ಸಚಿವ ಮಂಕಾಳು ವೈದ್ಯರ ಪರಿಶ್ರಮದ ಕಾರಣ ಒಂದು ಕೊಟಿ ವೆಚ್ಚದ ನೂತನ ರಸ್ತೆ ಲೊಕಾರ್ಪಣೆ

ನೂತನ ರಸ್ತೆ ನಿರ್ಮಾಣ ಮಾಡಿ ಸಚಿವರು ದೇವರ ಸೇವೆ ಮಾಡಿದ್ದಾರೆ:ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿ

ಭಟ್ಕಳ: ಜನ ಪ್ರತಿನಿಧಿಯಾದವರು ಪ್ರಜೆಗಳ ಸೇವೆ ಮಾಡಬೇಕು. ವೈಯಕ್ತಿಕ ಹಿತಾಶಕ್ತಿಯನ್ನು ಬದಿಗಿಟ್ಟು ಜನಸೇವೆ ಧ್ಯೇಯವಾಗಬೇಕು. ಜನಸೇವೆಯೂ ಒಂದು ದೇವರ ಕಾರ್ಯ ಎಂದು ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿ ಹೇಳಿದರು.


ಅವರು ಗುರುವಾರ ಒಂದು ಕೊಟಿ ರೂ ವೆಚ್ಚದ ನೂತನ ರಸ್ತೆಯನ್ನು ಲೋಕಾರ್ಪಣೆ ಗೊಳಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿನೇಶ ಪೈ ದಂಪತಿಗಳು ಷಷ್ಠ್ಯಬ್ದ ಪೂರ್ತಿ ಉಗ್ರರಥ ಶಾಂತಿ ನಡೆಸಿ ದೇವತಾ ಕಾರ್ಯ ನಡೆಸಿದರೆ ಸಚಿವ ಮಂಕಾಳ ವೈದ್ಯ ಆ ರಸ್ತೆಯಲ್ಲಿ ತೆರಳುವ ಭಕ್ತರಿಗೆ ತೊಂದರೆಯಾಗಬಾರದು ಎಂದು ರಸ್ತೆ ನಿರ್ಮಿಸಿ ಇನ್ನೊಂದು ಬಗೆಯಲ್ಲಿ ದೇವರ ಸೇವೆ ಮಾಡಿದ್ದಾರೆ. ಗುರುಗಳು ಮಾರ್ಗದರ್ಶನ ಬೇಡುವ ಅವರು, ಗುರುಗಳು ತೆರಳುವ ಕ್ಷೇತ್ರದಲ್ಲಿ ನೂತನ ರಸ್ತೆ ನಿರ್ಮಿಸಿ ನೂತನ ಮಾರ್ಗದಲ್ಲೆ ತೆರಳುವಂತೆ ಮಾಡುತ್ತಿದ್ದಾರೆ. ಜನಪರ ಕಾರ್ಯಗಳು ಹೀಗೆ ಮುಂದುವರೆದು ಜನರ ಪ್ರೀತಿಗೆ ಪಾತ್ರರಾಗುವಂತೆ ಹರಸಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಮಂಕಾಳ ವೈದ್ಯ ಯಾರು ಗುರುಗಳಿಗೆ ತಲೆಬಾಗುತ್ತಾರೊ ಅವರು ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುತ್ತಾರೆ. ಗುರುಗಳ ಪಾದ ಸ್ಪರ್ಶ ಎಲ್ಲಿ ಆಗುತ್ತೊ ಅಲ್ಲಿ ಎಲ್ಲವೂ ಸಾದ್ಯ. ಮಠ ಮಂದಿರಗಳಿಗೆ ಎಂದು ಕೊರತೆ ಆಗಬಾರದು ಎನ್ನುವದು ನಮ್ಮ ಬಯಕೆ ಗುರು ಪರಂಪರೆ ಒಂದಿಗೆ ನಾವು ನಮ್ಮ ಸರ್ಕಾರ ಸದಾ ಇದ್ದೇವೆ ಎಂದು ಅವರು ಹೇಳಿದರು. ಹಾಂಗ್ಯೋ ಐಸ್ ಕ್ರೀಂ ಎಂಡಿ ಪ್ರದೀಪ ಪೈ ಮಾತನಾಡಿ ಸಚಿವ ವೈದ್ಯರು ತಮ್ಮ ಮಾತಿಗೆ ಬದ್ದರಾಗಿದ್ದಾರೆ. ಅಧಿಕಾರ ಇಲ್ಲದಾಗಲೂ ಅವರು ಹೇಳಿದ ಕಾರ್ಯವನ್ನು ಮಾಡಿಕೊಟ್ಟಿದ್ದಾರೆ. ಒಂದು ಕೋಟಿ ರೂ ವೆಚ್ಚದಲ್ಲಿ ಶ್ರೀಗಳು ಮೊಕ್ಕಾಂಗೆ ಬರುವ ಮೊದಲೆ ರಸ್ತೆ ನಿರ್ಮಿಸಿ ಕೊಟ್ಟರುವದಕ್ಕೆ ಜಿಎಸ್‌ಬಿ ಸಮಾಜ ಹಾಗೂ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸಿದರು.
ಬಳಿಕ ಶ್ರೀಗಳು ರಸ್ತೆ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ ಹೆಸ್ಕಾಂ, ಪುರಸಭೆ, ಕೆಇಬಿ ಕಾಂಟೆಕ್ಟರ್‌ಗಳು ಸೇರಿ ಸಹಕರಿಸಿದವರಿಎಗ ಶ್ರೀಗಳು ಮಂತ್ರಾಕ್ಷತೆ ನಿಡಿ ಗೌರವಿಸಿದರು. ಜಿಎಸ್‌ಬಿ ಸಮಾಜದ ಗೌರವಾಧ್ಯಕ್ಷ ಸುರೇಂದ್ರ ಶ್ಯಾನಭಾಗ, ಹಾಂಗ್ಯೋ ಐಸ್‌ಕ್ರೀಂನ ದಿನೇಶ ಪೈ, ಸಮಾಜದ ಮುಖಂಡ ಉದ್ಯಮಿ ರಾಜೇಶ ನಾಯಕ, ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ಕಾಮಾಕ್ಷೀ ದೇವಸ್ಥಾನದ ಅಧ್ಯಕ್ಷ ಹರೀಶ ಕಾಮತ ಇತರರು ಇದ್ದರು.

WhatsApp
Facebook
Telegram
error: Content is protected !!
Scroll to Top