ಯುವಕನೊರ್ವ ಮನನೊಂದು ನೇಣಿಗೆ ಶರಣು

ಯುವಕ ತಾನು ಕೆಲಸ ಮಾಡುತ್ತಿದ್ದ ಲಾಡ್ಜಲ್ಲೆ  ಸಾವಿಗೆ ಶರಣು

ಕುಟುಂಬದವರಿಗೆ ಸಾಂತ್ವನ ಹೇಳಿದ ಸಚಿವ ಮಂಕಾಳು ವೈದ್ಯ

ಭಟ್ಕಳ: ತಾಲೂಕಿನ ಹೆಬ್ಳೆ ಹೊನ್ನೆಗದ್ದೆ ಸಂದೀಪ್ ತಿಮ್ಮಯ್ಯ ನಾಯ್ಕ ಎಂಬ ಯುವಕನೊರ್ವ ಮನನೊಂದು ಸಾವಿಗೆ ಶರಣಾದ ಹೃದಯ ವಿದ್ರಾವಕ ಘಟನೆ ನಡೆದಿದೆ

ಈ ಯುವಕ ಭಟ್ಕಳದ ಆಲ್ಮನಲ್ ಲಾಡ್ಜ ಅಲ್ಲಿ ಸಂಜೆ ಏಳರಿಂದ ಬೆಳಿಗ್ಗೆ ಏಳರ ತನಕ ಕೆಲಸ ಮಾಡುತ್ತಿದ್ದು ಬೆಳಿಗ್ಗೆ ಖಾಸಗಿ ಸೊಸೈಟಿ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದನು ಗುರುವಾರ ಸಂಜೆ ಕೆಲಸ ಬಂದವನು ಶುಕ್ರವಾರ ಬೆಳಿಗ್ಗೆ  ಏಳಕ್ಕೆ ಮನೆಗೆ ತೆರಳಿದ್ದಾನೆ  ಪುನಃ ಇತನು ಲಾಡ್ಜಗೆ ಬಂದು ನೇಣು ಬಿಗಿದು ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ

ಸುದ್ದಿ ತಿಳಿದ ತಕ್ಷಣ  ಸಚಿವ ಮಂಕಾಳ ವೈದ್ಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಮತ್ತು ಮೃತದೇಹವನ್ನು ಪೊಷ್ಟಮಾರ್ಟಮ್ಮಿಗೆ ಅಳವಡಿಸಿ ಕೂಡಲೆ ಕುಟುಂಬಸ್ಥರಿಗೆ ದೇಹವನ್ನು ಹಸ್ತಾಂತರಿಸುವಂತೆ ಹೇಳಿದ್ದರು

ಈ ಕುರಿತು ಮೃತನ ಸಹೋದರ ಶೇಖರ ತಿಮ್ಮಯ್ಯ ನಾಯ್ಕ  ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ಸ್ಥಳಕ್ಕೆ ನಗರ ಠಾಣೆಯ ಪಿ.ಎಸ್.ಐ ನವೀನ ನಾಯ್ಕ ವಿಧಿ ವಿಜ್ಞಾನ ಸ್ಥಳ ಪರಿಶೀಲನಾಧಿಕಾರಿ ರಮೇಶ, ನಗರ ಠಾಣೆಯ ಸಿಬ್ಬಂದಿ ದೀಪಕ ನಾಯ್ಕ,ಮದಾರಸಾಬ ಚಿಕ್ಕೇರಿ, ದೇವು ನಾಯ್ಕ ಕಿರಣ ಪಾಟೀಲ್, ವಿಜಯ ಜಾಧವ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುದ್ದಿ ತಿಳಿದು ಸಚಿವ ಮಂಕಾಳ ವೈದ್ಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

WhatsApp
Facebook
Telegram
error: Content is protected !!
Scroll to Top