ನನ್ನ ಜನರ ಅಭಿವೃದ್ಧಿಯೇ ನನ್ನ ಗುರಿ ಸಚಿವ ಮಾಂಕಾಳು ವೈದ್ಯ
ಜನಸಾಮಾನ್ಯರೊಂದಿಗೆ ಸಭೆಯಲ್ಲೇ ಮಧ್ಯಾಹ್ನದ ಭೋಜನ ಸವಿದ ಸಚಿವರು
ಭಟ್ಕಳ : ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ದೇವಾಡಿಗ ಸಮಾಜಕ್ಕೆ ಸಂಭಂದಿಸಿದ ಯಕ್ಷೆ ಮನೆ ದೇವಸ್ಥಾನ ಅಭಿವೃಧಿಗೆ ಸರಕಾರದ ವತಿಯಿಂದ ಈಗಾಗಲೇ ಒಂದು ಕೊಟಿ ರೂ ಮಂಜೂರು ಮಾಡಿಸಿದ್ದೇನೆ ನನ್ನ ವಯಕ್ತಿಕ ಧನ ಸಹಾಯವನ್ನು ಕೂಡ ನಾನು ಮಾಡುತ್ತೇನೆ ಆದಷ್ಟು ಬೇಗ ದೇವಸ್ಥಾನದ ಅಭಿವೃದ್ಧಿ ಪ್ರಾರಂಭಿಸಿ ನಾನು ಯಾವಾಗಲೂ ನಿಮ್ಮ ಜೊತೆಯಲ್ಲಿ ನಿಲ್ಲುತ್ತೆನೆ ಎಂದು ಬೆಂಗ್ರೆ ಜನಸ್ಪಂದನ ಸಭೆಯಲ್ಲಿ ಸಚಿವ ಮಾಂಕಾಳು ವೈದ್ಯರು ಹೇಳಿದರು
ಜನರ ಸಾಮಾನ್ಯರ ಕುಂದು ಕೊರತೆಗಳನ್ನು ಆಲಿಸುವ ಸಲುವಾಗಿ ಸಚಿವ ಮಂಕಾಳ ಎಸ್ ವೈದ್ಯ ಇಂದು ತಾಲೂಕಿನ ಬೇಂಗ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನಸ್ಪಂದನಾ ಸಭೆಯನ್ನು ಹಮ್ಮಿಕೊಂಡಿದ್ದರು.
ಸಚಿವ ಮಂಕಾಳು ವೈದ್ಯ ಅವರು ಮಾತನಾಡಿ 2025 ರ ವೇಳೆಗೆ ಎಲ್ಲಾ ಅಂಗನವಾಡಿ ಕಟ್ಟಡಗಳನ್ನು ಸ್ವಂತ ಕಟ್ಟಡದಲ್ಲಿ ನಡೆಸುವ ಗುರಿಯನ್ನು ಹೊಂದಿದ್ದೇವೆ. ಶಾಲೆಗಳಿಗೆ ರಸ್ತೆಯ ಅವಶ್ಯಕತೆಯನ್ನು ಮೊದಲ ಆಧ್ಯತೆಯೊಂದಿಗೆ ಒದಗಿಸುತ್ತೇವೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಪೂರೈಸುವ ಜತೆ ಜತೆಗೆ ಅಭಿವೃದ್ಧಿ ಕಾಮಗಾರಿಯನ್ನು ಕೂಡ ನಡೆಸುತ್ತಿದೆ. ವಿರೋಧ ಪಕ್ಷಗಳು ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂಬ ಆರೋಪ ಸುಳ್ಳು ಆರೋಪ ಮಾಡುತ್ತಿದೆ. ನನ್ನ ಕ್ಷೇತ್ರದಲ್ಲಿ ಯಾರು ಮೂಲಭೂತ ಸೌಕರ್ಯ ವಂಚಿತರಗುವಂತಿಲ್ಲ ಎಂದು ಹೇಳಿದರು
ಈ ಸಂದರ್ಭದಲ್ಲಿ ಬೇಂಗ್ರೆ ಗ್ರಾಮಪಂಚಾಯತ್ ವ್ಯಾಪ್ತಿಯ ಸಮಸ್ಯೆಗಳ ಕುರಿತಾಗಿ ತಾಲೂಕಾ ಬ್ಲಾಕ್ ಕಾಂಗ್ರೇಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ವಿಷ್ಣು ದೇವಾಡಿಗ ಸಭೆಯ ಗಮನ ಸೆಳೆದರು.
ಈ ಹಿಂದೆ ಮಂಕಾಳ ವೈದ್ಯ ಶಾಸಕರಿದ್ದ ಸಂದರ್ಭದಲ್ಲಿ ಸಮಸ್ಯೆಗಳನ್ನು ಸ್ವತಃ ಮನಗಂಡು ಕಾಮಾಗಾರಿಗಳನ್ನು ಮಾಡಿಕೊಟ್ಟಿದ್ದರು ಆದರೆ ಆನಂತರ ನಡೆದ ಚುನಾವಣೆಯಲ್ಲಿ ವೈದ್ಯರು ಸೋಲನುಭವಿಸಬೇಕಾಯಿತು. ಕ್ಷೇತ್ರದ ಜನತೆ ತಮ್ಮ ತಪ್ಪನ್ನು ಅರಿತು ಮತ್ತೆ ಮಂಕಾಳ ವೈದ್ಯರನ್ನು ಚುನಾವಣೆಗೆ ನಿಲ್ಲಿಸಿ ಅಭೂತಪೂರ್ಣ ಗೆಲುವನ್ನು ತಂದುಕೊಟ್ಟರು.
ಐ. ಆರ್. ಬಿ ನಡೆಸಿರುವ ಅವೈಜ್ಞಾನಿಕ ಕಾಮಗಾರಿಯಿಂದ ಕೃಷಿ ಭೂಮಿಗಳು, ಪಾಳು ಬಿದ್ದಿದೆ. ರಸ್ತೆ, ಶಾಲೆ ಸೇರಿದಂತೆ ಬೇಂಗ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸುಮಾರು ನೂರು ಕೋಟಿ ರೂಪಾಯಿಯ ಅಭಿವೃದ್ಧಿ ಕಾಮಗಾರಿಗಾಗಿ ಬೇಡಿಕೆ ಇಟ್ಟರು.
ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು, ಆರೋಗ್ಯ, ಉದ್ಯೋಗ, ಮನೆ ನಿರ್ಮಾಣ, ಅರಣ್ಯ ಭೂಮಿ ಸಮಸ್ಯೆ ಸೇರಿದಂತೆ, ಚರಂಡಿ, ರಸ್ತೆ, ಸಮಾಜಮಂದಿರ, ಶಾಲಾ ಕೊಠಡಿ ದುರಸ್ತಿ, ಸೇರಿದಂತೆ ಇನ್ನುತರ ಸಮಸ್ಯೆಗಳನ್ನು ಮನವಿ ಪತ್ರದ ಮೂಲಕ ಸಚಿವರಿಗೆ ತಲುಪಿಸಿದರು. ಕೆಲವು ಸನಸ್ಯೆಗಳಿಗೆ ಸಚಿವರು ಅಧಿಕಾರಿಗಳನನು ಸಂಪರ್ಕಿಸಿ ಸ್ಥಳದಲ್ಲಿಯೇ ಇತ್ಯರ್ಥ ಪಡಿಸುವ ಪ್ರಯತ್ನ ಮಾಡಿದರು. ಇನ್ನೂಳಿದ ಮನವಿಗಳನ್ನು ತಮ್ಮ ಆಪ್ತ ಸಹಾಯಕರ ಮೂಲಕ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಅನುಸರಣೆ ಮಾಡುವಂತೆ ಆದೇಶಿಸಿದರು.
ಈ ಸಂದರ್ಭದಲ್ಲಿ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ ಕಾರ್ಯಧರ್ಶಿ ಸುರೇಶ ನಾಯ್ಕ್ ಬೇಂಗ್ರೆ ಪಂಚಾಯತ್ ಅಧ್ಯಕ್ಷೇ ಪ್ರಮಿಳಾ ಡಿಕೊಸ್ತಾ, ಉಪಾಧ್ಯಕ್ಷ ಗೋವಿಂದ ನಾಯ್ಕ, ಗ್ಯಾರಂಟಿ ಸಭೆಯ ಅಧ್ಯಕ್ಷ ರಾಜು ನಾಯ್ಕ, ದೇವಾಡಿಗ ಸಮಾಜದ ಮುಖಂಡರಾದ ವೆಂಕ್ಟಯ್ಯ ದೇವಾಡಿಗ ಬೈರುಮನೆ ಮಂಜುನಾಥ ನಾಯ್ಕ ನಾರಾಯಣ ನಾಯ್ಕ, ವೆಂಕಟೇಶ್ ದೇವಾಡಿಗ, ಜಾಲಿ ಪಂಚಾಯತ ಸ್ಟ್ಯಾಂಡಿಂಗ್ ಕಮಿಟಿ ಅಧ್ಯಕ್ಷ ಈಶ್ವರ ಮೊಗೇರ ಮತ್ತಿತರರು ಭಾಗವಹಿಸಿದ್ದರು.