ರಾಘವೇಂದ್ರ ಗೊಂಡ ಜಾಲಿ ಅವರು ಭಟ್ಕಳ ಗೊಂಡ ಸಮಾಜದ ಅಧ್ಯಕ್ಷರಾಗಿ ಆಯ್ಕೆ
ಭಟ್ಕಳ ತಾಲೂಕ ಜಾಲಿಯ ಕಾಂಗ್ರೆಸ್ ಪಕ್ಷದ ಮುಖಂಡರು, ಸಚಿವ ಮಾಂಕಾಳ್ ವೈದ್ಯರ ಅಭಿಮಾನಿ, ಜಾಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಯುತ ರಾಘವೇಂದ್ರ ಗೊಂಡ, ಜಾಲಿ ಯವರು ಭಟ್ಕಳ ತಾಲೂಕಾ ಗೊಂಡ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇಂದು ತಾಲೂಕಿನ ಕೋಕ್ತಿ ದೇವಸ್ಥಾನದಲ್ಲಿ ನಡೆದ ಗೊಂಡ ಸಮಾಜದ ಒಟ್ಟು ಐದು ಕೂಟದ ಸಭೆಯಲ್ಲಿ ರಾಘವೇಂದ್ರ ಗೊಂಡರವರನ್ನ ಅವಿರೋಧವಾಗಿ ಆಯ್ಕೆಮಾಡಲಾಗಿದೆ. ನೂತನ ಅಧ್ಯಕ್ಷರಿಗೆ ಭಟ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು ಹಾಗೆ ಅಧ್ಯಕ್ಷರಾಗಿ ಆಯ್ಕೆಯಾದ ರಾಘವೇಂದ್ರ ಅವರಿಗೆ ಸಚಿವ ಮಂಕಾಳು ವೈದ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ