ಪತ್ರಕರ್ತರ ಪ್ರಶ್ನೆಗೆ ಬೆವತು ಹೋದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ
ಮುರಿದುಬಿದ್ದ ಸಂಧಾನ ಸಭೆ
ಭಟ್ಕಳ : ತಾಲ್ಲೂಕಿನ ಮೂಡಭಟ್ಕಳ ಕೇತಪೈ ನಾರಾಯಣ ದೇವಸ್ಥಾನದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಭಂಧಿಸಿದಂತೆ ಸಾರ್ವಜನಿಕರನ್ನು ಹಾಗು ಸಂಸದ ಕಾಗೇರಿ ಒಳಗೊಂಡಂತೆ ಕರೆದ ಸಭೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಂಸದ ಕಾಗೇರಿಯವರು ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ
ಈ ಐ ಆರ್ ಬಿ ಕಂಪನಿ ಕಾರವಾರದಿಂದ ಮಂಗಳೂರಿನ ವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರoಭ ಮಾಡಿದಾಗಿನಿಂದ ಇವರ ಅವೈಜ್ಞಾನೀಕ ಕಾಮಗಾರಿಯ ಕಾರಣ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಮಾಯಕರ ಮಾರಣ ಹೋಮವೇ ನಡೆಯುತ್ತಿದೆ ಸಾರ್ವಜನಿಕರು ಈ ಬಗ್ಗೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ ಇದು ಒಂದು ಕಡೆಯಾದರೆ ಇನ್ನೊಂದ್ದು ಕಡೆ ಜನಸಾಮಾನ್ಯರು ಅಂಡರ್ ಪಾಸ್ ಯೂಟರ್ನ್ over bridge ಗಟಾರ್ ಹೀಗೆ ಅನೇಕ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಇಳಿದಿದೆ ಆದರೆ ಈ irb ಕಂಪನಿ ಮಾತ್ರ ಹೊರಾಟಕು ತನಗೂ ಸಂಬಂದವೆ ಇಲವೇನೋ ಎಂಭಂತೆ ವರ್ಥಿಸುತ್ತಿದೆ ಈ ಐ ಆರ್ ಬಿ ಕಂಪನಿ ಉತ್ತರ ಕನ್ನಡದಲ್ಲಿ ಕೇವಲ ಐದು ಆರು ಕೀ ಮೀ ರಸ್ತೆ ಮಾತ್ರ ಬಾಕಿ ಇದೆ ಎಂದು ಸುಳ್ಳು ದಾಖಲೆ ತೋರಿಸಿ ಟೋಲ್ ಓಪನ್ ಮಾಡಿ ಹಣಮಾಡಲು ಮುಂದಾಗಿದೆ ಆದರೆ ಉತ್ತರ ಕನ್ನಡ ದಲ್ಲಿ ರಾಷ್ಟ್ರೀಯ ಹೆದ್ದಾರಿ ಮಾತ್ರ ಅಮಾಯಕರ ಸಾವಿನ ಮನೆಯಾಗಿ ಪರಿವರ್ತನೆಯಾಗಿದೆ ಈ ಮಧ್ಯ ಈ ಐ ಆರ್ ಬಿ ಕಂಪನಿಯ ಕೆಲವು ಅಧಿಕಾರಿಗಳು ರಾಜಕಾರಣಿಯೊಬ್ಬನ ಜೊತೆ ಸೇರಿ ರಾಜಕೀಯಕ್ಕೆ ಮುಂದಾಗಿದ್ದಾರೆ ಈ ಬಗ್ಗೆ ನಮ್ಮ ಕರಾವಳಿ ಸಮಾಚಾರವು ಐ ಆರ್ ಬಿ ಕಂಪನಿಯ ಈ ಮುಖವಾಡ ಸಧ್ಯದಲ್ಲೆ ಕಳಚಿಹಾಕಲಿದೆ
ಈ ಮದ್ಯ ಮಂಗಳವಾರವಾದ ಇಂದು ಸಾರ್ವಜನಿಕರೊಂದಿಗೆ ಸಂಸದ ಕಾಗೇರಿಯವರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಭಂದ ಸಂವಾದ ಚರ್ಚಾ ಸಭೆಯನ್ನು ಹಮ್ಮಿಕೊಂಡಿದ್ದು ಈ ಸಮಯದಲ್ಲಿ ಸಂಸದರ ಮುಂದೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು ಈ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳ ಬಾಣಕ್ಕೆ ಸಂಸದ ಕಾಗೇರಿ ಅವರು ಉತ್ತರಿಸಲಾಗದೆ ತತ್ತರಿಸಿ ಬೆವತ್ತ್ತು ಹೋಗಿದಂತು ಸುಳ್ಳಲ್ಲಾ
ಸಂಸದ ಕಾಗೇರಿ ಅವರು ಪತ್ರಕರ್ತರು ಮತ್ತು ಸಾರ್ವಜನಿಕ ರಿಗೆ ಸಮಜಾಯಿಸಿ ನೀಡಲು ಪ್ರಯತ್ನಪಟ್ಟರು ಆದರೆ ಸಾರ್ವಜನಿಕರ ಆಕ್ರೋಶ ಹೆಚ್ಚಾಯಿತೇ ಹೊರತು ಕಡಿಮೆ ಆಗಲಿಲ್ಲ ಎಂಬುದು ಅಷ್ಟೇ ಸತ್ಯ
ಐ ಆರ್ ಬಿ ಹೇಸಿಗೆಯನ್ನು ಸ್ವಚ್ಛಗೊಳಿಸುವ ಪ್ರಯತ್ನ ಮಾತ್ರ ವ್ಯರ್ಥ ವಾಗಿ ಹೋಯಿತು ಎಂಧು ಸಾರ್ವಜನಿಕರು ಮಾರ್ಮಿಕವಾಗಿ ಆಡಿಕೊಂಡರು
ಒಟ್ಟಾರೆ ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೆಷ್ಟು ಬಲಿ ಆಗಬೇಕಾಗಿದೆ ಎನ್ನುದು ಸಾರ್ವಜನಿಕರ ಪ್ರಶ್ನೆಯಾಗಿದೆ