ಲಕ್ಷದ್ವೀಪದ ಅಭಿವೃದ್ದಿ ಮೂಲ ಸೌಕರ್ಯಯೊಜನೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ
ಲಕ್ಷದ್ವೀಪದ ಅಭಿವೃದ್ಧಿ ಹಾಗೂ ಮೂಲ ಸೌಕರ್ಯ ಯೋಜನೆಗಳ ಕುರಿತು ಅಲ್ಲಿನ ಕೇಂದ್ರಾಡಳಿತ ಅಧಿಕಾರಿಗಳೊಂದಿಗೆ ಹಾಗೂ ಬಂದರು ಇಲಾಖೆ ಅಧಿಕಾರಿಗಳೊಂದಿಗೆ ಸಚಿವ ಮಂಕಾಳು ವೈದ್ಯರು ಸಬೆ ನಡೆಸಿ ಚರ್ಚೆಯನ್ನು ನಡೆಸಿದರು
ಲಕ್ಷದ್ವೀಪಗಳ ವ್ಯಾಪಾರ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಯೋಜನಕಾರಿಯಾಗಲು ದಕ್ಷಿಣಕನ್ನಡದ ಬಂದರುಗಳನ್ನು ಅಭಿವೃದ್ಧಿಪಡಿಸಿ ಉತ್ತೇಜಿಸುವುದು . ಮಂಗಳೂರಿನಲ್ಲಿ ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿಯನ್ನು ಅಭಿವೃದ್ಧಿಪಡಿಸಿ ಚಾಲ್ತಿಯಲ್ಲಿರುವ ಯೋಜನೆಗಳ ಪ್ರಗತಿಯನ್ನು ವೇಗಗೊಳಿಸಿ, ಲಕ್ಷದ್ವೀಪಕ್ಕೆ ಬೇಕಾಗುವ ಆಹಾರ ಪದಾರ್ಥಗಳು, ನಮ್ಮ ರಾಜ್ಯದ ನಂದಿನಿ ಹಾಲು ಪದಾರ್ಥಗಳು, ಔಷಧಿಗಳು ಹಾಗೂ ತಾಜ ಉತ್ಪನ್ನಗಳ ಸರಕು ಸಾಗಣಿಕೆಗೆ, ವ್ಯಾಪಾರ ಮಾರ್ಗಗಳನ್ನು ಹೆಚ್ಚಿಸಲು ಹಳೆ ಮಂಗಳೂರು ಬಂದರಿಗೆ ಸಮೀಪದಲ್ಲಿಅಗತ್ಯ ಮೂಲಸೌಕರ್ಯಗಳನ್ನು ಸ್ಥಾಪಿಸುವ ಬಗ್ಗೆ ಕೇಂದ್ರಾಡಳಿತ ಪ್ರದೇಶ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಕರ್ನಾಟಕ ಮತ್ತು ಲಕ್ಷದ್ವೀಪ ನಡುವಿನ ಐತಿಹಾಸಿಕ ವ್ಯಾಪಾರ ಮಾರ್ಗಗಳನ್ನು ಪುನರ್ಜೀವನಗೊಳಿಸಲು ಕರ್ನಾಟಕ ಮ್ಯಾರಿಟೈಮ್ ಬೋರ್ಡ್ ಪೂರ್ವಭಾವಿಯಾಗಿ ಕೆಲಸ ಮಾಡುತ್ತದೆ. ಲಕ್ಷದ್ವೀಪ ಅಭಿವೃದ್ಧಿಗೆ ಬೆಂಬಲ ನೀಡುವುದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಒಟ್ಟಾರೆ ಸಚಿವ ಮಂಕಾಳು ವೈದ್ಯರು ರಾಜ್ಯದಲ್ಲಿ ಅಭಿವೃದ್ದಿಯ ಕನಸನ್ನು ಹೊಂದಿದ್ದು ರಾಜ್ಯದ ಜನತೆ ಸಚಿವರ ಕಡೆ ನಿರಿಕ್ಷೇಯ ನೊಟವನ್ನು ಬೀರುತ್ತಿದ್ದಾರೆ