ಸಿದ್ದಾಪುರ:- ತಾಲೂಕಿನಾದ್ಯಂತ ಗೌರಿ-ಗಣೇಶ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕಳೆದ ಎರಡು ವರ್ಷಗಳಿಂದ ಕೊರೋನ ಮಹಾಮಾರಿಯ ಕಾರಣದಿಂದಾಗಿ ಸಾರ್ವಜನಿಕರಲ್ಲಿ ಹಬ್ಬದ ಸಂಭ್ರಮ ಇಲ್ಲದಾಗಿತ್ತು. ಈ ವರ್ಷ ಪಟ್ಟಣದ , ಗಲ್ಲಿ ಗಲ್ಲಿಯೂ, ಪ್ರತಿ ಹಳ್ಳಿಯಲ್ಲಿ ಯೂ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪ್ರತಿ ಕೊರೋನಾ, ಅನಾವೃಷ್ಠಿ ಯಂತಹ ವಿನಾಶಕ ಸಂಕಷ್ಟ ಗಳು ಬಾರದಿರಲೆಂದು ಪ್ರಾರ್ಥಿಸಿದರು. ಗೌರಿ ಹಬ್ಬ ಹೆಣ್ಣುಮಕ್ಕಳ ಹಬ್ಬ.
ಹೆಣ್ಣು ಮಕ್ಕಳ ಸಂಭ್ರಮಕಂತೂ ಪಾರವೇ ಇರಲಿಲ್ಲ. ಕಳೆದೇರಡು ವರ್ಷಗಳಲ್ಲಿ ಕೆಲವರು ಹಬ್ಬಕ್ಕೆ ತಾಯಿ ಮನೆಗೆ ಹೊಗಿರಲಿಲ್ಲ. ಹೋದವರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡು ಹರಟೆ ಹೊಡೆಯಲಾಗಲಿಲ್ಲ. ಆದರೆ ಈ ವರ್ಷ ಕೇರಿಗಳ ಎಲ್ಲ ಹೆಣ್ಣು ಮಕ್ಕಳು ಒಟ್ಟಿಗೆ ಸೇರಿ ಗೌರಿ ತಂದು ಪೂಜಿಸಿದರು. ಎಲ್ಲರೂ ಒಟ್ಟಿಗೆ ಸೇರಿ ಗೌರಿ ತುಂಬಿ ಸಂಭ್ರಮಿಸಿದರು. ಮತ್ತೆ ಹಳೆಯ ಸಂಕಷ್ಟ ದ ಪರಿಸ್ಥಿತಿ ಮರುಕಳಿಸದಿರಲಿ ಎಂದು ಬೇಡಿಕೊಂಡರು.
ತಾಲೂಕಿನ ಕಡಕೇರಿಯಲ್ಲಿ ಮಹಿಳೆಯರು ಒಟ್ಟಿಗೆ ಸೇರಿ ಗೌರಿ ತುಂಬಿ ಸಂಭ್ರಮಿಸಿದ ಕ್ಷಣ.
ಸಿದ್ದಾಪುರ ತಾಲೂಕಿನಾದ್ಯಂತ ವಿಜೃಂಭಣೆಯಿಂದ ಗೌರಿ- ಗಣೇಶ ಹಬ್ಬದ ಆಚರಣೆ
WhatsApp
Facebook
Telegram