ಹೊರಜಿಲ್ಲೇಯ ಶೈಕ್ಷಣಿಕ ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳಿಗೆ ಅಪಘಾತ

ಸಹಾಯಕ್ಕೆ ಓಡೋಡಿ ಬಂದ ಸಚಿವ ಮಾಂಕಾಳು ವೈದ್ಯ

ಶಾಲಾ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ವಾಹನ ಅಪಘಾತಕ್ಕೆ ಇಡಾದಾಗ ಸಚಿವ ಮಾಂಕಾಳು ವೈದ್ಯರು ಸ್ಥಳಕ್ಕೆ ದೌಡಇಸಿ  ಸಮಸ್ಯೆಗೆ ತಕ್ಷಣ ಸ್ಪಂದಿಸಿ ಊಟ ವಸತಿ ಜೊತೆಗೆ ವಾಪಸ್ಸು ಊರಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಚಿವ ಮಂಕಾಳ ವೈದ್ಯರು ಮಾದರಿ ಜನಪ್ರತಿನಿಧಿ ಎಂಬ ಬಿರುದನ್ನು ಪಡೆದಿದ್ದಾರೆ

ಹೊನ್ನಾವರ ತಾಲೂಕಿನ ಆರೋಳ್ಳಿ ತಿರುವಿನಲ್ಲಿ ಕೋಲಾರ ಜಿಲ್ಲೆ ಮಾಲೂರು ತಾಲೂಕು ಮಾಸ್ತಿಹಳ್ಳಿಯ ಕರ್ನಾಟಕ ಪ್ರೌಢಶಾಲಾ 40 ಜನ ವಿದ್ಯಾರ್ಥಿಗಳಿದ್ದ ಬಸ್ ಹೊನ್ನಾವರದ ಮುಗ್ವಾದ ಬಳಿ ಪಲ್ಟಿಯಾಗಿತ್ತು. ಈ ಬಗ್ಗೆ ಸುದ್ಧಿ ತಿಳಿಯುತಿದ್ದಂತೆ ಸಚಿವರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ  ಆರೋಗ್ಯ ಸೌಲಭ್ಯ ನೀಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ . ವಯಕ್ತಿಕ ಹಣದಿಂದ ಬೇರೊಂದು ಬಸ್ ವೆವಸ್ಥೆ ಕಲ್ಪಿಸಿ, ಮಕ್ಕಳಿಗೆ ಬೇಕಾಗುವ ತಿಂಡಿ, ಹಣ್ಣು, ಹಂಪಲುಗಳನ್ನು ನೀಡಿದ  ಅವರನ್ನು ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಟ್ಟರು

ಕಳೆದ ಒಂದು ತಿಂಗಳಿನಿಂದ ಭಟ್ಕಳ ಹೊನ್ನಾವರ ಭಾಗದಲ್ಲಿ ಮಕ್ಕಳು ಪ್ರವಾಸಕ್ಕೆ ಆಗಮಿಸಿ ಸಮಸ್ಯೆ ಉಂಟಾಗಿ ಕಂಗಾಲಾದಾಗ ಸ್ಥಳಕ್ಕೆ ಭೇಟಿ ನೀಡಿ ಧೈರ್ಯ ತುಂಬುವುದಲ್ಲದೇ ಪಕ್ಷದ  ಸ್ಥಳದಲ್ಲಿ ಕಾರ್ಯಕರ್ತರನ್ನು ಆಪ್ತಸಹಾಯಕರನ್ನು  ಸ್ಥಳದಲ್ಲಿ ಇರಿಸಿ

ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡುತ್ತಾರೆ. ಅಧಿಕಾರಿಗಳ ಜೊತೆ ಸಚಿವರ ಈ ತಂಡ ಕೈಜೊಡಿಸುವ ಮೂಲಕ ನೆರವಾಗುವುದಲ್ಲದೇ ತಮ್ಮ ವೈಯಕ್ತಿಕ ನೆರವನ್ನು ಪುತ್ರಿ ಬೀನಾ ವೈದ್ಯ ಮೂಲಕ ಮಾಡುವ ಸಚಿವರ ಈ ಕೆಲಸ ಇತರೆ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ

WhatsApp
Facebook
Telegram
error: Content is protected !!
Scroll to Top