ಭಟ್ಕಳ: ಪೊಲೀಸ್ ತರಬೇತಿ ಶಾಲೆ, ಕಡೂರಿನಲ್ಲಿ ಮುಂಬಡ್ತಿ ನಂತರದ ತರಬೇತಿಯಲ್ಲಿ ಭಟ್ಕಳ ಶಹರ ಠಾಣೆಯ ದೀಪಕ ಸದಾನಂದ ನಾಯ್ಕ ಇವರ ಕರ್ತವ್ಯ ಪ್ರಜ್ಞೆ, ಬುದ್ದಿವಂತಿಕೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ ಕುಮಾರ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ಮೇ ತಿಂಗಳಿನಲ್ಲಿ ಆರಂಭವಾಗಿ ಜೂನ್ ಮೊದಲ ವಾರದಲ್ಲಿ ಮುಕ್ತಾಯವಾದ ತರಬೇತಿ ಘಟಕದಲ್ಲಿ ಕರ್ನಾಟಕದಿಂದ ನೂರಾರು ಸಂಖ್ಯೆಯ ಪೊಲೀಸರು ಭಾಗಿಯಾಗಿದ್ದರು. ತರಬೇತಿ ವಿಭಾಗ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ ಕುಮಾರ ಅವರು ಘಟಕಕ್ಕೆ ಬೇಟಿ ನೀಡಿದ ಸಂದರ್ಬದಲ್ಲಿ ದೀಪಕ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಅತ್ಯುತ್ತಮವಾಗಿ ಉತ್ತರ ನೀಡಿದ ಪರಿ ಹಾಗೂ ಅವರ ಬುದ್ದಿವಂತಿಕೆಗೆ ಮೆಚ್ಚಿ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲೂ ಇದೆ ರೀತಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಹೇಳಿದ್ದಾರೆ.