ತಮ್ಮ ಮೇಲಿನ ಕರೆಂಟ್ ಬಿಲ್ ಅಪಪ್ರಚಾರಕ್ಕೆ ತೆರೆ ಎಳೆದ ಸಚಿವ ಮಾಂಕಾಳ ವೈದ್ಯ

ಪ್ರತಿ ಪ್ರತಿ ವರ್ಷ ಕೋಟಿಗಟ್ಟಲೆ ಕರೆಂಟ್ ಬಿಲ್ ಕಟ್ಟುತ್ತೇನೆ ಅಪಪ್ರಚಾರ ನಿಲ್ಲಿಸಿ ಸಚಿವ ವೈದ್ಯರ ಹೇಳಿಕೆ

ಕಾರವಾರ : ಸತ್ಯತಿಳಿದು ಮಾತನಾಡಬೇಕು ನಾನು ಯಾವುದೇ ಕರೆಂಟ್ ಬಿಲ್ ಬಾಕಿ ಇಟ್ಟುಕೊಳ್ಳಲಾರೆ ನಾನು ತಿಂಗಳಿಗೆ ಲಕ್ಷಗಟ್ಟಲೆ ವರ್ಷಕ್ಕೆ ಕೋಟಿ ಕೋಟಿ ಕರೆಂಟ್ ಬಿಲ್  ಕಟ್ಟುತ್ತೇನೆ ಯಾವುದೇ ಕರೆಂಟ್ ಬಿಲ್ ಅನ್ನು ನಾನು ಉಳಿಸಿಕೊಂಡಿಲ್ಲ ಎಂದು ತಮ್ಮ ಮೇಲೆ ಕರೆಂಟ್ ಬಿಲ್ ಕಟ್ಟದ ಸುಳ್ಳು ಅಪಪ್ರಚಾರಕ್ಕೆ ಸಚಿವ ಮಾಂಕಾಳ ವೈದ್ಯರು ಸ್ಪಸ್ಟಿಕರಣ  ನೀಡಿದರು

ಹೌದು ವೀಕ್ಷಕರೇ ಹಲವಾರು ದಿನಗಳಿಂದ ಸಚಿವ ಮಾಂಕಾಳ ವೈದ್ಯರ ವಿರುದ್ಧ ವರ್ಷಗಳಿಂದ ಕರೆಂಟ್ ಬಿಲ್ ಕಟ್ಟಲಿಲ್ಲ ಎಂಬ ಅಪಪ್ರಚಾರ ಕೇಳಿಬರುತ್ತಿತ್ತು  ಸಚಿವರು  ತಮ್ಮವಿರುದ್ಧದ್ದ ಈ ಅಪಪ್ರಚಾರದ ಬಗ್ಗೆ  ತಲೆಯನ್ನೇ ಕೆಡಿಸಿಕೊಂಡಿರಲೇ ಇಲ್ಲವಾಗಿತ್ತು ಆದರೆ ಇಂದು ಕೆಡಿಪಿ ಸಭೆಯ ನಂತರ  ಈ ಆರೋಪದ ಬಗ್ಗೆ ಮಾಧ್ಯಮದ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು ಇದಕ್ಕೆ ಅವರು ಉತ್ತರಿಸಿ ನಾನು ತಿಂಗಳಿಗೆ ಲಕ್ಷಾಂತರ ಕರೆಂಟ್ ಬಿಲ್ ಕಟ್ಟುತ್ತೇನೆ  ಒಂದು ವರ್ಷಕ್ಕೆ ಕೋಟಿಗಟ್ಟಲೆ ಬಿಲ್ ಕಟ್ಟುತ್ತೇನೆ ಎಂಟು ಲಕ್ಷ ವರ್ಷದ ಬಿಲ್ ಆಗಲು ಹೇಗೆ ಸಾಧ್ಯ ನಮ್ಮ ವಿದ್ಯಾ ಸಂಸ್ಥೆ ಬಡ ವಿದ್ಯಾರ್ಥಿಗಳಿಗೆ  ವಿದ್ಯಾಧಾನ ಮಾಡುತ್ತ ಬಂದಿದೆ  ವಿದ್ಯಾ ಸಂಸ್ಥೆಯ ಯಾವುದೇ ಬಿಲ್ ಬಾಕಿ ಇಲ್ಲ ನಾನು ಶಿಕ್ಷಣ ಸಂಸ್ಥೆಯನ್ನು ಹಣಮಾಡಲು ನಡೆಸುತ್ತಿಲ್ಲ ಸಮಾಜದ ಉನ್ನತಿಗಾಗಿ ನಡೆಸುತ್ತಿದ್ದೇನೆ ವಿಷಯ ತಿಳಿದು ಮಾತನಾಡಬೇಕು ತಿಳಿಯದಿದ್ರೆ ನಮ್ಮನ್ನು ಸಂಪರ್ಕಿಸಿ ಇಲಾಖೆಯನ್ನು ಸಂಪರ್ಕಿಸಿ  ನಮ್ಮ ಬಗ್ಗೆ ತಿಳಿದು ಕೊಂಡು ಮಾತನಾಡಿ ಮನಸ್ಸಿಗೆ ಬಂದಂತೆ ಅಪಪ್ರಚಾರ ಮಾಡಬೇಡಿ ಎಂದು ಹೇಳಿದರು

WhatsApp
Facebook
Telegram
error: Content is protected !!
Scroll to Top