ತಾಲೂಕಾಡಳಿತದಿಂದ ಸನ್ಮಾನ ಪಡಿದಿದ್ದ ಕರಿಯಮ್ಮ ಬೈರಾ ನಾಯ್ಕ
ಭಟ್ಕಳ ತಾಲೂಕಿನ ಪಡುಶಿರಾಲಿಯ ಸಾರದ ಹೊಳೆಯ 108 ವರ್ಷದ ಹಿರಿಯ ಜೀವ ತಮ್ಮ ಸ್ವಗ್ರಹದಲ್ಲಿ ನಿದನರಾಗಿದ್ದು ಈ ಮೃತ ಕರಿಯಮ್ಮ ಬೈರಾ ನಾಯ್ಕ ಅವರು ಸೆಂಚುರಿಯನ್ನು ದಾಟಿದ್ದರು
ಇಂದಿನ ಕಾಲಮಾನದಲ್ಲಿ 60 ರಿಂದ ೭೦ ವರ್ಷ ದಾಟಿದರೆ ದಿರ್ಘಾಯುಷ್ಯಿ ಎಂದು ಹೇಳುವ ಪರಿಸ್ಥಿತಿ ಬಂದೋದಗಿದೆ ಆ ಮಟ್ಟದಲ್ಲಿ ನಮ್ಮ ಕಾಲಮಾನ ಪರಿಸ್ಥಿತಿಗಳು ಹದಗೆಟ್ಟು ಹೊಗಿದೆ ಅಂತಹದರಲ್ಲಿ ತಾಲೂಕಿನ ಪಡುಶಿರಾಲಿಯ ಸಾರದಹೊಳೆ ಬೈರಮಾಸ್ಟ್ರಮನೆ ಕರಿಯಮ್ಮ ಬೈರಾ ನಾಯ್ಕ ಅವರು ನೂರು ವಸಂತಗಳನ್ನು ದಾಟಿ ನೂರಾ ಎಂಟು ವರ್ಷಕ್ಕೆ ಕಾಲಿಟ್ಟಿದ್ದರು ಇವರು ನೂರು ವಸಂತಗಳನ್ನು ಪೂರೈಸಿದ್ದ ಹಿನ್ನೆಲೆಯಲ್ಲಿ ತಾಲೂಕಾಡಳಿತ ಇವರನ್ನು ಗುರುತಿಸಿ ಸನ್ಮಾನವನ್ನು ಮಾಡಿತ್ತು ಆದರೆ ಇವರು 05/12/2024 ರಂದು ತಮ್ಮ ಸ್ವಗ್ರಹದಲ್ಲಿ ಮರಣವನ್ನಪ್ಪಿದ್ದು ಅಪಾರ ಬಂದುವರ್ಗದವರು ಶೋಕ ಸಾಗರದಲ್ಲಿ ಮುಳುಗುವಂತಾಗಿದೆ
ಇವರ ಮರಣದ ಸುದ್ದಿ ತಿಳಿದ ಸಚಿವ ಮಂಕಾಳು ವೈದ್ಯರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.