ಮಹಾರಾಷ್ಟ್ರ ಪುಣೆಯಲ್ಲಿ ನಡೆದ ಚಿಲ್ಡ್ರನ್ ಮತ್ತು ಕ್ಯಾಡೆಟ್ಸ್ ವಾಕೋ ಇಂಡಿಯಾ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಮೂರು ಚಿನ್ನ ಮತ್ತು ಒಂದು ಕಂಚಿನ ಪದಕಗಳು.
ದಿನಾಂಕ: 21-05-2024 ರಿಂದ 26-05-2024 ರ ತನಕ ಪುಣೆಯ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜ ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ದೇಶದ 32 ರಾಜ್ಯಗಳಿಂದ ಕಿಕ್ ಬಾಕ್ಸಿಂಗ್ ಪಟುಗಳು ಭಾಗವಸಿದ್ದರು.
ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ ನಮ್ಮ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕಿಕ್ ಬಾಕ್ಸಿಂಗ್ ಪಟುಗಳಾದ
7 ರಿಂದ 9 ವರ್ಷ ವಯೋಮಿತಿಯ ಬಾಲಕಿಯರ -18kg ಪಾಯಿಂಟ್ ಪೈಟ್ ವಿಭಾಗದಲ್ಲಿ ಧನ್ವಿತಾ ವಾಸು ಮೊಗೇರ ಚಿನ್ನದ ಪದಕ
-18kg ಲೈಟ್ ಕಾಂಟ್ಯಾಕ್ಟ್ ವಿಭಾಗದಲ್ಲಿ ಪ್ರಣವಿ ರಾಮಚಂದ್ರ ಕಿಣಿ ಚಿನ್ನದ ಪದಕ
ಅವನಿ ಸೂರಜ್ ರಾವ್ ಮ್ಯೂಸಿಕಲ್ ಫಾರ್ಮ್ ಹಾರ್ಡ್ ಸ್ಟೈಲ್ ನಲ್ಲಿ ಚಿನ್ನದ ಪದಕ
ಬಾಲಕರ -24ಕೆಜಿ ವಿಭಾಗದ ಪಾಯಿಂಟ್ ಫೈಟ್ ನಲ್ಲಿ ಮೊಹಮ್ಮದ್ ರಯ್ಯಾನ್ ಐದನೇ ಸ್ಥಾನ
10-13 ವರ್ಷ ವಯೋಮಾನದ ಬಾಲಕರ -32ಕೆಜಿ ವಿಭಾಗದಲ್ಲಿ ನಯಿಮ್ ಅಹ್ಮದ್ ಗಂಗಾವಳಿ ಕಂಚಿನ ಪದಕ
-28ಕೆಜಿ ವಿಭಾಗದಲ್ಲಿ ಮೊಹಮ್ಮದ್ ಮುಸ್ತಾಫೀಜ್ ಕೋಲಾ 17ನೇ ಸ್ಥಾನ
13-15 ವರ್ಷ ವಯೋಮಾನದ -42ಕೆಜಿ ವಿಭಾಗದಲ್ಲಿ ನಿಹಾಲ್ ಹಸನ್ ಸಾದ ಒಂಬತ್ತನೇ ಸ್ಥಾನ
-63ಕೆಜಿ ವಿಭಾಗದಲ್ಲಿ ಮೊಹಮ್ಮದ್ ಸಲಾಹ ಐದನೇ ಸ್ಥಾನ
ಈ ಎಲ್ಲಾ ಪಟುಗಳಿಗೆ ವಾಕೊ ಕರ್ನಾಟಕ ರಾಜ್ಯ ಕಿಕ್ ಬಾಕ್ಸಿಂಗ್ ನ ಅಧ್ಯಕ್ಷರಾದ ಸಂತೋಷ ಕೆ ಮತ್ತು
ಪ್ರಧಾನ ಕಾರ್ಯದರ್ಶಿಯಾದ ಪೂಜಾ ಹರ್ಷ ಹಾಗೂ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗಿನ ಕೋಚ್ ರಾದ ಹರ್ಷ ಶಂಕರ್ ಉತ್ತರಕನ್ನಡ ಜಿಲ್ಲೆಯ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಈಶ್ವರ ನಾಯ್ಕ ಮತ್ತು ನಾಗಶ್ರೀ ಮಾರ್ಷಲ್ ಆರ್ಟ್ಸ್ ನ ಕಿಕ್ ಬಾಕ್ಸಿಂಗ್ ನ ಕೋಚ್ ರಾದ ನಾಗಶ್ರೀ ನಾಯ್ಕ ಮತ್ತು ಏಲೀಯನ್ಸ್ ಮಾರ್ಷಲ್ ಆರ್ಟ್ಸ್ ನ ಕೋಚ್ ರಾದ ಇಸ್ಮಾಯಿಲ್, ರೇವೊಲ್ಯೂಷನ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಕೋಚ್ ಜುಹೆಬ್, ಅಕ್ಫಾ ಅಕಾಡೆಮಿಯ ಕೋಚ್ ಅಮರ್ ಶಾಬಂದ್ರಿ ಅಭಿನಂದನೆಯನ್ನು ತಿಳಿಸಿದ್ದಾರೆ..