ಸೌಹಾರ್ದಯುತವಾಗಿ ಇದ್ದರೆ ಸರಿ ಇಲ್ಲವಾದರೆ ಕರ್ನಾಟಕ ಗಡಿದಾಟಲು ಬಿಡಲಾರೆವು : ಸಚಿವ ಮಾಂಕಾಳು ವೈದ್ಯ
ಗೋವಾ ಮಹಾರಾಷ್ಟ್ರ ಸರಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ ಸಚಿವರು
ಭಟ್ಕಳ :ಕರ್ನಾಟಕ ರಾಜ್ಯ ಮೀನುಗಾರಿಕ ಇಲಾಖೆಯ ಸಚಿವನಾಗಿ ಹೇಳುತ್ತಿದ್ದೆನೇ ನನ್ನ ಮೀನುಗಾರರಿಗೆ ಕಿಂಚಿತ್ತು ತೊಂದರೆಯಾದರು ನಾನು ಸಹಿಸಲಾರೆ ಕರ್ನಾಟಕ ಮೀನುಗಾರರನ್ನು ಗೋವಾ ಮಹಾರಾಷ್ಟ್ರ ಸರಕಾರ ಮತ್ತು ಅಲ್ಲಿಯ ಮೀನುಗಾರರು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ನನ್ನ ಮೀನುಗಾರರನ್ನು ತಳಿಸಲಾಗುತಿದೆ ಇದನ್ನು ನಾನು ಇನ್ನು ಸಹಿಸಲಾರೆ ಸೌಹಾರ್ದಯುತವಾಗಿ ಇದ್ದರೆ ಸರಿ ಇಲ್ಲವಾದಲ್ಲಿ ನಿಮ್ಮ ಮೀನುಗಾರರನ್ನು ಕರ್ನಾಟಕ ಗಡಿ ಪ್ರವೇಶ ಮಾಡಲು ಬಿಡಲಾರೆವು ಎಂಧು ಉತ್ತರ ಕನ್ನಡ ಉಸ್ತುವಾರಿ ಸಚಿವರು ಮೀನುಗಾರಿಕ ಇಲಾಖೆಯ ಸಚಿವರು ಅದ ಮಾಂಕಾಳು ವೈದ್ಯರು ಗೋವಾ ಮಹಾರಾಷ್ಟ್ರ ಸರಕಾರಕ್ಕೆ ಹಾಗು ಅಲ್ಲಿನ ಮೀನುಗಾರರಿಗೆ ಖಡಕ್ ಎಚ್ಚರಿಕೆ ನೀಡಿದರು
ಹೌದು ವೀಕ್ಷಕರೇ ಸುಮಾರು ವರ್ಷಗಳಿಂದ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ನಮ್ಮ ರಾಜ್ಯದ ಮೀನುಗಾರರ ಮೇಲೆ ಹಲ್ಲೆಗಳು ನಡೆಯುತ್ತಿದ್ದೂ ಇತ್ತೀಚಿಗೆ ಗೋವಾ ಹಾಗೂ ಮಹಾರಾಷ್ಟರ ಸರಕಾರ ಮೀನುಗಾರರನ್ನು ಬಂದಿಸಿ ಲಕ್ಷ ಗಟ್ಟಲೆ ಹಣ ಸುಲಿಗೆ ಮಾಡುತ್ತಿದ್ದರು . ಕಳೆದ 4 ದಿನದ ಹಿಂದೆ ನಮ್ಮ ರಾಜ್ಯದ ಮಲ್ಪೆಯ ಒಂದು ಬೊಟ್ ನ್ನು ಅಲ್ಲಿನ ಮೀನುಗಾರರು ವಶಪಡಿಸಿಕೊಂಡು ಹಲ್ಲೆ ನಡೆಸಿದ್ದು ಅಲ್ಲದೆ ಅಲ್ಲಿನ ಸರಕಾರ ಅವರ ಮೇಲೆ ಸುಳ್ಳು ಆರೋಪ ಸೃಷ್ಟಿಸಿ ಪ್ರಕರಣ ದಾಖಲು ಮಾಡಿತ್ತು. ಅಲ್ಲಿಯ ಸರಕಾರ ಅವರನ್ನು ಅಮಾನವೀಯವಾಗಿ ತಳಿಸುದು ರಾಕ್ಷಸಿ ಪ್ರವೃತ್ತಿಯನ್ನು ನಡೆಸುವುದರ ಮೂಲಕ ಕರ್ನಾಟಕದ ಮೀನುಗಾರರಿಗೆ ಮಾನಸಿಕ ಹಿಂಸೆ ದೌರ್ಜನ್ಯ ವನ್ನು ನಡೆಸುದು ಮಾಡುತ್ತಿದ್ದರು ಇದನ್ನು ಗಮನಿಸಿದ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಇನ್ನು ಮುಂದೆ ಕರ್ನಾಟಕಕ್ಕೆ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯ ಮೀನುಗಾರರು ನಿಯಮ ಮೀರಿ ಮೀನುಗಾರಿಕೆಗೆ ಬಂದಲ್ಲಿ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ನಾನು ಕರ್ನಾಟಕ ಮೀನುಗಾರ ಸಚಿವನಾಗಿ ಹೇಳುತ್ತಿದ್ದೇನೆ ನನ್ನ ರಾಜ್ಯದ ಮೀನುಗಾರರಿಗೆ ನೀವು ತೊಂದರೆ ಕೊಟ್ಟರೆ ನಾನು ಸಹಿಸಲಾರೆ ಈ ಅಮಾನವೀಯ ವರ್ತನೆ ಕೋನೆ ಯಾಗ ಬೇಕು ನೀವು ಸೌಹಾರ್ಧಿತವಾಗಿ ನಡೆದುಕೊಳ್ಳುವುದಾದ್ರೆ ಮಾತ್ರ ಕರ್ನಾಟಕ ಗಡಿ ಪ್ರವೇಶ ಮಾಡಿ ನನ್ನ ಮೀನುಗಾರರ ಮೇಲೆ ದೌರ್ಜನ್ಯ ಎಸಗಿದರೆ ನಾನು ನಿಮ್ಮ ರಾಜ್ಯದ ಮೀನುಗಾರರಿಗೆ ಕರ್ನಾಟಕದಲ್ಲಿ ಮೀನುಗಾರಿಕೆ ನಡೆಸಲು ಬಿಡಲಾರೆ ನಿಮ್ಮನ್ನು ಕರ್ನಾಟಕ ಗಡಿದಾಟಲು ನಾನು ಅವಕಾಶವನ್ನೇ ನೀಡಲಾರೆ ಎಚ್ಚರಿಕೆ ಎಂದು ಗೋವಾ ಮಹಾರಾಷ್ಟ್ರ ಸರಕಾರ ಮತ್ತು ಅಲ್ಲಿನ ಮೀನುಗಾರರಿಗೆ ಖಡಕ್ ಎಚ್ಚರಿಕೆ ನೀಡಿದರು
ಸಚಿವರಿಗೆ ಮೀನುಗಾರರ ಮೇಲಿರುವ ಪ್ರೀತಿಗೆ ಕರ್ನಾಟಕ ರಾಜ್ಯದಾಧ್ಯoತ ಉತ್ತರ ಕನ್ನಡ ಉಸ್ತುವಾರಿ ಸಚಿವರು ಮೀನುಗಾರಿಕ ಇಲಾಖೆಯ ಸಚಿವರು ಆದಂತ ಮಾಂಕಾಳು ವೈದ್ಯರ ಬಗ್ಗೆ ಪ್ರಶಂಸೆಗಳು ಹಾಗು ಅಭಿಮಾನಿಗಳ ಸಂಖ್ಯೆ ಹೆಚ್ಚುತಲ್ಲೇ ಹೋಗುತ್ತಿದೆ