ಭಟ್ಕಳ ಮುಠ್ಠಳ್ಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಉಚಿತ ದಂತ ಚಿಕಿತ್ಸಾ ಶಿಭಿರ

ಭಟ್ಕಳ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸ ಹಿ ಪ್ರಾ ಶಾಲೆ ಮುಠ್ಠಳ್ಳಿ ಮತ್ತು ಸಾವಿತ್ರಿ ಸ್ಪೆಷಾಲಿಟಿ ಡೆಂಟಲ್ ಕೇರ್ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಮಕ್ಕಳಿಗಾಗಿ ಉಚಿತ ದಂತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ದಂತ ವೈದ್ಯರಾದ ಡಾಕ್ಟರ್ ರವಿ ನಾಯ್ಕ್, ಡಾಕ್ಟರ್ ನಮೃತಾ ನಾಯ್ಕ್, ಡಾಕ್ಟರ್ ಜಿತೇಶ್ ಮೊಗೇರ ವಿದ್ಯಾರ್ಥಿಗಳಿಗೆ ಹಲ್ಲಿನ ಆರೋಗ್ಯದ ಕುರಿತು ಮಾಹಿತಿಯನ್ನು ನೀಡಿ ಉಚಿತವಾಗಿ ದಂತ ತಪಾಸಣೆಯನ್ನು ನಡೆಸಿದರು
ನಂತರ ಅವರು ಮಾತನಾಡಿ ನಾವು ಇಂದು ಮಕ್ಕಳಿಗಾಗಿ ಉಚಿತ ದಂತ ತಪಾಸಣಾ ಶಿಭಿರವನ್ನು ಹಮ್ಮಿಕೊಳ್ಳಲಾಗಿದೆ ವಿಧ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆಯನ್ನು ಮಾಡುವುದೆ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಲ್ಲಿನ ಆರೋಗ್ಯಕ್ಕೆ ಸಂಬಂಧಿಸಿದ ಪರಿಕರಗಳನ್ನು ಒಳಗೊಂಡ ಕಿಟ್ ವಿತರಿಸಲಾಯಿತು. ಕಿಟ್ ನ ಪ್ರಾಯೋಜಕತ್ವ ವಹಿಸಿಕೊಂಡ ಏರೋಸ್ ಮೈಕ್ರೋ ಲ್ಯಾಬ್ ನ ವೈದ್ಯಕೀಯ ಪ್ರತಿನಿಧಿಗಳನ್ನು ಮತ್ತು ಉಚಿತ ದಂತ ತಪಾಸಣೆಯನ್ನು ನಡೆಸಿದ ಪ್ರಖ್ಯಾತ ವೈದ್ಯರನ್ನು ಶಾಲೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

WhatsApp
Facebook
Telegram
error: Content is protected !!
Scroll to Top