ಭಟ್ಕಳ ವಕೀಲ ಸಂಘದ ವತಿಯಿಂದ ಸಚಿವ ಮಂಕಾಳು ವೈದ್ಯರಿಗೆ ಸನ್ಮಾನ

ಭಟ್ಕಳ ನ್ಯಾಯಾಲಯದ ನವೀನ ಸಂಕಿರ್ಣಕ್ಕೆ 12 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಕ್ಕಾಗಿ ವಕೀಲ ಬಂದುಗಳಿಂದ ಸಚಿವ ಮಂಕಾಳು ವೈದ್ಯರಿಗೆ ಧನ್ಯವಾದ ಅರ್ಪಣೆ

ಭಟ್ಕಳ ತಾಲೂಕಿನಲ್ಲಿ ವಕೀಲ ಸಂಘಟನೆ ನ್ಯಾಯಾಲಯದ ಹೊಸದಾದ ಕಟ್ಟಡಕ್ಕೆ ಸಚಿವ ಮಂಕಾಳು ವೈದ್ಯರು 12 ಕೋಟಿ ಅನುದಾನವನ್ನು ದೊರಕಿಸಿ ಕೊಟ್ಟ ಹಿನ್ನೆಲೆಯಲ್ಲಿ ಭಟ್ಕಳ ವಕೀಲ ಸಂಘ ಸಚಿವರನ್ನು ಪ್ರೀತಿಯಿಂದ ಗೌರವಿಸಿ ಸನ್ಮಾನವನ್ನು ಮಾಡಿತು

ಹೌದು ವೀಕ್ಷಕರೆ ಹಲವಾರು ವರ್ಷಗಳಿಂದ ಭಟ್ಕಳ ವಕೀಲ ಸಂಘವು ಹೊಸದಾದ ನ್ಯಾಯಾಲಯ ಸಂಕಿರ್ಣಕ್ಕಾಗಿ ಅಂದರೆ ಕಟ್ಟಡಕ್ಕಾಗಿ‌ ಬೇಡಿಕೆ ಇಡುತ್ತಲೆ ಬಂದಿತ್ತು ಆದರೆ ವಕೀಲರ ಈ ಆಸೆ ಕೇವಲ ಮರೀಚಿಕೆಯಾಗಿಯೆ ಉಳಿದು ಹೊಯಿತು ಆದರೆ ಸಚಿವ ಮಂಕಾಳು ವೈದ್ಯರು ಸಚಿವರಾಗಿ ಅಧಿಕಾರ ಸ್ವಿಕರಿಸಿದ ನಂತರ ಈ ವಕಿಲ ಸಂಘವು ಸಚಿವರಲ್ಲಿ ಹೊಸ ನ್ಯಾಯಾಲಯ ಸಂಕಿರ್ಣ ನಿರ್ಮಿಸಿಕೊಡಲು ಮನವಿ ಮಾಡಿಕೊಂಡಿತ್ತು ಆ ಸಂದರ್ಬದಲ್ಲಿ ಸಚಿವರು ಅಸ್ತು ಹೇಳಿದ್ದರು ನುಡಿದಂತೆ ಇಂದು ಸಚಿವ ಮಂಕಾಳು ವೈದ್ಯರು ನಡೆದುಕೊಂಡು ನ್ಯಾಯಾಲಯ ಸಂಕಿರ್ಣಕ್ಕಾಗಿ ಬರೊಬ್ಬರಿ ೧೨ ಕೋಟಿಯನ್ನು ಬಿಡುಗಡೆಗೊಳಿಸಲು ಯಶಸ್ವಿಯಾಗಿದ್ದಾರೆ ವಕೀಲರ ಹಲವಾರು ವರ್ಷದ ಆಸೆಯನ್ನು ಇಡೆರಿಸಿದ್ದಾರೆ ಈ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕ ವಕೀಲ ಸಂಘವು ಸಚಿವರನ್ನು ಬೇಟಿಯಾಗಿ ಅವರನ್ನು ಪ್ರೀತಿಯಿಂದ ಗೌರವಿಸಿ ಸನ್ಮಾನಿಸಿತು

ಈ ಸಂದರ್ಬದಲ್ಲಿ ಹಿರಿಯ ವಕೀಲರಾದ ಆರ್ ಆರ್ ಶ್ರೇಷ್ಟಿ ಅವರು ಮಾತನಾಡಿ ನಮ್ಮ ವಕೀಲ ಸಂಘದ ಹಲವಾರು ವರ್ಷದ ಬೇಡಿಕೆ ಸಚಿವರು ಇಡೆರಿಸಿದ್ದಾರೆ ನಮ್ಮ ಸಂಘ ಸಚಿವರಿಗೆ ಆಬಾರಿಯಾಗಿದೆ ಅವರ ಜನಪರ ಕಾರ್ಯಕ್ಕೆ ನಾವು ಅಭಿನಂದಿಸುತ್ತೆವೆ ಎಂದು ಹೇಳಿದರು

ಸಚಿವ ಮಂಕಾಳು ವೈದ್ಯರು ಮಾತನಾಡಿ ನ್ಯಾಯಾಲಯದ ವಸತಿ ಸಂಕಿರ್ಣಕ್ಕಾಗಿ ಇನ್ನೂ ಹೆಚ್ಚುವರಿ ೨.೫ ಕೋಟಿ ರೂಪಾಯಿಗಳನ್ನು ಮಂಜೂರಿ ಮಾಡಿಸುವುದಾಗಿ ಹಾಗೂ ನ್ಯಾಯಾಲಯದ ಸುಸಜ್ಜಿತ ಕಟ್ಟಡ ನಿರ್ಮಣಕ್ಕೆ ಅಗತ್ಯವಾದ ಎಲ್ಲ ಸಹಕಾರ ನೀಡುವುದಾಗಿ ಸಚಿವರು ಈ ಸಮಯದಲ್ಲಿ ಭರವಸೆ ನೀಡಿದರು.

ಈ ಸಂದರ್ಬದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಗಣೇಶ ಎಮ್ ದೇವಾಡಿಗ, ಕಟ್ಟಡ ಸಮಿತಿಯ ಅಧ್ಯಕ್ಷರಾದ ಎಮ್ ಎಲ್ ನಾಯ್ಕ, ಹಿರಿಯ ವಕೀಲರಾದ , ನಾಗರಾಜ ಈ ಎಚ್, ವಿ ಎಮ್ ನಾಯ್ಕ, ಎಮ್ ಜೆ ನಾಯ್ಕ,ಜಿ ಎಸ್ ದೇವಾಡಿಗ, ಮಹೇಶ್ ನಾಯ್ಕ, ನಾಗರಾಜ ಹೆಗ್ಡೆ, ದುರ್ಗೇಶ ವೈದ್ಯ, ಸುರೇಶ ಟಿ ನಾಯ್ಕ, ಗುರುದಾಸ ಮೊಗೇರ, ಎಮ್ ಟಿ ನಾಯ್ಕ, ಭಟ್ಕಳ ವಕೀಲರ ಪರವಾಗಿ ಸಚಿವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.

WhatsApp
Facebook
Telegram
error: Content is protected !!
Scroll to Top