ಸಚಿವರ ಮುಂದೆ ತಮ್ಮ ಅಹವಾಲನ್ನಿಟ್ಟು ತಮ್ಮ ಸಮಸ್ಯೆಗೆ ಪರಿಹಾರ ಪಡೆದ ಜನಸಾಮಾನ್ಯರು
ಸಮಾಜದ ಕಟ್ಟಕಡೆಯ ವ್ಯೆಕ್ತಿಕೂಡ ನನ್ನನ್ನು ನೇರವಾಗಿ ಭೇಟಿ ಯಾಗಬಹುದು ಸಚಿವ ಮಂಕಾಳು ವೈದ್ಯ
ಭಟ್ಕಳ ಹಾಗು ಹೊನ್ನಾವರದ ಜನ ಸಾಮಾನ್ಯರು ತಾಲೂಕಿನಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಸಚಿವ ಮಂಕಾಳು ವೈದ್ಯರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೋಂಡು ತಮ್ಮ ತಮ್ಮ ಸಮಸ್ಯೆಗಳನ್ನು ಸಚಿವರ ಮುಂದಿಟ್ಟು ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡರು
ಹೌದು ವಿಕ್ಷಕರೆ ಹೊನ್ನಾವರ ಕಛೇರಿ ಹಾಗು ಭಟ್ಕಳದ ಸಚಿವರ ಸ್ವಗ್ರಹದಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಜನತಾ ದರ್ಶನ ಕಾರ್ಯಕ್ರಮಕ್ಕೆ ಸಾವಿರಾರು ಸಾರ್ವಜನಿಕರು ಬೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದು ಪರಿಹಾರವನ್ನು ಕಂಡುಕೊಂಡರು
ಈ ಸಂದರ್ಬದಲ್ಲಿ ಸಾರ್ವಜನಿಕರೊರ್ವರು ಮಾತನಾಡಿ ಸಚಿವರ ಜನತಾ ಧರ್ಶನ ಕಾರ್ಯಕ್ರಮ ತುಂಬ ಪರಿಣಾಮಕಾರಿಯಾಗಿದ್ದು ಈ ಕಾರ್ಯಕ್ರಮದ ಮೂಲಕ ಜನಗಳು ಸಚಿವರನ್ನು ನೇರವಾಗಿ ಬೇಟಿಯಾಗಬಹುದಾಗಿದ್ದು ಸಚಿವರ ಜನರಿಗೆ ಸ್ಪಂದಿಸುತ್ತಿದ್ದು ನಮ್ಮ ಸಮಸ್ಯೆಗೆ ಪರಿಹಾರ ಹೊರೆಯುತ್ತಿದೆ ಎಂದು ಹೇಳಿದರು
ಜನತಾ ದರ್ಶನ ಸಮಯದಲ್ಲಿ ಸಚಿವರು ಮಾತನಾಡಿ ಜನರು ನೇರವಾಗಿ ನನ್ನನ್ನು ಬೇಟಿಯಾಗುವ ಅವಕಾಶ ಇದೆ ನಾನು ಸಾಮಾನ್ಯರಲ್ಲಿ ಸಾಮಾನ್ಯನಂತೆ ಜನರ ಸಮಸ್ಯೆಗೆ ಸ್ಪಂದಿಸುತ್ತೆನೆ ಜನರ ಯಾವುದೆ ಸಮಸ್ಯೆಗಳಿದ್ದರು ನನ್ನನ್ನು ಸಂಪರ್ಕಿಸ ಬಹುದಾಗಿದೆ ನನ್ನ ಜಿಲ್ಲೆಯ ಜನಸಾಮಾನ್ಯರ ಅಭಿವೃದ್ದಿಯೆ ನನ್ನ ಗುರಿ ಎಂದು ಹೇಳಿದರು
ಈ ಸಂದರ್ಬದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸಾಮಾನ್ಯರು ಸಚಿವರನ್ನು ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡರು