ಲೈಟ್ ಪಿಶಿಂಗ್ ಉಹಾಪೊಹಕ್ಕೆ ತೆರೆ ಎಳೆದ ಸಚಿವ ಮಂಕಾಳು ವೖದ್ಯ

ಮೀನುಗಾರರೆಂದರೆ ನನ್ನ ಕುಟುಂಬದವರಿದ್ದ ಹಾಗೆ ಮಂಕಾಳು ವೈದ್ಯ

ರಾಜ್ಯದಲ್ಲಿ ಬೆಳಕು ಮೀನುಗಾರಿಕೆ ವಿಚಾರವಾಗಿ ಕೇಳಿಬರುತ್ತಿರುವ ಉಹಾಪೊಹಾಗಳ ವಿಷಯಕ್ಕೆ ಸಂಭಂದ ಸಚಿವ ಮಂಕಾಳ ವೖದ್ಯರ ನೆತೃತ್ವದಲ್ಲಿ ರಾಜ್ಯ ಪರ್ಷಿನ್ ಬೋಟ್ ಮೀನುಗಾರರ ಯೂನಿಯನ್‘ನವರ ಜೊತೆ ಸಭೆ ನಡೆಸಿ ಚರ್ಚಿಸಲಾಯಿತು.

ಕೆಲವು ದಿನಗಳಿಂದ ಮಿನುಗಾರಿಕೆಯ ಲೈಟ್‌ ಪಿಶಿಂಗ್‌ ಬಗ್ಗೆ ಕರಾವಳಿಯಾಧ್ಯಂತ ಗೊಂದಲಗಳು ಉಹಾಪೋಹಗಳು ತಲೆ ಎತ್ತಿದ್ದವು ಈ ಹಿನ್ನೆಲೆಯಲ್ಲಿ ಸಚಿವ ಮಂಕಾಳು ವೈದ್ಯರ ನೇತ್ರತ್ವದಲ್ಲಿ ವಿವಿದ ಮಿನುಗಾರಿಕಾ ನಾಯಕರುಗಳೊಂದಿಗೆ ಸಭೆಯನ್ನು ಹಮ್ಮಿಕೊಳ್ಳಲಾಯಿತು ಈ ಸಂದರ್ಬದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು

ಮೀನುಗಾರರು ಎಂದರೆ ಒಂದು ಕುಟುಂಬವಿದ್ದ ಹಾಗೆ ಇಲ್ಲಿ ಎಲ್ಲರು ದೇವರನ್ನ ನಂಬಿ ನೀರಿನ ಮೇಲೆ ಜೀವನ ಸಾಗಿಸುತ್ತಿದ್ದಾರೆ . ಇಲ್ಲಿ ನಾಡಡೋಣಿ ಮೀನುಗಾರರು, ಪರ್ಷಿನ್ ಬೋಟ್ ಮೀನುಗಾರರು, ಫಿಶಿಂಗ್ ಬೋಟ್ ಮೀನುಗಾರರು ಹಾಗೂ ಟ್ರಾಲ್ ಬೋಟ್, ಸಣ್ಣ ಪುಟ್ಟ ಮೀನುಗಾರರು ಅವರ ಅವರಿಗೆ ಅನುಕೂಲವಾಗುವ ಹಾಗೆ ಮೀನುಗಾರಿಕೆಯನ್ನು ನಡೆಸಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಆದರೆ ಬೆಳಕು ಮೀನುಗಾರಿಕೆ ಪರವಾಗಿ ಆಗಲಿ ನಾಡದೋಣಿ ಮೀನುಗಾರರ ವಿರುದ್ಧವಾಗಲಿ ನಡೆದುಕೊಂಡು ಹೋಗುವುದು ನನ್ನ ಉದ್ದೇಶವಲ್ಲ. ನನ್ನ ಉದ್ದೇಶವೇನೆಂದರೆ ನಮ್ಮ ರಾಜ್ಯದ ಜೊತೆಯಲ್ಲಿ ಬೇರೆ ರಾಜ್ಯಗಳಲ್ಲು ಬೆಳಕು ಮೀನುಗಾರಿಕೆ ನಿಷೇದ ಪಡಿಸೋದು. ಕಾರಣ ಕೇವಲ ನಮ್ಮ ರಾಜ್ಯದಲ್ಲಿ ಮೀನುಗಾರಿಕೆ ನಿಷೇದ ಪಡಿಸಿದರೆ ಬೇರೆ ರಾಜ್ಯದ ಮೀನುಗಾರರು ಇಲ್ಲಿಗೆ ಬಂದು ಬೆಳಕು ಮೀನುಗಾರಿಕೆ ನಡೆಸಿ ನಮ್ಮ ಮೀನುಗಾರರ ಹೊಟ್ಟೆ ಮೇಲೆ ಹೊಡೆಯುತ್ತಾರೆ. ಆ ಕಾರಣಕ್ಕೆ ದೇಶದಲ್ಲಿ ಮೀನುಗಾರಿಕೆ ನಿಷೇಧ ಮಾಡಬೇಕು ಎನ್ನುವುದು ನನ್ನ ಉದ್ದೇಶ. ಇದು ಆಗಬೇಕೆಂದರೆ ಕರಾವಳಿಯ ಎಲ್ಲ ಬಿಜೆಪಿ ಲೋಕಸಭಾ ಸದಸ್ಯರುಗಳು ಒಟ್ಟಾಗಿ ನಾನು ಕೂಡಾ ಅವರ ಜೊತೆಯಾಗಿ ಹೋಗಿ ಕೇಂದ್ರದ ಬಿಜೆಪಿ ಮೀನುಗಾರಿಕೆ ಮಂತ್ರಿಗಳನ್ನು ಭೇಟಿಯಾಗಿ ದೇಶದಲ್ಲೇ ಬೆಳಕು ಮೀನುಗಾರಿಕೆ ನಿಷೇದ ಮಾಡಬೇಕು ಎಂದು ಮನವಿ ಸಲ್ಲಿಸೋಣ. ಮೀನುಗಾರಿಕೆ ಅಭಿವೃದ್ಧಿ ಪಡೆಸಬೇಕು ಎನ್ನುವುದು ನನ್ನ ಗುರಿ ಮೀನುಗಾರರಿಕೆಗೆ ತೊಂದರೆಯಾಗುವ ಯಾವ ಯೋಜನೆಗಳನ್ನು ನಮ್ಮ ಸರಕಾರ ನಮ್ಮ ಇಲಾಖೆ ಜಾರಿಗೆ ತರುವುದಿಲ್ಲ. ಆದರೆ ಕೆಲ ರಾಜಕೀಯ ಹಿತಾಶಕ್ತಿಗಳು ಬೆಳಕು ಮೀನುಗಾರಿಕೆ ವಿಚಾರವಾಗಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇಂತಹ ಉಹಾಪೋಹಗಳಿಗೆ ಮೀನುಗಾರರು ಯಾವುದೇ ರೀತಿಯ ಕಿವಿ ಕೊಡದೆ ತಮ್ಮ ಮೀನುಗಾರಿಕೆಯನ್ನು ನಡೆಸಿಕೊಂಡು ಹೋಗುವಂತೆ ಮನವಿ ಮಾಡುತ್ತೇನೆ. ಎಂದು ಹೇಳಿದರು

ಈ ಸಂದರ್ಬದಲ್ಲಿ ಮಿನುಗಾರಿಕೆ ವಿವಿದ ಮುಖಂಡರು ನಾಯಕರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top