ಅಂಗನವಾಡಿಯ ಕಟ್ಟಕಡೆಯ ಬಡ ಮಕ್ಕಳಿಗೂ ಸರಕಾರದ ಸೌಲಬ್ಯ ದೊರೆಯಬೇಕು ಎನ್ನುವುದೆ ನನ್ನ ಉದ್ದೇಶ ಸಚಿವ ಮಂಕಾಳು ವೈದ್ಯ
ಭಟ್ಕಳ : ಅಂಗನವಾಡಿ ಕಾರ್ಯಕರ್ತೆಯರು ಸಮಾಜಕ್ಕೆ ತುಂಬ ಒಳ್ಳೆಯ ಕೊಡುಗೆಯನ್ನು ನೀಡಿದ್ದಾರೆ ಸಮಾಜಕ್ಕೆ ಅವರು ಕೊಟ್ಟಕೊಡುಗೆ ಇಂದಿನ ಮಕ್ಕಳನ್ನು ದೇಶದ ಭವಿಷ್ಯಕ್ಕೆ ಭದ್ರಬುನಾಧಿಯನ್ನಾಗಿ ರೂಪಿಸುತ್ತಾರೆ ಅವರಿಗೆ ನನ್ನ ಧನ್ಯವಾದ ಎಂದು ಸಚಿವ ಮಂಕಾಳು ವೈದ್ಯರು ಹೇಳಿದರು
ಅವರು ಸಿದ್ದರಾಮಯ್ಯ ಅವರ ನಾಯಕತ್ವದ ಕರ್ನಾಟಕ ಸರಕಾರದ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನಿಡಲ್ಪಡುವ ಉಚಿತ ಮೊಬೈಲ್ ಅನ್ನು ವಿತರಿಸಿ ನನ್ನ ಉದ್ದೇಶ ಸಮಾಜದ ಎಲ್ಲಾ ಕಟ್ಟಕಡೆಯ ವ್ಯಕ್ತಿಗೆ ಸರಕಾರದ ಎಲ್ಲಾ ಸೌಲಬ್ಯಗಳು ತಲುಪುವಂತಾಗಬೇಕು ನಾನು ಕೆಲವೊಮ್ಮೆ ಅಧಿಕಾರಿಗಳಿಗೆ ಕಟುವಾಗಿ ಯಾವುದೇ ಮಾತನ್ನಾಡಿದರೂ ಕೂಡ ಅದು ಸಾರ್ವಜನಿಕರಿಗೆ ಒಳಿತನ್ನು ಮಾಡುವ ಉದ್ದೇಶ ಹೊಂದಿರುತ್ತದೆ ಯಾವ ಅಧಿಕಾರಿಗಳು ಸಿಬ್ಬಂದಿಗಳು ಸಾರ್ವಜನಿಕರ ಸೇವೆಗಳನ್ನು ನಿಷ್ಟೆಯಿಂದ ಮಾಡಬೇಕು ಎನ್ನುವ ಉದ್ದೇಶವನ್ನು ಹೊಙದಿರುತ್ತದೆ ಯಾರು ಅನ್ಯತಾ ಬಾವಿಸುವ ಅಗತ್ಯ ಇಲ್ಲ ಅಂಗನವಾಡಿ ಕಟ್ಟಡವು ಬಾಡಿಗೆ ಕಟ್ಟಡದಲ್ಲಿ ನಡೆಸುವಂತಿಲ್ಲ ಸ್ವಂತಕಟ್ಟಡದಲ್ಲಿ ನಡೆಸುವಂತಾಗಬೇಕು ಎಂದು ನಾನು ಕೆಲವೊಮ್ಮೆ ಕಟುವಾಗಿ ಮಾತನಾಡಿದ್ದೆನೆ ಅಂಗನವಾಡಿ ಕಾರ್ಯಕರ್ತೆಯರು ಬೇಸರಿಸಿಕೊಳ್ಳಬೇಡಿ ನನ್ನ ಉದ್ದೇಶ ಅಂಗನವಾಡಿ ಮಕ್ಕಳು ಸುಖವಾಗಿ ಯಾವುದೆ ಕಷ್ಟ ಅನುಭವಿಸಬಾರದು ಎಂಬುವುದಾಗಿದೆ ಸರಕಾರ ಅನುದಾನಗಳನ್ನು ಸಾಕಷ್ಟು ಬಿಡುಗಡೆ ಮಾಡುತ್ತಲೆ ಇದೆ ಇಲ್ಲಿ ನಾವು ಸರಿಯಾಗಿ ಕೆಲಸ ಮಾಡಿ ಮಕ್ಕಳ ಅಭಿವೃದ್ದಿಗೆ ಶ್ರಮೀಸೋಣ ಎಂದು ಹೇಳಿದರು
ಈ ಸಂದರ್ಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತಾಲೂಕ ತಹಶಿಲ್ದಾರರು ನಾಯ್ಕಡ್, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸುಶಿಲಾ ಮೊಗೇರ್ ಮುಂತಾದವರು ಉಪಸ್ಥಿತರಿದ್ದರು