ಆಕಸ್ಮಿಕ ಅವಘಡಕ್ಕೆ ಬಿಲಿಯಾದ ಮಂಜುನಾಥ ಮೊಗೇರ್
ಭಟ್ಕಳ: ತಾಲೂಕಿನ ಸೋಡಿಗದ್ದೆಯ ಮೊಗೇರಕೇರಿ ಕಡಲ ತೀರದ ಹಿನ್ನೀರಿನಲ್ಲಿ ಮೀನುಗಾರನೊಬ್ಬ ಮೀನುಗಾರಿಕೆ ಮಾಡುತ್ತಿರುವಾಗ ಬಲೆಯ ಹಗ್ಗ ಕುತ್ತಿಗೆಗೆ ಸಿಕ್ಕಿಕೊಂಡು ನೀರಿಗೆ ಬಿದ್ದು ಸಾವನಪ್ಪಿದ ಘಟನೆ ನಡೆದಿದೆ.
ಮಂಜುನಾಥ ವೆಂಕ್ಟ ಮೊಗೇರ (62) ಮೃತ ಮೀನುಗಾರ ಎಂದು ಗುರುತಿಸಲಾಗಿದ್ದು . ಬೆಳಕೆ ಮೊಗೇರಕೇರಿ ನಿವಾಸಿಯಾದ ಇವರು ಮಧ್ಯಾಹ್ನ 4 ಗಂಟೆಗೆ ತಮ್ಮ ಬಿಸು ಬಲೆಯೊಂದಿಗೆ ಬೆಳಕೆ ಹೊಳೆಯಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಬಲೆಯ ಕೈ ದಾರ ಆಕಸ್ಮಿಕವಾಗಿ ಕೊರಳಿಗೆ ಸುತ್ತಿಕೊಂಡು ನೀರಿಗೆ ಜಾರಿಬಿದ್ದು ಸಾವನಪ್ಪಿದ್ದಾರೆ.
ಪ್ರಕರಣ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮುಂದುವರಿದಿದೆ