ಕುಮಟಾ : ತಾಲೂಕು ಪತ್ರಕರ್ತರೊಬ್ಬರ ವಿರುದ್ಧ ಶಾಸಕ ದಿನಕರ ಶೆಟ್ಟಿ ಬೆಂಬಲಿಗರು ಮತ್ತು ಬಿಜೆಪಿಯ ಕೆಲ ಕಾರ್ಯಕರ್ತರು ಸಲ್ಲಿಸಿದ ಸುಳ್ಳು ದೂರನ್ನು ಖಂಡಿಸಿ, ಕುಮಟಾ ತಾಲೂಕಿನ ಎಲ್ಲ ಪತ್ರಕರ್ತರು ಸೇರಿ ಕುಮಟಾ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕುಮಟಾ ತಾಲೂಕಿನಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ನಾವೆಲ್ಲ ಸಂವಿಧಾನಬದ್ಧವಾಗಿ ಹಾಗೂ ಪತ್ರಿಕಾ ಧರ್ಮದಂತೆ ಕಳೆದ ಹಲವು ವರ್ಷಗಳಿಂದ ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತ ಬಂದಿದ್ದೇವೆ. ಜಾತಿ, ಧರ್ಮ ಬೇಧವಿಲ್ಲದೇ ಪಕ್ಷಾತೀತವಾಗಿ ಮತ್ತು ವಸ್ತುನಿಷ್ಠ ವರದಿಗಳನ್ನು ಮಾಡುವ ಮೂಲಕ ಈ ಸಮಾಜದಲ್ಲಿ ಪ್ರೀತಿ, ವಿಶ್ವಾಸದ ಜೊತೆಗೆ ಗೌರವವನ್ನು ಸಂಪಾದಿಸಿದ್ದೇವೆ. ಸಾರ್ವಜನಿಕ ಬದುಕಿನಲ್ಲಿರುವ ಕೆಲ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಆರೋಪಗಳು ಸಾರ್ವಜನಿಕವಾಗಿ ವ್ಯಕ್ತವಾದಾಗ ಅದನ್ನು ಅವರು ತಮ್ಮ ವಿರುದ್ಧದ ಅಪಪ್ರಚಾರ ಎಂದು ಭಾವಿಸುವುದು ಸಾಮಾನ್ಯವಾಗಿದೆ. ಆದರೆ ಪತ್ರಕರ್ತರು ಯಾವುತ್ತೂ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದರಿಂದ ತಮ್ಮ ವೃತ್ತಿನಿಷ್ಠೆಯನ್ನು ಮತ್ತು ನಿಲುವನ್ನು ಸಾರ್ವಜನಿಕರ ಪರವಾಗಿ ವ್ಯಕ್ತಪಡಿಸುವುದು ನಮ್ಮ ಪತ್ರಿಕಾ ಧರ್ಮವಾಗಿದೆ. ಆದರೆ ಇದನ್ನು ಸಹಿಸದ ಕೆಲ ಜನಪ್ರತಿನಿಧಿಗಳು ತಮ್ಮ ಬೆಂಬಲಿಗರ ಮೂಲಕ ಪತ್ರಕರ್ತರ ವಿರುದ್ಧ ಸುಳ್ಳು ದೂರು ದಾಖಲಿಸುವುದು ಪತ್ರಿಕಾ ಸ್ವಾತಂತ್ರö್ಯದ ಕಗ್ಗೊಲೆಯಾಗಿದೆ. ಅದರಂತೆ ಡಿ.೭ರಂದು ಶಾಸಕ ದಿನಕರ ಶೆಟ್ಟಿಯವರ ಬೆಂಬಲಿಗರಾದ ಜಯಾ ಶೇಟ್ ಮತ್ತು ಬಿಜೆಪಿಯ ಕೆಲ ಕಾರ್ಯಕರ್ತರು ಸೇರಿ ಕುಮಟಾ ತಾಲೂಕಿನ ನಮ್ಮ ಪತ್ರಕರ್ತರಾದ ಚರಣರಾಜ್ ನಾಯ್ಕರ ವಿರುದ್ಧ ಸುಳ್ಳು ದೂರು ದಾಖಲಿಸಿರುವುದು ನಿಜಕ್ಕೂ ಖಂಡನೀಯ. ಪತ್ರಕರ್ತರ ಸಂವಿಧಾನಿಕ ಪತ್ರಿಕಾ ಸ್ವಾಂತ್ರö್ಯವನ್ನು ಹರಣ ಮಾಡುವ ದುರುದ್ದೇಶ ಮತ್ತು ನಮ್ಮ ನೈತಿಕ ಸ್ಥೆöÊರ್ಯವನ್ನು ಕುಗ್ಗಿಸುವ ಕಾರ್ಯವಾಗಿದೆ. ಹಾಗಾಗಿ ಇಂಥ ಸುಳ್ಳು ದೂರುಗಳು ಬಂದಾಗ ಪೊಲೀಸ್ ಅಧಿಕಾರಿಗಳು ಅದನ್ನು ಪರಿಶೀಲಿಸಿ, ಸತ್ಯಾಸತ್ಯತೆಯನ್ನು ಅರಿತುಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆ ಹೊರತು ಶಾಸಕರ ಅಥವಾ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ನೇರವಾಗಿ ಪ್ರಕರಣ ದಾಖಲಿಸಿ, ತೊಂದರೆ ನೀಡುವ ಕಾರ್ಯ ಪೊಲೀಸ್ ಇಲಾಖೆ ಮಾಡಬಾರದೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಸುಳ್ಳು ದೂರನ್ನು ಖಂಡಿಸಿ ಕುಮಟಾ ತಾಲೂಕಿನ ಪತ್ರಕರ್ತರ ಮನವಿ
WhatsApp
Facebook
Telegram