ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ 10 ಲಕ್ಷ ಚೆಕ್ ವಿತರಿಸಿದ ಸಚಿವರು
ಕೆಲಸ ಒತ್ತಡದ ನಡುವೆಯು ರಾತ್ರಿ ವೇಳೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಗೆ ತರಳಿ ನಾಪತ್ತೆಯಾದ ಮೀನುಗಾರನ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ₹10 ಲಕ್ಷ ಮೊತ್ತದ ಚೆಕ್’ನ್ನು ಕುಟುಂಬಕ್ಕೆ ಹಸ್ತಾಂತರಿಸಿದ ಮೀನುಗಾರಿಕೆ ಸಚಿವ ಶ್ರೀ ಮಂಕಾಳ ಎಸ್ ವೈದ್ಯ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಬಂದರಿನಿಂದ ಜನವರಿ 02ರಂದು ಮೀನುಗಾರಿಕೆಗೆ ತೆರಳಿದ್ದ ಗಂಗೊಳ್ಳಿ ನಿವಾಸಿ ನಾರಾಯಣ ಮೊಗವೀರ (58ವರ್ಷ ) ಎಂಬುವವರು ಆಕಸ್ಮಿಕ ವಾಗಿ ಕಾಲು ಜಾರಿ ನೀರಿಗೆ ಬಿದ್ದು ಕಾಣೆಯಾಗಿದ್ದರು ಇಂದು ಮೀನುಗಾರನ ಮನೆಗೆ ತೆರಳಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಷರತ್ತಿನ ಮೇರೆಗೆ (Indemnity Bond) ಮೀನುಗಾರಿಕೆ ಸಂಕಷ್ಟ ಪರಿಹಾರ ನಿಧಿಯಿಂದ ₹10 ಲಕ್ಷ ಮೊತ್ತದ ಚೆಕ್’ನ್ನು ಸಚಿವ ಮಂಕಾಳ ವೈದ್ಯರು ಹಸ್ತಾಂತರಿಸಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದರು. ಈ ಸಂಧರ್ಭದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಗೋಪಾಲ ಪೂಜಾರಿಯವರು ಜೊತೆಯಾಗಿದ್ದರು.
ಈ ಹಿಂದೆ ಯಾವ ಸರಕಾರವು ಕುಡಾ ನಾಪತ್ತೆಯಾದ ಮೀನುಗಾರರಿಗೆ ಪರಿಹಾರ ನೀಡಿ ಸಂಕಷ್ಟಕ್ಕೆ ಸಿಲುಕಿರುವ ಮೀನುಗಾರರ ಕುಟುಂಬದ ಕಣ್ಣೀರು ಒರೆಸೋ ಕೆಲಸ ಮಾಡಿರಲಿಲ್ಲ. ಆದರೆ ಶ್ರೀ Siddaramaiah ನವರ ಹಾಗೂ ಶ್ರೀ DK Shivakumar ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಮೀನುಗಾರ ಸಂಕಷ್ಟ ಪರಿಹಾರ ನಿಧಿ ಹಣವನ್ನು ಒಂದೇ ವರ್ಷದಲ್ಲಿ ₹6 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸಿದ್ದಲ್ಲದೆ ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೂ ಕೂಡಾ ಪರಿಹಾರ ನೀಡುವಲ್ಲಿ ಯಶಸ್ವೀಯಾಗಿದೆ.