ಅಭಿವೃದ್ದಿಗೆ ಮಹತ್ವ ಕೊಡುತ್ತಿರುವ ಸಚಿವ ಮಂಕಾಳು ವೈದ್ಯ
ಭಟ್ಕಳ : ಹೊನ್ನಾವರ ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ಪ್ರಾರಂಬವಾಗಿದ್ದು ಮತ್ತೊಮ್ಮೆ ಅಭಿವೃದ್ದಿಯ ಪರ್ವ ಪ್ರಾರಂಬವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ ಸಚಿವ ಮಂಕಾಳು ವೈದ್ಯರ ಅಭಿವೃದ್ದಿ ಪರ ಕಾರ್ಯದ ಬಗ್ಗೆ ಜಿಲ್ಲೆಯಾಧ್ಯಂತ ಪ್ರಶಂಸೆ ವ್ಯೆಕ್ತವಾಗಿದೆ.
ಹೌದು ವೀಕ್ಷಕರೆ ಕಳೆದೊಂದಿಷ್ಟು ವರ್ಷಗಳಿಂದ ಭಟ್ಕಳ ಹೊನ್ನಾವರ ಕ್ಷೇತ್ರ ಜಿಡ್ಡುಹಿಡಿದು ಕುಳಿತುಕೊಂಡಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ ಕ್ಷೇತ್ರದಲ್ಲಿ ಅಭಿವೃದ್ದಿ ಮರಿಚಿಕೆಯಾಗಿ ಹೊಗಿತ್ತು. ಯಾವುದೇ ಕೆಲಸ ಕಾರ್ಯಗಳು ನಡೆಯದೆ ಅಭಿವೃದ್ದಿ ಆಮೆಯ ನಡಿಗೆಯ ವೇಗವನ್ನು ಪಡೆದುಕೊಂಡಿತ್ತು ಆದರೆ ಜನಪರ ರಾಜಕಾರಣಿ ಮಂಕಾಳ ವೈದ್ಯರು ಕ್ಷೇತ್ರದಲ್ಲಿ ಗೆದ್ದು ಬಂದು ಸಚಿವರಾಗಿ ಅಧಿಕಾರ ಸ್ವಿಕರಿಸಿದಾಗಿಂದ ಕ್ಷೇತ್ರ ಅಭಿವೃದ್ದಿಯತ್ತ ಮುಖ ಮಾಡಿದೆ ಈ ಬಗ್ಗೆ ನಾವು ಅನೇಕ ಉದಾಹರಣೆಗಳನ್ನು ತೆಗೆದುಕೊಳ್ಳ ಬಹುದು ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಎಷ್ಟೋ ವರ್ಷಗಳಿಂದ ಕೆಲವು ದೇವಸ್ಥಾನಗಳು ಅಭಿವೃದ್ದಿ ಕಾಣದೆ ಅಜಿರ್ಣಾವಸ್ಥೆಯಲ್ಲಿತ್ತು ಆದರೆ ಸಚಿವರ ಅಧಿಕಾರ ಅವದಿಯಲ್ಲಿ ಇಂತದ ದೇವಸ್ಥಾನಗಳು ಅಭಿವೃದ್ದಿಯನ್ನು ಕಂಡುಕೊಂಡಿದೆ
ಇನ್ನು ಭಟ್ಕಳ ಜೆ ಎಮ್ ಎಪ್ ಸಿ ಕೊರ್ಟ ಸಂಕಿರ್ಣ ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಹೊಸದಾದ ಭಟ್ಕಳ ಜೆ ಎಮ್ ಎಪ್ ಸಿ ಕೊರ್ಟ ಸಂಕಿರ್ಣಕ್ಕಾಗಿ ವಕೀಲ ಬಂದುಗಳು ಸಾರ್ವಜನಿಕರು ಅಧಿಕಾರಿಗಳು ಬೇಡಿಕೆ ಇಡುತ್ತಲೆ ಬಂದಿದ್ದರು ಆದರೆ ಬೇಡಿಕೆ ಬೇಡಿಕೆಯಾಗೆ ಉಳಿಯಿತೆ ಹೊರತು ಬೇಡಿಕೆ ಇಡೆರಲೆ ಇಲ್ಲಾ ಆದರೆ ಮಂಕಾಳು ವೈದ್ಯರು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಸಚಿವರ ಹಟವಾದಿತನ ಹಾಗು ಅಭಿವೃದ್ದಿಯ ಕನಸಿಗೆ ಕರ್ನಾಟಕ ಸರಕಾರ 12 ಕೊಟಿ ಅನುದಾನ ಬಿಡುಗಡೆ ಮಾಡಲು ಅಸ್ತು ಎಂದಿದೆ ಸದ್ಯದಲ್ಲೆ ಭಟ್ಕಳ ಜೆ ಎಮ್ ಎಪ್ ಸಿ ಕೊರ್ಟ ಕಟ್ಟಡ ಸಂಕಿರ್ಣ ವಿನೂತನ ಮಾದರಿಯಲ್ಲಿ ತಲೆ ಎತ್ತಲಿದ್ದು ಇದರ ಶ್ರೇಯಸ್ಸು ಸಚಿವ ಮಂಕಾಳು ವೈದ್ಯರಿಗೆ ಸಲ್ಲಬೇಕಾಗುತ್ತದೆ
ಹಾಗೆ ಭಟ್ಕಳ ತಾಲೂಕ ಆಸ್ಪತ್ರೆ ಎಂದರೆ ಎಲ್ಲರು ಮೂಗು ಮುರಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು ಯಾವಾಗಲು ಈ ಆಸ್ಪತ್ರೆ ವಿವಾದದಲ್ಲೆ ಕಾಲಕಳೆಯುತ್ತಿತ್ತು ಅಧಿಕಾರಿಗಳ ಒಳ ಜಗಳ ಆಸ್ಪತ್ರೆಯಲ್ಲಿ ಬೀದಿನಾಯಿಗಳ ಕಾಟ ಒಂದೆ ಎರಡೆ ಸಮಸ್ಯೆಯ ಆಗರವಾಗಿ ಪರಿವರ್ತನೆಯಾಗಿತ್ತು ಸುಮಾರು 50 ವರ್ಷಗಳಿಂದ ಆಸ್ಪತ್ರೆಗೆ ಜಾಗದ ಆರ್ಟಿಸಿಯೆ ಇಲ್ಲವಾಗಿತ್ತು ಈ ಬಗ್ಗೆ ಗಮನಹರಿಸದ ಆಸ್ಪತ್ರೆ ಕೇವಲ ಪ್ರಚಾರದ ತೆವಲಿಗಿ ಬಿದ್ದು ಆಸ್ಪತ್ರೆಯ ಅಧಿಕಾರಿಗಳು ಕೆವಲ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತ ವಾಗಿತ್ತು ಇಂಥ ಪರಿಸ್ಥಿತಿಯನ್ನು ಮನಗಂಡ ಸಚಿವರು ಅದಿಕಾರಿಗಳಿಗೆ ಸರಿಯಾದ ಮೂಗುದಾರವನ್ನು ಹಾಕಿ ಎಲ್ಲರನ್ನು ತಹಬದಿಗೆ ತಂದಿದ್ದಾರೆ ಹಾಗೆ 50 ವರ್ಷಗಳಿ ಆರ್ಟಿಸಿ ಇಲ್ಲದೆ ಪರದಾಡುತ್ತಿದ್ದ ಆಸ್ಪತ್ರೆಗೆ ಆರ್ ಟಿ ಸಿ ಅನ್ನು ಮಾಡಿಸಿ ಸಚಿವ ಮಂಕಾಳು ವೈದ್ಯರು ಆಸ್ಪತ್ರೆಯ ಅಭಿವೃದ್ದಿಗೆ ಕಾರಣವಾಗಿದ್ದಾರೆ ಸಮಸ್ಯೆಯ ಗುಡಾಗಿದ್ದ ಭಟ್ಕಳ ತಾಲೂಕ ಆಸ್ಪತ್ರೆ ಇಂದು ತನ್ನ ನ್ಯೂನ್ಯತೆಯನ್ನು ತೋಡೆದು ಅಭಿವೃದ್ದಿಯತ್ತ ಮುಖಮಾಡಿದೆ ಎಂದರೆ ಅದಕ್ಕೆ ಸಚಿವರ ಕಾಳಜಿ ಮುಂದಾಳತ್ವವೆ ಕಾರಣವಾಗಿದೆ .
ಇನ್ನು ಸಚಿವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತಲೆ ಬಂದಿದ್ದಾರೆ ಶಾಲೆ ಮತ್ತುಅಂಗನವಾಡಿಗಳು ದೇವಸ್ಥಾನ ಇದ್ದಂತೆ ಶಾಲೆ ಒಂದು ತೆರೆದರೆ ಒಂದು ದೇವಸ್ಥಾನ ಕಟ್ಟಿದ ಪುಣ್ಯ ಬರುತ್ತದೆ ಎಂದು ಇವರು ಹೇಳುತ್ತಲೆ ಇರುತ್ತಾರೆ
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಹಾಗು ಸರಕಾರದ ಸೌಲಬ್ಯಗಳು ತಲುಪುವಂತಾಗಬೇಕು ಎನ್ನುವುದು ಸಚಿವರ ಮಾತಾಗಿದೆ
ದಿನಗಳೆದಂತೆ ಉತ್ತರ ಕನ್ನಡ ಜಿಲ್ಲೆ ಅಭಿವೃದ್ದಿ ಪಥದತ್ತ ನಾಗಲೋಟಕ್ಕೆ ಇಳಿದಿದೆ ಎಂದರೆ ತಪ್ಪಾಗಲಿಕ್ಕಿಲ್ಲ
ಒಟ್ಟಾರೆ ಕಾಂಗ್ರೇಸ್ ಪಕ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪಕ್ಷ ಮುನ್ನಡೆಸಲು ಜಿಲ್ಲೆಯ ಅಭಿವೃದ್ದಿಗೆ ಒಬ್ಬ ಸಮರ್ಥ ಜನಪರ ನಾಯಕ ಸಿಕ್ಕಿದ್ದಾನೆ ಎಂದರೆ ತಪ್ಪಾಗಲಿಕ್ಕಿಲ್ಲ