ಸಚಿವರಿಂದ ಗೋ ಕಳ್ಳರ ವಿರುದ್ಧ ಕಠಿಣ ಕ್ರಮದ ಹೇಳಿಕೆ : ರಾಜ್ಯದ ಜನತೆಯಿಂದ ವ್ಯಾಪಕ ಬೆಂಬಲ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಗೋ ಕಳ್ಳತನ ಹಾಗೂ ಇತ್ತೀಚೆಗೆ ನಡೆದ ಗರ್ಭ ಗೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ನೀಡಿದ ಗೋ ಕಳ್ಳರ ವಿರುದ್ಧದ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಗೋ ಕಳ್ಳತನ ಪ್ರಕರಣಗಳು ವ್ಯಾಪಕವಾಗಿ ನಡೆಯುತ್ತಿರುವ ವಿಚಾರ ಪದೆ ಪದೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದೆ. ಇತ್ತಿಚೇಗೆ ಹೊನ್ನಾವರದ ತಾಲೂಕಿನಲ್ಲಿ ಗರ್ಭದ ಗೋವೊಂದನ್ನ ಹತ್ಯೆ ಮಾಡಿ ಕರುವೊಂದನ್ನ ಕೊಂದು ಗೋವಿನ ಮಾಂಸವನ್ನ ಮಾರಾಟ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕೆಲವರನ್ನ ಬಂಧಿಸಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಇನ್ನೂ ಪತ್ತೆಯಾಗಿಲ್ಲ. ಗರ್ಭದ ಗೋ ಹತ್ಯೆ ಆದ ಬಳಿಕ ಭಟ್ಕಳದ ಮುಸ್ಲಿ ಸಂಘಟನೆಯ ಮುಖ್ಯಸ್ಥರು ಕೂಡ

ಸುದ್ದಿಗೋಷ್ಠಿ ನಡೆಸಿ ಕದ್ದ ಗೋ ಮಾಂಸವನ್ನ ಎಂದು ನಾವು ತಿನ್ನುವುದಿಲ್ಲವೆಂದು ಹೇಳಿಕೆ ಕೂಡ ನೀಡಿದ್ದರು..

ಈ ನಡುವೆ ಓರ್ವ ಆರೋಪಿಯನ್ನ ಪೊಲೀಸರು ಆತನಿಗೆ ಪಂಚನಾಮೆಗೆಂದು ಕರೆದುಕೊಂಡು ಹೋಗಿದ್ದ ವೇಳೆ ಆತ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆ ಮಾರಣಾಂತಿ ಹಲ್ಲೆಗೆ ಕೂಡ ಮುಂದಾಗಿದ್ದಾಗ ಅನಿವಾರ್ಯವಾಗಿ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿಬೇಕಾಗಿ ಬಂತು ಎನ್ನುವ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ ನಾರಾಯಣ ಅವರೆ ಖಚಿತ ಪಡಿಸಿದ್ದಾರೆ. ಇನ್ನೂ ತಲೆ ಮರೆಸಿಕೊಂಡಿರುವ ಆರೋಪಿ ಸುಳಿವು ನೀಡಿವರಿಗೆ ಪೊಲೀಸ್‌ ಇಲಾಖೆಯಿಂದ ಬಹುಮಾನ ಕೂಡ ಘೋಷಣೆ ಮಾಡಲಾಗಿದೆ. ಪೊಲೀಸರು ಅದೆಷ್ಟೆ ಪ್ರಯತ್ನ ಮಾಡತ್ತಾ ಇದ್ದರೂ ಆರೋಪಿ ಪತ್ತೆ ಇದುವರೆಗೂ ಆಗಿಲ್ಲ.

ಜಿಲ್ಲೆಯಲ್ಲಿ ನಡೆಯುತ್ತಿರುವ ಗೋ ಕಳ್ಳತನ ಬಗ್ಗೆ ಇದುವರೆಗೆ ಯಾರೂ ಕೂಡ ಅಷ್ಟೊಂದು ಗಟ್ಟಿಯಾಗಿ ಧ್ವನಿ ಎತ್ತಿರಲಿಲ್ಲ.ಆಗಾಗ ಅಲ್ಲಲ್ಲಿ ಮನವಿ,ಪ್ರತಿಭಟನೆ ಮಾಡುವುದರಲ್ಲೆ ಮುಗಿದು ಹೋಗುತ್ತಿತ್ತು.ಆದರೆ ಗೋ ಹತ್ಯೆ ಪ್ರಕರಣದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಮಕಾಂಳ್ ವೈದ್ಯ ಅವರು ಯಾರೆ ಗೋ ಕಳ್ಳತನ ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಬಹಿರಂಗವಾಗಿ ಮಾಧ್ಯಮ ಮುಂದೆ ಹೇಳಿಕೆ ನೀಡದ್ದಾರೆ. ಆದರೆ ಅವರು ಎಲ್ಲಿಯೂ ಒಂದು ಸಮುದಾಯಕ್ಕೆ ಟಾರ್ಗೆಟ್ ಮಾಡಿ ಹೇಳಿಕೆ ನೀಡಿಲ್ಲ. ಅದು ಯಾರೆ ಆಗಿದ್ದರೂ ಅಂತಹವರ ವಿರುದ್ಧ ಯಾವುದೇ ಮುಲ್ಲಾಜಿಲ್ಲದೆ ಕಠಿಣ ಕ್ರಮ ಜರುಗಿಸುವುದಾಗಿ ನೇರ ನೇರವಾಗಿ ಹೇಳಿಕೆ ನೀಡಿದ್ದಾರೆ.

ಅವರ ಹೇಳಿಕೆಯನ್ನ ಅನೇಕ ಹಿಂದೂ ಪರ ಸಂಘಟನೆ ಜೊತೆಗೆ ಅನೇಕ ಮುಸ್ಲಿಂ ಮುಖಂಡರು ಸಚಿವ ಮಂಕಾಳ್ ವೈದ್ಯ ಅವರ ಹೇಳಿಕೆಗೆ ಮೆಚ್ಚುಗೆ 

ವ್ಯಕ್ತಪಡಿಸುತ್ತಿದ್ದಾರೆ. ಅವರು ತಮ್ಮ ಮಾತಿನಲ್ಲಿ ಯಾವುದೇ ಒಂದು ಸಮುದಾಯವನ್ನ ಗುರಿಯಾಗಿರಿಸಿಕೊಂಡು ಹೇಳಿಲ್ಲ. ಗೋ ಕಳ್ಳತನ ಮಾಡುವವರ ಬಗ್ಗೆ ಅಷ್ಟೆ ಮಾತ್ನಾಡಿದ್ದಾರೆ.

ಆದರೆ ಅವರ ಈ ಹೇಳಿಕೆ ಬಳಿಕ ಕೆಲ ಸಂಘಟನೆಗಳು ಹಾಗೂ ಒಂದಿಷ್ಟು ಮುಖಂಡರ ಗೋಕಳ್ಳರ ವಿರುದ್ಧ ಮಂಕಾಳ್ ವೈದ್ಯ ಅವರು ನೀಡಿದ ಹೇಳಿಯೇ ಅಪರಾಧ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿರುವುದನ್ನ ನೋಡಿದ್ದರೆ ಅಂದು ಗೋ ಕಳ್ಳತನದ ಬಗ್ಗೆ ಇವರೆಲ್ಲಾ ವಿರೋಧ ಮಾಡಿಕೊಂಡು ಬಂದಿರುವುದು ಬರಿ ನಾಟಕ ಎನ್ನುವಂತೆ ಕಂಡು ಬರುತ್ತಿದೆ ಎಂದು ಅನೇಕ ಮುಖಂಡರು ಇದೀಗ ತಮ್ಮ ಅಭಿಪ್ರಾಯವನ್ನ ಹಂಚಿಕೊಳ್ಳುತ್ತಿದ್ದಾರೆ.

WhatsApp
Facebook
Telegram
error: Content is protected !!
Scroll to Top