ಕೊಟ್ಟಿಗೆಯಿಂದಲೆ ಜಾನುವಾರುವನ್ನು ಹೊತ್ತೊಯ್ದ ಚಿರತೆ

ಆತಂಕದಲ್ಲಿ ರೈತ ಕ್ರಮಕ್ಕೆ ಮುಂದಾದ ಅರಣ್ಯ ಇಲಾಖೆ

ಭಟ್ಕಳ: ರಾತ್ರಿ ವೇಳೆ ಕೊಟ್ಟಿಗೆಗೆ ನುಗ್ಗಿದ ಚಿರತೆಯೊಂದು ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರನ್ನು ಹೊತ್ತೊಯ್ದ ಘಟನೆ ಮಾರುಕೇರಿಯ ಪಂಚಾಯತ ವ್ಯಾಪ್ತಿಯ ಹೂತ್ಕಳದಲ್ಲಿ ನಡೆದಿದೆ.

ಕೃಷ್ಣ ದುರ್ಗಪ್ಪ ನಾಯ್ಕ ಎನ್ನುವವರಿಗೆ ಸೇರಿದ ಜಾನುವಾರು ಆಗಿದೆ. ಶುಕ್ರವಾರ ಬೆಳಗಿನ ಜಾವ ಈ ಘಟನೆ ನಡೆದಿದೆ ಎನ್ನಲಾಗಿದೆ. ಶುಕ್ರವಾರ ಬೆಳ್ಳಿಗ್ಗೆ ತಾಯಿ ಕಳೆದುಕೊಂಡ ಕರು ಕೂಗುತ್ತಿರುವುದನ್ನು ಗಮನಿಸಿದ ಮಾಲೀಕ ಕೊಟ್ಟಿಗೆಗೆ ಬಂದು ನೋಡಿದಾಗ ಕೊಟ್ಟಿಯಲ್ಲಿ ಜಾನುವಾರು ಇಲ್ಲದೆ ಇರುವುದನ್ನು ನೋಡಿ ಸುತ್ತ ಮುತ್ತ ಹುಡುಕಾಡಿದ್ದಾರೆ ಬಳಿಕೆ ಅಲ್ಲೇ ಸ್ವಲ್ಪ ದೂರದಲ್ಲಿ ಚಿರತೆ ಅರ್ಧಂಬರ್ಧ ತಿಂದು ಬಿಟ್ಟ ಜಾನುವಾರು ಮೃತ ದೇಹ ಪತ್ತೆಯಾಗಿದೆ . ಬಳಿಕ ಸುದ್ದಿ ತಿಳಿದು ಮಾರುಕೇರಿ ಪಂಚಾಯತ ಅಧ್ಯಕ್ಷೆ ನಾಗವೇಣಿ ಗೊಂಡ ಹಾಗೂ ಉಪಾಧ್ಯಕ್ಷ ಎಂ.ಡಿ ನಾಯ್ಕ ಭೇಟಿ ನೀಡಿದ್ದಾರೆ.

ಸ್ತಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

WhatsApp
Facebook
Telegram
error: Content is protected !!
Scroll to Top