ಸಚಿವ ಮಂಕಾಳು ವೈದ್ಯರ ಕಛೇರಿಯಲ್ಲಿ ಜನತಾ ದರ್ಶನ ಕಾರ್ಯಕ್ರಮ

ನಾನೊಬ್ಬ ಜನ ಸೇವಕ ನನ್ನ ಪ್ರಥಮ ಆಧ್ಯತೆ ಜನ ಸೇವೆ ಮಾಡುವುದಾಗಿದೆ : ಸಚಿವ ಮಂಕಾಳು ವೈದ್ಯ

ಭಟ್ಕಳ ತಾಲೂಕಿನಲ್ಲಿ ಸಚಿವ ಮಂಕಾಳು ವೈದ್ಯರು ಸಾರ್ವಜನಿಕರ ಕುಂದುಕೋರತೆಗಳನ್ನು ಆಲಿಸುವ  ಹಾಗು ಜನ ಸಾಮಾನ್ಯರ ಸಮಸ್ಯೆ ನಿವಾರಣೆಯ ಉದ್ದೇಶದಿಂದ ಸಚಿವರಿಂದ   ತಮ್ಮ ಭಟ್ಕಳ ಕಛೇರಿಯಲ್ಲಿ  ಜನತಾ ದರ್ಶನ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಯಿತು

ಹೌದು ವೀಕ್ಷಕರೆ  ತಿಂಗಳಲ್ಲಿ ಕನಿಷ್ಟ ಒಂದರಿಂದ ಎರಡು ಬಾರಿಯಾದರು ಸಚಿವ ಮಂಕಾಳು ವೈದ್ಯರು    ಭಟ್ಕಳ ಹಾಗು  ಹೊನ್ನಾವರ ತಾಲೂಕಿನ ತಮ್ಮ ಕಛೇರಿಗಳಲ್ಲಿ  ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡು   ಬಡ ಸಾರ್ವಜನಿಕರ  ಕುಂದುಕೊರತೆಯನ್ನು ಆಲಿಸುವ ಕಾರ್ಯವನ್ನು ಮಾಡುತ್ತಾರೆ ಇವರ ಜನತಾ ದರ್ಶನದಲ್ಲಿ ಈಗಾಗಲೆ ಸಾವಿರಾರು ಜನ ಸಾರ್ವಜನಿಕರು ಪಾಲ್ಗೊಂಡು ತಮ್ಮ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಂಡಿದ್ದಾರೆ 

ಗುರುವಾರವಾದ ಇಂದು ಸಚಿವರ ಭಟ್ಕಳ ತಾಲೂಕಿನ ಕಛೇರಿಯಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆದಿದ್ದು  ಈ ಕಾರ್ಯಕ್ರಮದಲ್ಲಿ ಅಸಂಖ್ಯ ಸಾರ್ವಜನಿಕರು ತಮ್ಮ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಂಡಿದ್ದಾರೆ 

ಕಾರ್ಯಕ್ರಮದ ಬಗ್ಗೆ ಸಚಿವರು ಮಾಧ್ಯಮಕ್ಕೆ ಪ್ರತಿಕ್ರಿಯೇ ನೀಡಿ ನಮ್ಮ ಈ ಜನತಾ ಧರ್ಶನದ ಮುಖ್ಯ ಉದ್ದೇಶ ಸಾರ್ವಜನಿಕರ ಸಮಸ್ಯೆ ನಿವಾರಣೆಯಾಗಿರುತ್ತದೆ  ನಾವು ಭಟ್ಕಳ ಮತ್ತು ಹೊನ್ನಾವರ ಕಛೇರಿಯಲ್ಲಿ  ಜನತಾ ದರ್ಶನ ಕಾರ್ಯಕ್ರಮವನ್ನು ಪ್ರತಿ ತಿಂಗಳು ಹಮ್ಮಿಕೊಳ್ಳತ್ತಲೆ ಬಂದಿದ್ದೇವೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೇ ಹಾಗು ಸ್ಪಂದನೆ ದೊರೆತಿದೆ ನಾನು ಸಚಿವನಾಗಿರುವುದೆ ಸಾರ್ವಜನಿಕರ ಸೇವೆ ಮಾಡುವುದಾಗಿರುತ್ತದೆ ನಾನೊಬ್ಬ ಜನ ಸೇವಕ ನನ್ನ ಉದ್ದೇಶವೆ ಜನ ಸೇವೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ  ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ , ಕಾರ್ಯದರ್ಶಿ ಸುರೇಶ ನಾಯ್ಕ  ಜಾಲಿ ಪಟ್ಟಣ ಪಂಚಾಯತ್  ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಮೊಗೇರ್ ,   ವೆಂಕಟೇಶ ದೇವಾಡಿಗ  ವಿಷ್ಣು ದೇವಾಡಿಗ , ಮಂಜುನಾಥ ನಾಯ್ಕ ಬೆಳ್ಕೆ , ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top