ಮನೆಯೊಂದಕ್ಕೆ ನೋಟಿಸು ಅಂಟಿಸಿ ಹೊಗಿದ್ದಾದರು ಏಕೆ
ಶಂಕಿತನ ಉಗ್ರನ ಪತ್ತೆಗಾಗಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಆತನ ಮನೆಗೆ ನೋಟಿಸ್ ಅಂಟಿಸಿ ಶೋಧ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.
ಭಟ್ಕಳ ತಾಲೂಕಿನ ನವಾಯತ್ ಕಾಲೋನಿಯ ಹಾಜಿ ಮಂಜಿಲ್ ನಿವಾಸಿಯಾಗಿದ್ದ ಅಬ್ದುಲ್ ಕಬೀರ್ ಸುಲ್ತಾನ್ ಅಲಿಯಾಸ್ ಮೌಲಾನ ಸುಲ್ತಾನ್ ಎಂಬಾತನಿಗೆ ಪುಣೆಯಲ್ಲಿ ನಡೆದ ಉಗ್ರ ಕೃತ್ಯ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ.ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿರುವ ಈತ ಸಿರಿಯಾ ಅಥವಾ ಅಫ್ಘಾನಿಸ್ತಾನದಲ್ಲಿ ಅಮೇರಿಕಾ ಬಾಂಬ್ ಬ್ಲಾಸ್ಟ್‌ಗೆ ಮೃತನಾಗಿರುವ ಬಗ್ಗೆ ಅಮೇರಿಕದ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿತ್ತು. ಆದರೇ ಈತನ ಸಾವಿಗೆ ಯಾವುದೇ ಪುರಾವೆಗಳು ಭಾರತಕ್ಕೆ ದೊರೆತಿರಲಿಲ್ಲ.
ಹೀಗಾಗಿ ಮಹಾರಾಷ್ಟ್ರ ಕೋರ್ಟ್( Maharashtra court )ನಿಂದ ಬಂಧಿಸಲು ಸೂಚನೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಪೊಲೀಸರ ಸಹಾಯ ಕೇಳಿದ್ದು ಈತ ಬದುಕಿದ್ದಾನ ಎಂಬ ಹಿನ್ನೆಲೆಯಲ್ಲಿ ಶೋಧ ನಡೆಸಿದ್ದು ಒಂದುವೇಳೆ ಮೃತನಾಗಿದ್ದರೇ ಕುಟುಂಬದವರು ಮಾಹಿತಿ ನೀಡುವ ಸಲವಾಗಿ ನೋಟಿಸ್ ಅಂಟಿಸಿದ್ದಾರೆ.
ಆದರೇ ಈತನ ಬಗ್ಗೆ ಕುಟುಂಬದವರು ಸಹ ಯಾವುದೇ ಮಾಹಿತಿ ನೀಡಿಲ್ಲ ಎಂಬ ಮಾಹಿತಿ ಪೊಲೀಸರಿಂದ ತಿಳಿದುಬಂದಿದೆ.
ಒಟ್ಟಾರೆ ಭಟ್ಕಳದಲ್ಲಿ ಉಗ್ರ ಹಾಗು ಗುಪ್ತ ಚರ ಇಲಾಖೆ ಹಾವು ಏಣಿ ಆಟ ಪುನಃ ಪ್ರಾರಂಬವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ