ಭಟ್ಕಳದಲ್ಲಿ ಕಟ್ಟಡ ಕಾರ್ಮಿಕರ ಕುಟುಂಬದ ಗರ್ಭಿಣಿ ಮಹಿಳೆಯರಿಗೆ ಹೇರಿಗೆ ಧನ ಸಹಾಯ ಬಾಂಡ್‌ ವಿತರಿಸಿದ ಸಚಿವ ಮಂಕಾಳ ವೈದ್ಯರಿಂದ

ನಮ್ಮ ಜೀವನದ ಪ್ರತಿಯೊಂದ ಹಂತದಲ್ಲೂ ಈ ಕಾರ್ಮಿಕರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಸಚಿವ ಮಂಕಾಳು ವೈದ್ಯ

ಭಟ್ಕಳ : ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ಅಡಿಯಲ್ಲಿ ಗರ್ಬಿಣಿ ಮಹಿಳೆಯರ ಸಹಾಯದ ಧನ ಬಾಂಡ್‌ ಮತ್ತು ಸೆಪ್ಟಿ ಪ್ರೊಕ್ಯೂರ್‌ ಮೆಂಟ್‌ ಅಡಿಯಲ್ಲಿ ತರಬೇತಿ ಪಡೆದ ಕಾರ್ಮಿಕರಿಗೆ ಕಿಟ್‌ ಹಾಗು ಪ್ರಮಾಣ ಪತ್ರವನ್ನು ಸಚಿವ ಮಂಕಾಳು ವೈದ್ಯರು ವಿತರಣೆ ಮಾಡಿದರು

ಹೌದು ವೀಕ್ಷಕರೆ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ಅಡಿಯಲ್ಲಿ 188 ಜನ ಗರ್ಬಿಣಿಯರಿಗೆ ತಲಾ 50000 ದಂತೆ 59,00000 ಹಾಗು ಮೂರು ಜನ ಗರ್ಬಿಣಿಯರಿಗೆ 30000 ಸಾವಿರದಂತೆ 90000 ರೂ ಮೊತ್ತದ ಹೇರಿಗೆ ಧನ ಸಹಾಯ ಬಾಂಡ್‌ ಗಳನ್ನು ಸಚಿವ ಮಂಕಾಳು ವೈದ್ಯರು ವಿತರಿಸಿದರು ಹಾಗೆ ಸೆಪ್ಟಿ ಪ್ರೊಕ್ಯೂರ್‌ ಮೆಂಟ್‌ ಅಡಿಯಲ್ಲಿ ತರಬೇತಿ ಪಡೆದ 280 ಜನ ಕಾರ್ಮಿಕರಿಗೆ ಪ್ರಮಾಣ ಪತ್ರ ಮತ್ತು ಕಿಟ್ಗಳನ್ನು ವಿತರಿಸಿದರು

ಪಲಾನುಭವಿಗಳಿಗೆ ಬಾಂಡ್‌ ಪ್ರಮಾಣ ಪತ್ರ ಕಿಟ್ಗಳನ್ನು ವಿತರಿಸಿದ ಮಾತನಾಡಿದ ವೈದ್ಯರು ನಮ್ಮ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಕಾರ್ಮಿಕರನ್ನು ಉಪಯೋಗಿಸಿಕೊಳ್ಳುತ್ತೆವೆ ಹಾಗೆ ನಾವು ಅವರನ್ನು ಗೌರವಪೋರ್ವಕವಾಗಿ ನೋಡಿಕೊಳ್ಳುವುದು ಕೂಡ ಬಹುಮುಖ್ಯವಾಗಿರುತ್ತದೆ ಸಚಿವನಾಗಿ ನಾನು ನಿಮ್ಮ ಎಲ್ಲಾ ಕಷ್ಟಗಳಿಗೆ ಸ್ಪಂದಿಸುತ್ತೆನೆ ನಿಮ್ಮ ಯಾವುದೆ ಕಷ್ಟಕಾರ್ಪಣ್ಯಗಳಿಗೆ ನನ್ನನ್ನು ನೀವು ಸಂಪರ್ಕಿಸ ಬಹುದಾಗಿದೆ ನಾನು ಸದಾ ನಿಮ್ಮ ಬೆಂಬಲಕ್ಕೆ ನಿಂತಿರುತ್ತೆನೆ ಎಂದು ಹೇಳಿದರು

ಈ ಸಂದರ್ಬದಲ್ಲಿ ತಹಶಿಲ್ದಾರರಾದ ಕೋಳ ಶೆಟ್ಟಿ ತಾಲೂಕ ಪಂಚಾಯತ್‌ ಮುಖ್ಯಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶ ನಾಯಕ ಭಟ್ಕಳ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ವೆಂಕಟೇಶ ನಾಯ್ಕ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ರಾಜು ನಾಯ್ಕ ಕೊಪ್ಪ ಜಾಲಿ ಪಟ್ಟಣ ಪಂಚಾಯತ್‌ ಸದಸ್ಯ ರಮೇಶ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top