನೇ ವರ್ಷದ ವಾರ್ಷಿಕ ವರ್ಧಂತೋತ್ಸವ ಕಾರ್ಯಕ್ರಮವು ಭಕ್ತರ ಹರ್ಷೊದ್ಘಾರಗಳ ನಡುವೆ ಅತಿ ವಿಜೃಂಭಣೆಯಿದ ನೇರವೇರಿತು


ಬೆಳಿಗ್ಗೆಯಿಂದಲ್ಲೇ ಶ್ರೀ ಕಟ್ಟೇವೀರ ದೇವರಿಗೆ ಧಾರ್ಮಿಕ ಪೂಜಾ ವಿಧಿವಿಧಾನಗಳು ನಡೆದಿದ್ದು. ಮಧ್ಯಾಹ್ನ ಎಲ್ಲಾ ಕಾರ್ಯಕ್ರಮದ ಬಳಿಕ ಶ್ರೀ ಕಟ್ಟೇವೀರ ದೇವರಿಗೆ ಹಾಗೂ ಪರಿವಾರ ದೇವರಿಗೆ ಮಹಾಪೂಜೆ ಸಲ್ಲಿಸಲಾಯಿತು. ಮದ್ಯಾಹ್ನ ೧ ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂಧರ್ಭದಲ್ಲಿ ಸಾವಿರಾರು ಭಕ್ತರು ದೇವರ ಪ್ರಸಾಧ ಭೋಜನವನ್ನು ಸ್ವೀಕರಿಸಿದರು.
ಸಂಜೆ ೬ ಗಂಟೆಯಿದ ೧೦ ಗಂಟೆಯವರೆಗೆ ಇಲ್ಲಿನ ಸ್ಥಳಿಯ ಪ್ರತಿಭೆಗಳಿಂದ ನೃತ್ಯ ಮತ್ತು ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮಗಳು ಎಲ್ಲಾ ಮನಸೆಳೆಯಿತು. ಅಂತರ್‌ಜಿಲ್ಲಾ ಭಜನಾ ಕುಣಿತ ಸ್ಪರ್ಧಾ ಕಾರ್ಯಕ್ರಮ ಭಕ್ತರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಈ ಸಂಧರ್ಭದಲ್ಲಿ ಶ್ರೀ ಕಟ್ಟೇವೀರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಸೇರಿದಂತೆ ಸಾವಿರಾರು ಸಾರ್ವಜನಿಕರು ಇದ್ದರು.

WhatsApp
Facebook
Telegram
error: Content is protected !!
Scroll to Top