ದಿ.ರೇಷ್ಮಾ ನಾಯಕ ಅವರಿಗೆ ಶ್ರದ್ದಾಂಜಲಿ

ಸರಕಾರಿ ಪ್ರೌಢಶಾಲೆ ಬೆಳಕೆಯಲ್ಲಿ ಶಿಕ್ಷಕಿ ದಿ.ರೇಷ್ಮಾ ನಾಯಕ ಇವರ ಆತ್ಮಕ್ಕೆ ಚಿರ ಶಾಂತಿ ಕೋರಿ ಸಂತಾಪ ಸೂಚಕ ಸಭೆ ಆಯೋಜಿಸಲಾಗಿತ್ತು.

ಶ್ರದ್ದಾಂಜಲಿ ಸಭೆಯಲ್ಲಿ ಒಂದು ನಿಮಿಷದ ಮೌನಾಚರಣೆ ,ಪುಷ್ಪ ನಮನ, ಹಾಗೂ ಹಣತೆಗಳನ್ನು ಹಚ್ಚಿ ಶೃದ್ಧಾಂಜಲಿ ಸಲ್ಲಿಸಲಾಯುತು.* *ಹದಿನಾರು ವರ್ಷಗಳ ಕಾಲ ಬೆಳಕೆ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಉತ್ತಮ ಸೇವೆಯನ್ನು ನೆನಪಿಸಿ ಕೊಂಡು ಪ್ರತಿ ವಿದ್ಯಾರ್ಥಿಗಳ ಮನದಲ್ಲಿ ಅವರಿದ್ದಾರೆ ಎಂದು ನಿವೃತ್ತ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕರಾದ ಸದಾಶಿವ ಆಚಾರ್ಯರವರು ಹೇಳಿದರು. ರೇಷ್ಮಾ ನಾಯಕರವರ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗೆ ಉಚಿತ ನೋಟ ಬುಕ್ ಗಳನ್ನು ನೀಡಿದ ಅವರು ರೇಷ್ಮಾ ನಾಯಕರವರ ನಡೆ- ನುಡಿಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.*

*ಗ್ರಾಮ ಪಂಚಾಯತ ಬೆಳಕೆಯ ಅಧ್ಯಕ್ಷರಾದ ಜಗದೀಶ ನಾಯ್ಕರವರು ಒಬ್ಬ ಮಾದರಿ ಶಿಕ್ಷಕರಾಗಿ ಅವರು ನೀಡಿದ ಸೇವೆ ಸ್ಮರಣೀಯ ,ಯಾವುದೆ ಹಮ್ಮು – ಬಿಮ್ಮು ಇಲ್ಲದೆ ಸರ್ವರನ್ನು ಗೌರವದಿಂದ ನೋಡುವ ಅವರು ಇಷ್ಟು ಬೇಗ ನಮ್ಮನ್ನು ಅಗಲಿರುವುದು ಬೇಸರದ ಸಂಗತಿ ಎಂದು ಹೇಳಿದರು.*

*ಮುಖ್ಯಾಧ್ಯಾಪಕರಾದ ಶಾಲಿನಿ ನಾಯಕ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅವರ ಕೊಡುಗೆ ಅಪಾರ ಅವರ ಪ್ರಾಮಾಣಿಕ ಸೇವೆಯನ್ನು ಯಾವತ್ತೂ ಸ್ಮರಿಸುತ್ತೇವೆ. ಅವರ ಸ್ಮರಣಾರ್ಥವಾಗಿ ಹತ್ತು ಸಾವಿರ ರೂಪಾಯಿಯನ್ನು ಠೇವಣಿ ಇಟ್ಟು ಪ್ರತಿ ವರ್ಷ ಅದರಿಂದ ಬರುವ ಬಡ್ಡಿ ಹಣವನ್ನು ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿಅತಿ ಹೆಚ್ಚು ಅಂಕವನ್ನು ಪಡೆದ ವಿದ್ಯಾರ್ಥಿಗಳಿಗೆ ನೀಡುವುದಾಗಿ ಹೇಳಿದರು.*

*ರಾಜೀವ ಬಾಂದೇಕರ ಮಾತನಾಡಿ ನಾವಿಬ್ಬರೂ ಗಣಿತ ಶಿಕ್ಷಕರಾದರು ಕೂಡ ನಮ್ಮಲ್ಲಿ ಒಂದು ಬಾರಿಯು ಕೂಡ ಮನಸ್ಥಾಪ ಬರಲಿಲ್ಲ ನಿಜಕ್ಕೂ ಅವರೊಬ್ಬ ಅಪರೂಪದ ವ್ಯಕ್ತಿತ್ವದವರು ಎಂದು ಹೇಳಿದರು*

*ಪ್ರಕಾಶ ಶಿರಾಲಿ ಮಾತನಾಡಿ ನಿಷ್ಕಲ್ಮಶ ವ್ಯಕ್ತಿತ್ವದವರು ಯಾವಾಗಲೂ ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಬಯಸುವವರು.ಯಾರ ಮನಸ್ಸನ್ನು ನೋಯಿಸದ ಅವರು ವಿದ್ಯಾರ್ಥಿಗಳ ಹಾಗೂ ಸಹೋದ್ಯೋಗಿಗಳ, ಪಾಲಕರ ಅಚ್ಚುಮೆಚ್ಚಿನವರಾಗಿದ್ದರು ಅವರ ಬಗ್ಗೆ ಬರೆದ ಕವನವನ್ನು ವಾಚಿಸಿದರು.*

*ಪೂರ್ವ ವಿದ್ಯಾರ್ಥಿಗಳು, ರೇಷ್ಮಾ ಮೇಡಂ ರವರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಕಣ್ಣೀರ ಧಾರೆಯಾದರು. ನುಡಿ ನಮನದಲ್ಲಿ ಭಾಗಿಯಾದ ಗ್ರಾಮ ಪಂಚಾಯತ ಸದಸ್ಯರಾದ ಮಂಜಯ್ಯ ಮೊಗೇರ,* *ಎಸ್ ಡಿ ಎಂ.ಸಿ ಅಧ್ಯಕ್ಷರಾದ ಹೊನ್ನಪ್ಪ ನಾಯ್ಕ ,ಉಪಾಧ್ಯಕ್ಷರಾದ ಲೋಕೇಶ್ ನಾಯ್ಕ ,ಸದಸ್ಯರಾದ ಈಶ್ವರ ನಾಯ್ಕ, ತೇಜಕುಮಾರ ಜೈನ,*
*ಶಿಕ್ಷಕರಾದ ದೀಪಕ ನಾಯ್ಕ, ‌ಮಹೇಶ್ವರ ನಾಯ್ಕ ಕೇಶವ ಗೌಡ, ರಜನಿ ಶೆಟ್ಟಿ , ಹೇಮಾವತಿ ಎಸ್, ಪ್ರಶಾಂತಿ ನಾಯ್ಕ , ಸ್ವ- ಸಹಾಯ ಕೇಂದ್ರದ ಯೋಗಿನಿ ಮೊಗೇರ ಹಾಗೂ ಸಿಬ್ಬಂದಿ ವರ್ಗದವರು, ಅಕ್ಷರ ದಾಸೋಹ ಸಿಬ್ಬಂದಿ ವರ್ಗದವರು,* *ವಿದ್ಯಾರ್ಥಿಗಳು, ಪೂರ್ವ ವಿದ್ಯಾರ್ಥಿಗಳು ರೇಷ್ಮಾ ಮೇಡಂ ರವರನ್ನು ನೆನೆದು ಭಾವುಕರಾದ ಇವರೆಲ್ಲರ ಕಣ್ಣಂಚ್ಚು ಒದ್ದೆಯಾಗಿಸಿತ್ತು.*

*ಈ ಕಾರ್ಯಕ್ರಮಕ್ಕೆ ಸಹಕರಿಸಿದ ಕೇಶವ ನಾಯ್ಕ ವಿನೋದ ನಾಯ್ಜ, ಮನೋಜ ನಾಯ್ಕ ಕಂಚಿಕೇರಿ ಇವರಿಗೆ ಧನ್ಯವಾದಗಳು.*

WhatsApp
Facebook
Telegram
error: Content is protected !!
Scroll to Top