ದೋಣಿ ಪರಿಶೀಲನೆ ಸಂದರ್ಬದಲ್ಲಿ ಮಾರಾಮಾರಿ
ಸ್ವಲ್ಪದರಲ್ಲೆ ತಪ್ಪಿದ ಬಾರಿ ಅನಾಹುತ
ಭಟ್ಕಳ ತಾಲೂಕಿನಲ್ಲಿ ಮೀನುಗಾರಿಕೆ ಇಲಾಖೆಯಿಂದ 2020-21 ನೆ ಸಾಲಿನಲ್ಲಿ ಗಿರಿಜನ ಉಪಯೋಜನೆಯಡಿ ವಿತರಿಸಲಾದ ದೋಣಿ, ಬಲೆ, ಇಂಜಿನ್ ಮತ್ತು ಇತರೇ ಪರಿಕರಗಳ ಸಂಬಂದ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ಮಾಡಿ ತಮ್ಮನ್ನು ಸಾಮಾಜಿಕ ಕಾರ್ಯಕರ್ತರು ಎಂದು ಹೇಳಿಕೊಂಡು ಕೆಲವು ವ್ಯಕ್ತಿಗಳು ಇಲಾಖೆಗೆ ದೂರು ಅರ್ಜಿ ಸಲ್ಲಿಸಿದ್ದರು ಇವರು ನೀಡಿರುವ ದೂರಿನ ಪರಿಶೀಲನೆಗಾಗಿ ಪರಿಶಿಲನಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ಸಂದರ್ಬದಲ್ಲಿ ದೋಣಿಯಲ್ಲಿ ಪಾಲುದಾರರಾಗಿ ದೋಣಿ ನಡೆಸುತ್ತಿರುವ ಸಾರ್ವಜನಿಕರಲ್ಲೊಬ್ಬರಾದ ವಿನೋದ ಮೊಗೇರ್ ಹಾಗು ಅವ್ಯವಹಾರದ ದೂರುದಾರರ ಗುಂಪಿನ ಮದ್ಯ ಮಾತಿಗೆ ಮಾತು ಬೆಳೆದು ಮಾರಾಮಾರಿಯಾಗಿದ್ದು ನಡೆಯಬೇಕಿದ್ದ ಅನಾಹುತ ಸ್ವಲ್ಪದರಲ್ಲೆ ತಪ್ಪಿದ್ದು ಪರಿಶಿಲನೆಗೆ ಬಂದಿದ್ದ ಪರಿಶೀಲನಾಧಿಕಾರಿಗಳು ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ
ಹೌದು ವೀಕ್ಷಕರೆ ಸುಮಾರು ನಾಲ್ಕು ವರ್ಷಗಳ ಹಿಂದೆ ಮಿನುಗಾರಿಕಾ ದೋಣಿ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಕೆಲವು ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಳ್ಳುವ ವ್ಯಕ್ತಿಗಳು ಇಲಾಖೆಗೆ ದೂರನ್ನು ಸಲ್ಲಿಸಿದ್ದರು ಈ ಸಂಬಂದ ಮೀನುಗಾರಿಕಾ ಇಲಾಖೆ ಈಗಾಗಲೆ ನಾಲ್ಕು ಬಾರಿ ತನಿಖೆಯನ್ನು ನಡೆಸಿತ್ತು ಆದರು ಕೂಡ ಮತ್ತೆ ತನಿಖೆ ನಡೆಸುವಂತೆ ಅರ್ಜಿಸಲ್ಲಿಸಿದ ಕಾರಣ ಶುಕ್ರವಾರ ಪುನಃ ಮೀನುಗಾರಿಕಾ ಇಲಾಖೆ ತನಿಖೆಗೆ ಆಗಮಿಸಿದೆ ಈ ಸಂದರ್ಬದಲ್ಲಿ ಕೆಲವು ದೊಣಿ ಪಡೆದ ಫಲಾನುಭವಿಗಳು ಪುನಃ ಪುನಃ ಪರಿಶೀಲನಾ ನೆಪವನ್ನು ಮುಂದಿಟ್ಟುಕೊಂಡು ಮೀನುಗಾರರಾದ ನಮಗೆ ತೊಂದರೆಯನ್ನು ನೀಡುತ್ತಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು ಇದೆ ಸಂದರ್ಬದಲ್ಲಿ, , ಫಲಾನುಭವಿಯ ಪಾಲುದಾರರಾದ ವಿನೋದ ಮೊಗೇರ್ ಹಾಗು ದೂರು ಅರ್ಜಿದಾರರ ಗುಂಪಿನ ಮದ್ಯ ಮಾತಿನ ಚಕಮಕಿಗಳು ನಡೆದು ಕೊನೆಗೆ ಮಾರಾಮಾರಿಗಳು ಪ್ರಾರಂಬವಾಯಿತು ಅದ್ರಷ್ಟವಶಾತ್ ಸ್ಥಳಿಯರ ಹಾಗು ಕೆಲವು ಮೀನುಗಾರ ಮದ್ಯಪ್ರವೇಶದಿಂದ ನಡೆಯ ಬೇಕಿದ್ದ ಅನಾಹುತ ಸ್ವಲ್ಪದರಲ್ಲೆ ತಪ್ಪಿದೆ ಈ ಸಂದರ್ಬದಲ್ಲಿ ಪರಿಶೀಲನಾನಿರತ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿ ಹೊದರು
ಹೌದು ವೀಕ್ಷಕರೆ ಮೀನುಗಾರಿಕಾ ಇಲಾಖೆ ಸತತ ನಾಲ್ಕು ವರ್ಷಗಳಿಂದ ದೂರುದಾರರ ದೂರಿನ ಮೇರೆಗೆ ನಾಲ್ಕು ನಾಲ್ಕು ಭಾರಿ ಪರಿಶೀಲನೆ ನಡೆಸಿದೆ ಈ ಬಗ್ಗೆ ಅಧಿಕಾರಿಗಳಲ್ಲಿ ಕೇಳಿದರೆ ನಾವು ದೂರುದಾರರ ದೂರಿನ ಮೇರೆಗೆ ಪರಿಶೀಲನೆ ನಡೆಸುತ್ತಿದ್ದೆವೆ ಇದರಲ್ಲಿ ನಮ್ಮ ಹಿತಾಸಕ್ತಿಗಳೆನು ಇಲ್ಲ ಎಂದು ಹೇಳುತ್ತಾರೆ ಈ ದೂರು ಪರಿಶೀಲನೆಯ ಮದ್ಯ ಬಡ ಪಲಾನುಭವಿಗಳು ಬೆಸತ್ತು ಹೋಗಿರುವುದಂತು ಸತ್ಯ ಇಂದು ನಡೆದ ಮಾರಾಮಾರಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರು ರಕ್ತಪಾತಗಳಾಗುವುದು ನಿಶ್ಚಿತವಾಗಿತ್ತು ಅದ್ರಷ್ಟವಶಾತ ಯಾವುದೇ ಅವಘಡಗಳು ಸಂಬವಿಸಲಿಲ್ಲ ಈ ಎಲ್ಲಾ ಚಿತ್ರಣಗಳನ್ನು ಗಮನಿಸಿದರೆ ಇಲ್ಲಿ ನಿಡಿರುವ ದೂರು ಸಾಮಾಜಿಕ ಹಿತಾಸಕ್ತಿಯೋ ಅಥವಾ ವಯಕ್ತಿಕ ಹಿತಾಸಕ್ತಿಯೋ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಮನೆಮಾಡಿದೆ
ಈ ಸಂದರ್ಬದಲ್ಲಿ ದೋಣಿ ಪಡೆದ ಪಲಾನುಭವಿಯೊಬ್ಬರು ಮಾತನಾಡಿ ನಮಗೆ ಇಲಾಖೆಯ ಈ ಪರಿಶೀಲನೆ ತುಂಬ ತೊಂದರೆಯನ್ನು ನಿಡುತ್ತಿದೆ ನಾವು ಮೀನುಗಾರಿಕೆಯನ್ನೆ ನಂಬಿ ಬದುಕುವವರಾಗಿದ್ದೆವೆ ಇಲಾಖೆ ಒಂದು ದೋಣಿಯನ್ನು ನೀಡಿ ನಮಗೆ ಮಾನಸಿಕ ಹಿಂಸೆಯನ್ನು ನಿಡುತ್ತಿದೆ ನೀವು ನಮಗೆ ಈ ರೀತಿ ಹಿಂಸೆ ನೀಡುವ ಬದಲು ನೀವು ನೀಡಿರುವ ದೋಣಿ ಬಲೆಗಳನ್ನು ವಾಪಾಸ್ ತೆಗೆದುಕೊಳ್ಳಿ ನಮಗೆ ಮಾನಸಿಕ ಹಿಂಸೆ ನೀಡುವುದನ್ನು ನಿಲ್ಲಿಸಿ ಎಂದು ಆಕ್ರೋಶವನ್ನು ವ್ಯಕ್ತ ಪಡಿಸಿದರು
ಶುಕ್ರವಾರ ಮೀನುಗಾರಿಕಾ ಇಲಾಖೆ ಐದನೇ ಭಾರಿ ಪರಿಶೀಲನೆ ನಡೆಸಿದ್ದು ಈ ಸಂದರ್ಬದಲ್ಲಿ ಪಲಾನುಬವಿಯೋಬ್ಬರು ಅನಾರೋಗ್ಯದ ಕಾರಣ ಹಾಸಿಗೆ ಹಿಡಿದ್ದಿದ್ದು ಹಾಸಿಗೆಯಲ್ಲೆ ತನ್ನ ಮನೆಗೆ ಪರಿಶೀಲನೆಗಾಗಿ ಆಗಮಿಸಿದ ಅಧಿಕಾರಿಗೆ ತಾನು ದೋಣಿ ಪಡೆದುಕೊಂಡ ಫಲಾನುಭವಿಯಾಗಿದ್ದು ತನ್ನ ಮಗ ದೋಣಿಯ ವ್ಯವಹಾರ ನಡೆಸುತ್ತಿದ್ದಾನೆ ಎಂಬ ಹೇಳಿಕೆಯನ್ನು ಕೊಟ್ಟಿರುವುದು ಪ್ರಮುಖ ಸಂಗತಿಯಾಗಿರುತ್ತದೆ
ಒಟ್ಟಾರೆ ಈ ಭಾರಿ ತನಿಖೆಗೆ ಆಗಮಿಸಿದ ಅಧಿಕಾರಿಗಳಿಗೆ ಫಲಾನುಭವಿಗಳು ದೋಣಿಗಳ ಸಮರ್ಪಕ ಮಾಹಿತಿಗಳನ್ನು ನೀಡಿ ಇಲಾಖೆ ನೀಡಿರುವ ದೋಣಿ ಹಾಗು ಸಲಕರಣೆಗಳನ್ನು ತನಿಖಾದಿಕಾರಿಗಳಿ ಒದಗಿಸಿ ತನಿಖೆಗೆ ಸಹಕರಿಸಿದರು ಮೆಲ್ನೊಟಕ್ಕೆ ಪರಿಶಿಲನೆಗೆ ಬಂದ ಅಧಿಕಾರಿಗಳಿಗೆ ದೊಣಿಹಂಚಿಕೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂಬುದು ಕಂಡು ಬಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ ಇನ್ನು ಪರಿಶಿಲನಾ ಅಧಿಕಾರಿಗಳು ಯಾವ ಬಗೆಯಲ್ಲಿ ರಿಪೋರ್ಟ ಅನ್ನು ಇಲಾಖೆಗೆ ಸಲ್ಲಿಸುತ್ತಾರೆ ಎಂದು ಕಾದು ನೊಡಬೇಕಾಗಿದೆ