ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಉತ್ತರ ಕನ್ನಡ ಜಿಲ್ಲಾ ಮಹಿಳಾ ಘಟಕದ ಭಟ್ಕಳ ತಾಲೂಕು ಮಹಿಳಾ ಘಟಕವನ್ನು ಭಟ್ಕಳ್ ತಾಲೂಕಿನ ತಲಗೋಡ್ ಗ್ರಾಮದಲ್ಲಿ ಪ್ರಾರಂಭಿಸಲಾಯಿತು
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವು ನಾಡು ನುಡಿ ನೆಲ ಜಲ ಅಲ್ಲದೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸೇವೆ ಮಾಡುತ್ತಾ ಬಂದಿದೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಕೆಲಸ ಮಾಡುತ್ತಾ ಬಂದಿರುವ ಈ ಸಂಘಟನೆಯನ್ನು ಸದಾ ನಾವು ಉಳಿಸಿ ಮತ್ತಷ್ಟು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವುದರ ಮುಖಾಂತರ ಒಂದು ಆದರ್ಶ ಸಂಘಟನೆಯಾಗಿ ರಚನೆ ಮಾಡೋಣ ಇದಕ್ಕೆ ತಮ್ಮೆಲ್ಲರ ಅವಶ್ಯಕತೆ ಅನಿವಾರ್ಯತೆ ಇದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಪರಮೇಶ್ವರಿಗೊಂಡ ಕರೆ ನೀಡಿದರು
ಈ ಕಾರ್ಯಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಉತ್ತರ ಕನ್ನಡ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಪರಮೇಶ್ವರಿ ಎನ್ ಗೊಂಡ ಸಭೆಯ ಅಧ್ಯಕ್ಷತೆ ವಹಿಸಿದರು ಹಾಗ ತಾಲೂಕು ಘಟಕದ ಅಧ್ಯಕ್ಷರಾಗಿ ಪ್ರೇಮ ಅಣ್ಣಪ್ಪ ನಾಯ್ಕ್, ಉಪಾಧ್ಯಕ್ಷರಾಗಿ ಲಕ್ಷ್ಮಿ ತಿಮ್ಮಪ್ಪ ಗೊಂಡ, ಕಾರ್ಯದರ್ಶಿಯಾಗಿ ಲಕ್ಷ್ಮಿ ನಾರಾಯಣ ಗೊಂಡ, ಸಹ ಕಾರ್ಯದರ್ಶಿಯಾಗಿ ಗೀತಾ ಮಾದೇವ ಗೊಂಡ, ಸಂಚಾಲಕಿಯಾಗಿ ಸುಮಿತ್ರ ಕೃಷ್ಣಗೊಂಡ, ಸಂಘಟನಾ ಕಾರ್ಯದರ್ಶಿಯಾಗಿ ಮಾದೇವಿ ವಿಠಲ್ ನಾಯ್ಕ್, ತಲ್ಗೋಡ್ ಗ್ರಾಮ ಘಟಕ ಅಧ್ಯಕ್ಷರಾಗಿ ಭಾರತಿ ಯಶೋಧರ್ ಗೊಂಡ, ಘಟಕ ಉಪಾಧ್ಯಕ್ಷರಾಗಿ ಜಟ್ಟಮ್ಮ ಕರಿಯಪ್ಪ ನಾಯ್ಕ್ ,ಸಹ ಕಾರ್ಯದರ್ಶಿಯಾಗಿ ಲಕ್ಷ್ಮಿ ಗೋವಿಂದ್ ನಾಯ್ಕ್ ,ಹಾಗೂ ಸದಸ್ಯರುಗಳಾದ ಪದ್ಮಾವತಿ ವಿ ನಾಯ್ಕ್, ಮಾದೇವಿ ವಿ ನಾಯ್ಕ್ ,ಮಾಸ್ತಮ್ಮ ಬಿ ಗೊಂಡ, ಸುಧಾ ರಾಮ ಗೊಂಡ ,ಈರಮ್ಮ ಎಸ್ ಗೊಂಡ, ಮಾಸ್ತಮ್ಮ ಜೆ ನಾಯ್ಕ್, ಕುಪ್ಪು ಕೆ ಗೊಂಡ ಮತ್ತಿತರರು ಉಪಸ್ಥಿತರಿದ್ದರು