ಮಾ. 2 ರಿಂದ ಶ್ರೀ ಖೇತಪಯ್ಯ ನಾರಾಯಣ ದೇವಸ್ಥಾನದ ಪುನ‌ರ್ ಪ್ರತಿಷ್ಠಾ ಅಷ್ಟಬಂಧ

ದೇವಸ್ಥಾನ ಅಭಿವೃದ್ಧಿ ಮಂಡಳಿಯ ಗೌರವಾಧ್ಯಕ್ಷ ವೆಂಕಟೇಶ ನಾಯ್ಕ ಅವರಿಂದ ಆಮಂತ್ರಣ ಬಿಡುಗಡೆಗೊಳಿಸಿ ಮಾಹಿತಿ ಅನಾವರಣ

ಭಟ್ಕಳ: ಇಲ್ಲಿನ ಮೂಡಭಟ್ಕಳದ ಪುರಾತನ ಶಿಲ್ಪಕಲೆ ಸೌಂದರ್ಯಕ್ಕೆ ಹೆಸರಾದ ಶ್ರೀ ಖೇತಪಯ್ಯ ನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮಾರ್ಚ 2 ರವಿವಾರದಿಂದ ಮಾರ್ಚ 4 ಮಂಗಳವಾರದ ರವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಸ್ಥಾನ ಅಭಿವೃದ್ಧಿ ಮಂಡಳಿಯ ಗೌರವಾಧ್ಯಕ್ಷ ವೆಂಕಟೇಶ ತಿಮ್ಮಯ್ಯ ನಾಯ್ಕ ಹೇಳಿದರು.

ದೇವಸ್ಥಾನದ ಆವರಣದಲ್ಲಿ ಪುನರ್ ಪ್ರತಿಷ್ಟೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. 1545 ව ಗೋವಾದ ಕುಡತಿರಿಯಿಂದ ಭಟ್ಕಳಕ್ಕೆ ಬಂದಿದ್ದ ಚಿನ್ನದ ವ್ಯಾಪಾರಿ ಸಾರಸ್ವತ ಖೇತಪ್ಪಯ್ಯ ಎಂಬಾತನು ಈ ಸುಂದರವಾದ

ದೇವಸ್ಥಾನವನ್ನು ನಿರ್ಮಾಣ ಮಾಡಿದರು. ಈ ಸಂದರ್ಭದಲ್ಲಿ ರಾಣಿ ಚೆನ್ನಾಭಯರಾದೇವಿ ಈ ದೇವಾಲಯಕ್ಕೆ ಅನುದಾನವನ್ನು ನೀಡಿದ್ದಾಳೆ ಎಂಬ ಶಾಸನವು ಇದೆ. ಈ ದೇವಾಲಯದ ಮೇಲೆ ಆರು 6 ಶಾಸನಗಳ ದಾಖಲೆ ಇದೆ. ಈ ಭಾಗದಲ್ಲಿ ಸಾರಸ್ವತರು ಈ ದೇವಸ್ಥಾನವಲ್ಲದೇ ಒಟ್ಟು 12 ದೇವಸ್ಥಾನವನ್ನು ನಿರ್ಮಿಸಿದ್ದಾರೆ ಎಂದರು.

ಪುರಾತನವಾದ ದೇವಸ್ಥಾನವನ್ನು ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾಡಲು ತೀರ್ಮಾನಿಸಿದ್ದು, ಇದಕ್ಕೆ ಎಲ್ಲ ಸಮಾಜದ ಜನರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮವನ್ನು ಮಾಡಲು ತೀರ್ಮಾನಿಸಿದ್ದೇವೆ. ಮಾರ್ಚ 3 ರಂದು 11.44 ಕ್ಕೆ ಸಲ್ಲುವ ವೃಷಭ ಲಗ್ನ    ಸುಮುಹೂರ್ತದಲ್ಲಿ ಶ್ರೀ ನಾರಾಯಣ ದೇವರ ಪುನರ್ ಪ್ರತಿಷ್ಟ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಗುರುಪುರದ ಶ್ರೀ ವಜ್ರದೇಹಿ ಮಠದ ಶ್ರೀಗಳಾದ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ನೆರವೇರಿಸಲಾಗುವುದು ಎಂದರು.

ಅಂದು ಮಧ್ಯಾಹ್ನ 1 ಗಂಟೆಯಿಂದ 3 ರ ತನಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳಿಂದ ಧಾರ್ಮಿಕ ಪ್ರವಚನೆ ಹಾಗೂ ಆಶೀರ್ವಚನ ನಡೆಯಲಿದೆ. ಶ್ರೀ ದೇವರಿಗೆ ಬೆಳ್ಳಿ ಕವಚ ಅರ್ಪಿಸುವ ಕಾರ್ಯಕ್ರಮವೂ ನಡೆಯಿದೆ ಎಂದರು.

ಮಾರ್ಚ 2 ರಂದು ಮತ್ತು ಮಾರ್ಚ 3 ರಂದು ಸಂಜೆ ಧರ್ಮರಕ್ಷಣೆ ಧರ್ಮಪ್ರಚಾರ ಸಭಾ ಕಾರ್ಯಕ್ರಮ. ನಡೆಯಲಿದೆ. ಈ ಸಭೆಯಲ್ಲಿ ಎಲ್ಲ ಸಮಾಜದ ಹಾಗೂ ದೇವಸ್ಥಾನಗಳ ಪ್ರಮುಖರು ಉಪಸ್ಥಿತರಿರುವರು. ಮಹಾ ಜನರ ಸಹಕಾರದೊಂದಿಗೆ ಲೋಕ ಕಲ್ಯಾಣಾರ್ಥವಾಗಿ ನಡೆಯುವ ಈ ದೇವತಾ ಕಾರ್ಯಕ್ರಮಕ್ಕೆ ಎಲ್ಲ ಸದ್ಭಕ್ತರು ಆಗಮಿಸಿ ತನು, ಮನ, ಧನದೊಂದಿಗೆ ಸಹಕರಿಸಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ, ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವೆಂಕಟ್ರಮಣ ನಾಯ್ಕ, ಪ್ರಮುಖರಾದ ಶ್ರೀನಿವಾಸ ನಾಯ್ಕ, ಈಶ್ವರ ನಾಯ್ಕ, ರವಿಚಂದ್ರ ನಾಯ್ಕ, ನಾಗರಾಜ ಶೆಟ್ಟಿ, ಕುಮಾರ ನಾಯ್ಕ, ತಿರುಮಲ ನಾಯ್ಕ, ಕೃಷ್ಣ ನಾಯ್ಕ, ಪ್ರಶಾಂತ ಶೆಟ್ಟಿ, ಮೋಹನ ನಾಯ್ಕ ಇದ್ದರು.

WhatsApp
Facebook
Telegram
error: Content is protected !!
Scroll to Top