ಅಕ್ರಮ ಗೊ ಸಾಗಾಟ ತಡೆಗಟ್ಟುವಂತೆ ಬಿಜೆಪಿ ಮಂಡಳದ ವತಿಯಿಂದ  ಪ್ರತಿಭಟನೆ

ಭಟ್ಕಳ ತಾಲೂಕಿನಾಧ್ಯಂತ ಅಕ್ರಮಗೊ ಸಾಗಾಟ ನಿರಂತರವಾಗಿ ನಡೆಯುತ್ತಿದ್ದು ಕಾನೂನು ಬಾಹಿರ ಗೋ ಸಾಗಾಟವನ್ನು ಕೂಡಲೆ ನಿಲ್ಲಿಸುವ ನಿಟ್ಟಿನಲ್ಲಿ ಕಾನೂನು ಕ್ರಮ‌ ಕೈಗೊಳ್ಳುವಂತೆ ಭಟ್ಕಳ ಬಿಜೆಪಿ ಮಂಡಳದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ  ಸಹಾಯಕ‌ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು

ಶನಿವಾರವಾದ ಇಂದು ಭಟ್ಕಳ ಬಿಜೆಪಿ ಮಂಡಳದ ವತಿಯಿಂದ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮುಖಂಡರು   ತಾಲೂಕಿನ ಶಂಶುದೀನ್ ಸರ್ಕಲ್ ಮೂಲಕ ಅಕ್ರಮ ಗೋ ಸಾಗಾಟವನ್ನು ತಡೆಯುವಂತೆ ಒತ್ತಾಯಿಸಿ  ಪ್ರತಿಭಟನಾ ಮೇರವಣಿಗೆಯ ಮೂಲಕ ಬಂದು ಮಿನಿ ವಿಧಾನ ಸೌದದಲ್ಲಿ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು

ಈ ಸಂದರ್ಬದಲ್ಲಿ ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ ಮಾತನಾಡಿ ಭಟ್ಕಳ ತಾಲೂಕಿನಾಧ್ಯಂತ ಅಕ್ರಮ ಗೊ ಸಾಗಾಟ ಅವ್ಯಾಹತವಾಗಿ ನಡೆಯುತ್ತಿದ್ದು ಇದನ್ನು ಪೊಲಿಸ್ ಇಲಾಖೆ ಈ ಕೂಡಲೆ ತಡೆಗಟ್ಟ ಬೇಕು ಹಾಗೆ ಎಲ್ಲಾ ಚೆಕ್ ಪೊಷ್ಟಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು ಒಂದು ವೇಳೆ  ಗೊ ಸಾಗಣಿಕೆ ಗೋ ಹತ್ಯಗಳು ಮಂದುವರಿದಲ್ಲಿ ಬಿಜೆಪಿ ಮಂಡಳದ ವತಿಯಿಂದ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು‌.

ಈ ಸಂದರ್ಬದಲ್ಲಿ  ಮನವಿ ಸ್ವಿಕರಿಸಿದ ಸಹಾಯಕ ಆಯುಕ್ತರಾದ ಡಾ ನಯನಾ  ಅವರು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಹಾಗೆ  ಇಂದ ಚುನಾವಣಾ ನಿತಿಸಂಹಿತೆ ಜಾರಿಯಲ್ಲಿದ್ದು ಪ್ರತಿಭಟನೆ ನಡೆಸುವ ಪೂರ್ವದಲ್ಲಿ ಯಾವುದೇ ಅನುಮತಿ ತೆಗೆದು ಕೊಂಡಿರುವುದಿಲ್ಲ ಈ ಬಗ್ಗೆಯು ಕೂಡಾ ಪರಿಶಿಲನೆ ನಡೆಸಲಾಗುವುದು ಎಂದು ಹೇಳಿದರು

ಈ  ಸಂದರ್ಬದಲ್ಲಿ ಮಾಜಿ ಶಾಸಕ ಸುನಿಲ್ ನಾಯ್ಕ ಮಾಜಿ ಸೈನಿಕ‌ ಶ್ರೀಕಾಂತ ನಾಯ್ಕ    ಮತ್ತು  ಇನ್ನಿತರ  ಬಿಜೆಪಿ ಮುಖಂಡರು ಸದಸ್ಯರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top